Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಸ್ಲಿಂ ವ್ಯಕ್ತಿಯಿಂದ ಅಂಭಾದೇವಿ ಮಂದಿರ

ಸುದ್ದಿಮೂಲವಾರ್ತೆ

ಕೊಪ್ಪಳ,ಆ.29:ಅವ್ರು ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿ... ಇನ್ನೂ ವೀಕಲಚೇತನರಾದ ಇವ್ರು ಪಂಚರ್ ಹಾಕಿ ಜೀವನ ಮಾಡ್ತಿದ್ರು.. ಇದೀಗ ಅವರು ಮಾಡುವ ಕಾರ್ಯಕ್ಕೆ ಇಡೀ ಆ ಗ್ರಾಮದಲ್ಲಿ ಭಾವೈಕ್ಯ ಮೂಡಿದೆ..ಇನ್ನೂ ಹಿಂದೂ ದೇವಾಲಯ ಕಟ್ಟಿಸಿರೋ ಅವರು ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯ ಸಂದೇಶ ಸಾರಿದ್ದಾರೆ.

ಹಿಂದೂ ದೇವಾಲಯ- ದರ್ಗಾ ಕಟ್ಟಿಸಿ ಪೂಜೆ ಸಲ್ಲಿಸುತತ್ತಿದ್ದಾರೆ. ಅವರು ಹಿಂದೂ ಸಂಪ್ರದಾಯದಂತೆ ಮಹಿಳೆಯರ ಪಾದ ಪೂಜೆ ಮಾಡಿದರು. ಇದರಿಂದಾಗಿ ಮುಸ್ಲಿಂ ಸಮುದಾಯದ ವ್ಯಕ್ತಿಯ ಭಾವೈಕ್ಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊಪ್ಪಳ ಜಿಲ್ಲೆಯ ಹಿಟ್ನಾಳ ಗ್ರಾಮದಲ್ಲಿ ಇಂಥಹ ಭಾವೈಕ್ಯ ಸಂದೇಶ ಸಾರುತ್ತಿರುವವರು ಅಬ್ಬುಸಾಹೇಬ ಎಂಬುವವರು. ಅಪ್ಪಸಾಹೇಬ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದವರು. ಇವರು ಹುಟ್ಟಿನಿಂದ ವೀಕಲಚೇತನರಾಗಿದ್ದಾರೆ. ಇನ್ನೂ ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೇಲ್ಲಾರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದವರು.

,ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಚರ್ ಶಾಪ್ ಇಟ್ಟುಕೊಂಡು ಜೀವನ ಮಾಡ್ತಾರೆ. ಅಲ್ಲಿಯೂ ಸಹ ಭಾವೈಕ್ಯ ಸಂದೇಶ ಸಾರುತ್ತಾ ಜೀವನ ಮಾಡ್ತಾರೆ. ಆದರೆ ಅದೊಂದು ದಿನ ಇವರ ಕನಸಿನಲ್ಲಿ ಅಂಬಾದೇವಿ ಬರ್ತಾಳಂತೆ. ಇದ್ರಿಂದ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಹಿಟ್ನಾಳ ಗ್ರಾಮದಲ್ಲಿ ಒಂದೇ ಆವರಣದಲ್ಲಿ ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸ್ತಾ ಇದ್ದಾರೆ ಅಬ್ಬುಸಾಹೇಬ. ಪ್ರತಿದಿನ ಅಂಬಾದೇಬಿ ಹಾಗೂ ಹೊನ್ನೂರಲಿ ದರ್ಗಾಕ್ಕೆ ಇವರೇ ಪೂಜೆ ಮಾಡ್ತಾ ಇದ್ದು, ದೇವಸ್ಥಾನಕ್ಕೆ ಬಹಳಷ್ಟು ಭಕ್ತರು ಬರ್ತಾ ಇದ್ದಾರೆ.

ಇನ್ನೂ ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ. ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರಲೇಲ್ಲಾರೂ 15 ದಿನಗಳಲ್ಲಿಯೇ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ.

ಯಾವುದೇ ಅಪೇಕ್ಷೆ ಇಲ್ಲದೆ ಪೂಜೆ ಮಾಡ್ತಿರೋ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಅಂತಾರೆ.‌ಈ ಕಾರಣಕ್ಕಾಗಿ ಇಲ್ಲಿಗೆ ಬರೋ ಜನ ದರ್ಗಾ ಹಾಗೂ ದೇವಸ್ಥಾನಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ಹಿಂದೂ ಸಂಪ್ರದಾಯದಂತೆ ಕುಂಕುಮ ಹಚ್ಚುವ ಇವ್ರು, ಹತ್ತು ಹಲವಾರು ಮಂತ್ರಗಳನ್ನು ಪಠಿಸುವುದರ ಮೂಲಕ ದೇವಿಗೆ ಪೂಜೆಗೆ ಸಲ್ಲಿಸುವುದು ವಿಶೇಷವಾಗಿದೆ.

ಇವರ ಭಾವೈಕ್ಯತಾ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಒಟ್ನಲ್ಲಿ ಜಾತಿ-ಧರ್ಮ ಅಂತಾ ಜಗಳವಾಡೋ ಜನ್ರು ಮಧ್ಯೆ ಅಬ್ಬುಸಾಹೇಬ ಅವರ ಭಾವೈಕ್ಯತಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ.. ಇವರ ಕಾರ್ಯ ಇನ್ನೂಷ್ಟು ಜನರಿಗೆ ಮಾದರಿಯಾಗಲಿ ಅನ್ನೋದೆ ಎಲ್ಲರ ಆಶಯವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ