ಸುದ್ದಿಮೂಲ ವಾರ್ತೆ ಕವಿತಾಳ, ಜ.21:
ಪಟ್ಟಣದ ವಿವಿಧೆಡೆ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.
ಇಲ್ಲಿನ ಪಟ್ಟಣ ಪಂಚಾಯತಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖಂಡ ತಿಪ್ಪಯ್ಯ ಸ್ವಾಾಮಿ ಅವರು ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕಿರಲಿಂಗಪ್ಪ ಮಾತನಾಡಿ ವಚನಗಳ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆ ಅಪಾರ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳಬೇಕು, ಸರಕಾರ ಸಮಾಜದ ಅಭಿವೃದ್ದಿಗೆ ಹೆಚ್ಚಿಿನ ಅನುದಾನ ನೀಡುವ ಮೂಲಕ ಸಹಾಯ ಒದಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಹುಲುಗಪ್ಪ, ರಮೇಶ ನಗನೂರು, ನಾಮ ನಿರ್ದೇಶಿತರಾದ ಅಯ್ಯಪ್ಪ ನೀಲೊಗಲ್, ಮೌನೇಶ ನಾಯಕ, ಮಾಜಿ ಸದಸ್ಯರಾದ ಗಂಗಪ್ಪ ದಿನ್ನಿಿ, ಮೌನೇಶ ಹಿರೇಕುರಬರು, ಮೌನೇಶ ಪೂಜಾರಿ, ಮುಖಂಡರಾದ ಕರಿಯಪ್ಪ ಅಡ್ಡೆೆ, ನಿವೃತ್ತ ಎ ಎಸ್ ಐ ಈರಣ್ಣ, ಮೌನೇಶ ಕೊಡ್ಲಿಿ, ಈರಣ್ಣ ಕೆಲಗೇರಿ, ಹನುಮಂತ ಬುಳ್ಳಾಾಪುರು, ಚಂದಪ್ಪ, ರಫಿ ಒಂಟಿಬಂಡಿ, ಹನುಮಂತ ಕಬ್ಬೆೆರ, ಅಮರೇಶ ಕಬ್ಬೆೆರ, ಶಿವಪ್ಪ ದಿನ್ನಿಿ, ರಮೇಶ ಇರಬಗೆರಿ, ಮೌನೇಶ ಸೈಕಲ್ ಅಂಗಡಿ, ಹನುಮಂತ ಅರಕೇರಿ, ಹುಚ್ಚಪ್ಪ ಬುಳ್ಳಾಾಪುರು, ಸಿಬ್ಬಂದಿ ರಾಘವೇಂದ್ರ ಮುತ್ತಲಿಕ್, ಪ್ರಶಾಂತಕುಮಾರ ಇನ್ನಿಿತರರು ಇದ್ದರು.