ಅಜ್ಜಿ ತಿಥಿಕಾರ್ಯದ ವೇಳೆ ಘಟನೆ
ಮಗಳನ್ನು ರಕ್ಷಿಸಲು ಹೋದ ಪೋಷಕರೂ ನೀರುಪಾಲು
ಅಜ್ಜಿ ತಿಥಿಕಾರ್ಯದ ವೇಳೆ ಘಟನೆ
ಮೈಸೂರು,ಅ.1: ಒಂದೇ ಕುಟುಂಬದ ಮೂವರು ನೀರು ಪಾಲಾದ ದಾರುಣ ಘಟನೆಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಪ್ಪ ಮಹಮ್ಮದ್ ಕಪೀಲ್ (42 ), ಅಮ್ಮ ಶಾವರ ಭಾನು (35 ), ಪುತ್ರಿ ಶಾಹೀರಾ ಭಾನು (20) ಮೃತ ದುರ್ದೈವಿಗಳು. ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ಪುತ್ರಿಯನ್ನು ರಕ್ಷಿಸಲು ಹೋಗಿ ಅಪ್ಪ, ಅಮ್ಮನೂ ಸಾವನ್ನಪ್ಪಿದ್ದಾರೆ.
ಅಜ್ಜಿಯ ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆದುಕೊಳ್ಳುವಾಗ ಶಾಹೀರಾಭಾನು ಮೊದಲಿಗೆ ಕಾಲು ಜಾರಿ ಬಿದ್ದಿದ್ದಾರೆ. ಇದನ್ನು ನೋಡಿದ ತಂದೆ ಮಹಮ್ಮದ್ ಕಪೀಲ್ ಮತ್ತು ತಾಯಿ ಶಾವರಭಾನು ರಕ್ಷಣೆಗೆ ನಾಲೆಗಿಳಿದಿದ್ದಾರೆ.ಆದರೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಮೂವರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಸರಗೂರು ಠಾಣೆ ಪೊಲೀಸರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ, ನಾಲೆಯಿಂದ ಮೂವರ ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ.ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.