Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪ್ರಗತಿಯಲ್ಲಿ ಮಠ ಮಾನ್ಯಗಳ ಕೊಡುಗೆ ಅನನ್ಯ : ಸಚಿವ ಖಂಡ್ರೆ

ಸುದ್ದಿಮೂಲ ವಾರ್ತೆ ಭಾಲ್ಕಿ, ಜ.24:
ರಾಜ್ಯದ ಪ್ರಗತಿಯಲ್ಲಿ ಮಠ ಮಾನ್ಯಗಳ ಕೊಡುಗೆ ಅನನ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಹೇಳಿದರು.
ತಾಲೂಕಿನ ಭಾತಂಬ್ರಾಾ ಗ್ರಾಾಮದ ಜಗದ್ಗುರು ನಿರಂಜನ ಸಂಸ್ಥಾಾನ ಮಠದ ಪರಿಸರದಲ್ಲಿ ಡಾ.ಗುರುಬಸವ ದೇಶಿಕರ ಪಟ್ಟಾಾಭಿಷೇಕ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಬಸವ ದರ್ಶನ ಪ್ರವಚನ ಮಂಗಲೋತ್ಸವ ಮತ್ತು ಜಗದ್ಗುರು ಶಿವಯೋಗೀಶ್ವರ ಸ್ವಾಾಮೀಜಿ ಅವರ 85ನೇ ಗುರುವಂದನೆ ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಜಾಗೃತಿ ಮೂಡಿಸಲು ಮಠಗಳು ತಮ್ಮದೇ ಆದ ಪಾತ್ರ ವಹಿಸುತ್ತಿಿವೆ. ಅದರಲ್ಲಿ ವಿಶೇಷವಾಗಿ ವೀರಶೈವ-ಲಿಂಗಾಯತ ಮಠಗಳ ಕೊಡುಗೆ ಹಿರಿದಾಗಿದೆ. ಬಡವರು, ದುರ್ಬಲರು, ನಿರಾಶ್ರಿತರು, ನಿರ್ಗತಿಕರಿಗೆ ಮಠಗಳು ಅನ್ನ, ಅಕ್ಷರ, ಆಶ್ರಯ ಕಲ್ಪಿಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿಿವೆ ಎಂದರು.
ಸಾನ್ನಿಿಧ್ಯ ವಹಿಸಿದ್ದ ಜಗದ್ಗುರು ಶಿವಯೋಗೀಶ್ವರ ಸ್ವಾಾಮೀಜಿ ಮಾತನಾಡಿ, ಸುಂದರ ಸಮಾಜ ನಿರ್ಮಾಣವಾಗಬೇಕು, ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕು ಎನ್ನುವ ಆಶಯ ತಮ್ಮದ್ದಾಗಿದ್ದು ಆ ನಿಟ್ಟಿಿನಲ್ಲಿ ಸಮಾಜದಲ್ಲಿ ಕೈಲಾದಷ್ಟು ಒಳ್ಳೆೆಯ ಕೆಲಸ ಮಾಡುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಅನುಭಾವ ನೀಡಿದರು.
ಹಾರಕೂಡ ಸಂಸ್ಥಾಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು, ಹುಲಸೂರು ಗುರುಬಸವೇಶ್ವರ ಸಂಸ್ಥಾಾನ ಮಠದ ಶಿವಾನಂದ ಸ್ವಾಾಮೀಜಿ, ಡಾ.ಗುರುಬಸವ ದೇಶಿಕರು, ಬಸವಾಂಜಲಿ ತಾಯಿ ಸಮ್ಮುಖ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಅರಣ್ಯ ಅಭಿವೃದ್ಧಿಿ ನಿಗಮದ ಉಪಾಧ್ಯಕ್ಷ ಹಣಮಂತರಾವ ಚವ್ಹಾಾಣ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ, ಅರ್ಬನ್ ಬ್ಯಾಾಂಕ್ ಅಧ್ಯಕ್ಷ ಶಿವಕುಮಾರ ಕಲ್ಯಾಾಣೆ, ಪಿಎಸ್‌ಐ ಅಶೋಕ ಪಾಟೀಲ್, ಹಿರಿಯ ಮುಖಂಡ ಅಪ್ಪಾಾಸಾಬ ದೇಶಮುಖ, ಯುವ ಮುಖಂಡ ವಿಲಾಸ ಮೋರೆ, ನಿವೃತ್ತ ಉಪನ್ಯಾಾಸಕ ಡಾ.ವೈಜಿನಾಥ ಭಂಡೆ, ಡಿವೈಎಸ್ಪಿಿ ಶಿವಾನಂದ ಪವಾಡಶೆಟ್ಟಿಿ, ರಾಚಪ್ಪ ಗೋರ್ಟೆ, ಗ್ರಾಾಪಂ ಅಧ್ಯಕ್ಷ ಮಹಾಂತೇಶ ಪಾಟೀಲ್, ಶ್ರೀಕಾಂತ ಭೋರಾಳೆ, ಕಾಶಿನಾಥ ಲದ್ದೆ ಸೇರಿದಂತೆ ಹಲವರು ಇದ್ದರು.
ಮಹಿಳಾ ಗೋಷ್ಠಿಿ
ಶನಿವಾರ ಬೆಳಿಗ್ಗೆೆ 10.30 ಗಂಟೆಗೆ ಕೌಟಂಬಿಕ ಸಾಮರಸ್ಯ ಕುರಿತು ಮಹಿಳಾ ಗೋಷ್ಠಿಿ ನೆರವೇರಿತು. ಕೂಡಲಸಂಗಮ ಬಸವಧರ್ಮ ಪೀಠದ ಡಾ.ಮಾತೆ ಗಂಗಾದೇವಿ ಅವರು ಸಾನ್ನಿಿಧ್ಯ ವಹಿಸಿ ಕೌಟಂಬಿಕ ವಿಷಯ ಕುರಿತು ಮಾತನಾಡಿದರು. ಹಲಬರ್ಗಾ ಶರಣಗಿರಿ ಮಹಾಮಠದ ಮಹಿಳಾ ಪೀಠಾಧ್ಯಕ್ಷೆ ಮಾತೆ ಬಸವಾಂಜಲಿ ತಾಯಿ ನೇತೃತ್ವ ವಹಿಸಿದ್ದರು. ಬಸವಕಲ್ಯಾಾಣ ಹರಳಯ್ಯನವರ ಗವಿ ಅಧ್ಯಕ್ಷೆ ಡಾ.ಗಂಗಾಅಂಕೆ ಅಕ್ಕೆೆ ಗೋಷ್ಠಿಿ ಉದ್ಘಾಾಟಿಸಿ ಮಾತನಾಡಿದರು. ಕಸಾಪ ರಾಜ್ಯ ಮಹಿಳಾ ಪ್ರತಿನಿಧಿ ಮಲ್ಲಮ್ಮ ಆರ್ ಪಾಟೀಲ್ ಬಸವ ಗುರುವಿನ ಪೂಜೆ ನೆರವೇರಿಸಿದರು. ಶಿವಗಂಗಾ ರುಮ್ಮಾಾ ಅನುಭಾವ ನೀಡಿದರು. ಡಾ.ಗುರಮ್ಮಾಾ ಸಿದ್ಧಾಾರೆಡ್ಡಿಿ ಕುಮಾರೇಶ್ವರನ ಪೂಜೆ ನೆರವೇರಿಸಿದರು. ಅಕ್ಕಮಹಾದೇವಿ ತಾಯಿ, ನಟಿ ಸುಲಕ್ಷಾ, ಆರತಿ ಪಾತ್ರೆೆ ಸೇರಿದಂತೆ ಹಲವರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ