Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಣ ಹೆಂಡ ಕುಡಿಸುವ ಪರಿಪಾಠ ನಮ್ಮ ಪಕ್ಷದಲ್ಲಿಲ್ಲ: ಅನ್ಬುರಾಜ್

ಸುದ್ದಿಮೂಲ ವಾರ್ತೆ

ಆನೇಕಲ್, ಮೇ 5: ಚುನಾವಣೆಯಲ್ಲಿ ಹಣ ಹಂಚುವ ಹಾಗೂ ಹೆಂಡ ಕುಡಿಸುವ ಪರಿಪಾಠ ನಮ್ಮ ಪಕ್ಷದಲ್ಲಿ ಇಲ್ಲ. ಸಾತ್ವಿಕ ರೀತಿಯಲ್ಲಿ ತತ್ವ ಸಿದ್ಧಾಂತಗಳ ಮೂಲಕ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಭ್ಯರ್ಥಿ ಅನ್ಬುರಾಜ್ ಹೇಳಿದರು.

ಅತ್ತಿಬೆಲೆಯಲ್ಲಿ ಮತಯಾಚನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಭ್ರಷ್ಟ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್ ಪಕ್ಷಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಹಣ ಕೊಳ್ಳೆ ಹೊಡೆಯುವುದು, ಧರ್ಮಗಳ ನಡುವೆ ಕಲಹ ತಂದಿಡುವುದು, ಜಾತಿ ರಾಜಕಾರಣ ಮಾಡುವುದು ಆ ಪಕ್ಷಗಳ ಕೆಲಸವಷ್ಟೆ. ಇವರಿಗೆ ಜನರ ಕಷ್ಟಸುಖಗಳು ಅರ್ಥವಾಗುವುದಿಲ್ಲ. ಆದರೆ ಕೆಆರ್‌ಎಸ್‌ ಪಕ್ಷ ಆಗಲ್ಲ. ಜನಸಾಮಾನ್ಯರ ಪಕ್ಷವಾಗಿದ್ದು ಭ್ರಷ್ಟಾಚಾರವನ್ನು ಹತ್ತಿಕ್ಕಲು, ರೈತರ ಭವಣೆ ನೀಗಿಸಲು ಕೆ.ಆರ್.ಎಸ್ ಪಕ್ಷವನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ತಾಲ್ಲೂಕು ಉಪಾಧ್ಯಕ್ಷ ಮುರಳಿ ರೆಡ್ಡಿ ಮಾತನಾಡಿ, ಇಲ್ಲಿನ ಅಭ್ಯರ್ಥಿ ಅನ್ಬುರಾಜ್ ಅವರು ಮಾಜಿ ಸೈನಿಕರಾಗಿದ್ದಾರೆ. ಪ್ರಾಮಾಣಿಕ ಹಾಗೂ ಸರಳ ವ್ಯಕ್ತಿ. ಹಲವಾರು ಜನೋಪಯೋಗಿ ಕೆಲಸಗಳನ್ನು ಮಾಡಿ ಜನರ ಮನಸ್ಸಿನಲ್ಲಿ ಉಳಿಯುವಂತೆ ಮಾಡುತ್ತಾರೆ. ಆನೇಕಲ್ ತಾಲೂಕಿನ ಸರ್ವಾಂಗೀಣ ಪ್ರಗತಿಗೆ ಅವರ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ ಎಂದು ತಿಳಿಸಿದರು.

ಈ ರೀತಿಯ ಸರಳ ವ್ಯಕ್ತಿಗೆ ನಿಮ್ಮ ಮತದ ಅವಶ್ಯಕತೆ ಇದ್ದು, ಬಸವಣ್ಣನ ಕಲ್ಯಾಣ ಕರ್ನಾಟಕ, ಕುವೆಂಪು ಅವರ ಸರ್ವೋದಯ ಕರ್ನಾಟಕ ನಿರ್ಮಾಣಕ್ಕೆ ಅಭ್ಯರ್ಥಿ ಅನ್ಬುರಾಜ್ ರವರನ್ನ ಗೆಲ್ಲಿಸಬೇಕೆಂದು ಮತದಾರರಲ್ಲಿ ಮುರಳಿ ರೆಡ್ಡಿ ಮನವಿ ಮಾಡಿದರು.

ಈ ವೇಳೆ ಸೋಮಶೇಖರ್, ಸುಧಾ, ಶಶಿಕಲಾ, ಪದ್ಮ, ಧನಲಕ್ಷ್ಮಿ, ಶಿವಕುಮಾರ್ ಸ್ವಾಮಿ ಹಾಗು ಆನೇಕಲ್ ಕ್ಷೇತ್ರದ ಕೆಆರ್‌ಎಸ್ ಪಕ್ಷದ ಸೈನಿಕರು ಹಾಜರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ