Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಎರಡು ವರ್ಷದಿಂದ ಬಾಗಿಲು ಹಾಕಿದ್ದ ಅರೇಹಳ್ಳಿ ಶಾಲೆ ಪುನಾರಂಭ

ಹೊಸಕೋಟೆ, ಜು 21 : ಅರೇಹಳ್ಳಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮುಚ್ಚಿದ್ದ ಸರಕಾರಿ ಶಾಲೆ ಕುರಿತು ಜು.20 ರಂದು ಸುದ್ದಿಮೂಲ ಪ್ರಕಟಿಸಿದ ವಿಶೇಷ ವರದಿಯಿಂದ ಎಚ್ಚೆತ್ತ ಶಿಕ್ಷಣ ಇಲಾಖೆ ಶಾಲೆ ಪುನಾರಂಭಿಸಿದೆ .

ಮಕ್ಕಳ ಕೊರತೆಯೆಂದು ಶಾಲೆಯನ್ನು 2 ವರ್ಷಗಳ ಕಾಲ ಮುಚ್ಚಿದ್ದ ಬಗ್ಗೆ ಜು.20 ರಂದು 'ಮಕ್ಕಳ ಕೊರತೆ ನೆಪವೊಡ್ಡಿ ಮುಚ್ಚಿದ ಅರೇಹಳ್ಳಿ ಶಾಲೆ ಎಂಬ ಶೀರ್ಷಿಕೆಯಡಿ 'ಸುದ್ದಿಮೂಲ ' ವಿಶೇಷ ವರದಿ ಪ್ರಕಟಿಸಿತ್ತು.

ಸುದ್ದಿಮೂಲ ವರದಿಯಿಂದ ಎಚ್ಚೆತ್ತ ಬಿಇಒ, ಗ್ರಾಮಕ್ಕೆ ಭೇಟಿ ಕೊಟ್ಟು ಪೋಷಕರ ಅಹವಾಲು ಆಲಿಸಿ, ಸಮೀಪದ ಶಾಲಾ ಶಿಕ್ಷಕರನ್ನು ನಿಯೋಜಿಸಿ, ಬೇರೆ ಬೇರೆ ಶಾಲೆಗಳಿಗೆ ದಾಖಲಾಗಿರುವ ಮಕ್ಕಳನ್ನು ಕರೆ ತಂದು, ಶಾಲಾ ಆವರಣ ಶುಚಿಗೊಳಿಸಲು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೂಚಿಸಿದರು.

ಶಾಲೆಯನ್ನು ಬಾಳೆಕಂದು, ಮಾವಿನ ತೋರಣ, ರಂಗೋಲಿ ಬಿಡಿಸಿ, ಹೂಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ಮೂಡಿಸಲಾಗಿತ್ತು. ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ನಾಲ್ವರು ವಿದ್ಯಾರ್ಥಿಗಳಿಗೆ ಸಿಹಿ ನೀಡಿ ಅತ್ಮೀಯವಾಗಿ ಸ್ವಾಗತ ಕೋರಿದರು. ಮಕ್ಕಳಿಂದಲೇ ಟೇಪ್ ಕತ್ತರಿಸಿ, ಶಾರದಾದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಲೆಯೊಳಗೆ ಕರೆ ತಂದರು.

ಶಿಕ್ಷಕಿಯ ವೈಯಕ್ತಿಕ ಹಿತಾಸಕ್ತಿಯಿಂದಾಗಿಪೋಷಕರ ಮನವೊಲಿಸಿ ಸಾಮೂಹಿಕ ಟೀಸಿ ವಿತರಿಸಿದ್ದರು. ಆ ಮೂಲಕ ಸರಕಾರಿ ಶಾಲೆಯನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ನಡೆಸಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು.

4 ಮಕ್ಕಳ ದಾಖಲಾತಿ: ಶಾಲೆಯಲ್ಲಿ ಸದ್ಯ 4 ಮಕ್ಕಳು ದಾಖಲಾಗಿದ್ದು, ಗುರುವಾರದಿಂದಲೇ ಮತ್ತಷ್ಟು ವಿದ್ಯಾರ್ಥಿಗಳು ಸೇರುವಂತೆ ಪೋಷಕರ ಮನವೊಲಿಸಲಾಗಿದೆ. ನಿತ್ಯ ಬಿಸಿಯೂಟ ತಯಾರಿಕೆಗೆ ವ್ಯವಸ್ಥೆ ಕಲ್ಪಿಸಿ, ಮಕ್ಕಳು ಗುಣಮಟ್ಟದ ಶಿಕ್ಷಣ ಸಿಗುವಂತಹ ಎಲ್ಲ ಬಗೆಯ ಸವಲತ್ತುಗಳು ಸಿಗುವಂತೆ ಕಾಳಜಿ ವಹಿಸಲಾಗಿದೆ.

ಈ ವೇಳೆ ನಡೆಸಿದ ಪೋಷಕರ ಸಭೆಯಲ್ಲಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕಿ ಕವಿತಾ, ತಮ್ಮ ಅವಧಿಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ, ಶಾಲೆ ಮುಚ್ಚಲು ಕಾರಣವಾಗಿದ್ದು, ಬೆಂಗಳೂರು ಶಾಲೆಗೆ ನಿಯೋಜನೆಗೊಂಡ ಅವಧಿಯಲ್ಲೂ ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಣ ಡ್ರಾ ಮಾಡಿರುವುದನ್ನು ಪೋಷಕರು ದಾಖಲೆ ಸಮೇತ ಹಾಜರುಪಡಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಸುದ್ದಿಮೂಲ ವರದಿಗೆ ಅಭಿನಂದನೆ: ಶಿಕ್ಷಕಿ ಮತ್ತು ಅಧಿಕಾರಿಗಳ ಕರ್ತವ್ಯಲೋಪದಿಂದ ಉತ್ತಮ ದಾಖಲಾತಿಯಿದ್ದ ಸರಕಾರಿ ಶಾಲೆ ಮುಚ್ಚಿತ್ತು. ಈ ಬಗ್ಗೆ ವರದಿ ಪ್ರಕಟಿಸಿ ಒಂದೇ ದಿನದಲ್ಲಿ ಶಾಲೆ ಪುನಾರಂಭಿಸಲು ಇಲಾಖೆಗೆ ಒತ್ತಡ ಸೃಷ್ಟಿಸಿದ ಸುದ್ದಿಮೂಲ ಪತ್ರಿಕೆಗೆ ಅರೇಹಳ್ಳಿ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.

ಸುದ್ದಿಮೂಲ ವರದಿಯಿಂದ ಶಾಲೆ ಸಮಸ್ಯೆ ಗಮನಕ್ಕೆ ಬಂದಿದ್ದು, ತರಗತಿಗಳನ್ನು ಪುನಾರಂಭಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಕ್ಷರ ದಾಸೋಹ ಸೇರಿದಂತೆ ಎಲ್ಲಾ ಸೌಕರ್ಯ ಕಲ್ಪಿಸಲಾಗುವುದು. ಮುನಿಲಕ್ಷ್ಮಯ್ಯ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ

ಸ್ಥಳೀಯವಾಗಿ ಶಾಲೆ ಮುಚ್ಚಿದ್ದರಿಂದ ದೂರದ ಚಿಕ್ಕೊಂಡಹಳ್ಳಿಗೆ ಹೋಗಬೇಕಿತ್ತು. ಸುದ್ದಿ ಮೂಲ ವರದಿಯಿಂದ ನಮ್ಮ ಹಳ್ಳಿಯಲ್ಲೇ ಶಾಲೆ ಆರಂಭವಾಗಿದ್ದು, ಖುಷಿ ನೀಡಿದೆ.

ಶ್ರಾವಣಿ, 5ನೇ ತರಗತಿ ವಿದ್ಯಾರ್ಥಿನಿ, ಅರೇಹಳ್ಳಿ

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ