Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

‘ಕೃತಕ ಬುದ್ಧಿಮತ್ತೆ ಒಂದು ವರದಾನ’

ಸುದ್ದಿಮೂಲ ವಾರ್ತೆ ಮಸ್ಕಿ, ೆ.25:
ಕೃತಕ ಬುದ್ಧಿಿಮತ್ತೆೆ ಇಂದಿನ ಆಧುನಿಕ ಜಗತ್ತಿಿನಲ್ಲಿ ಒಂದು ವರದಾನವಾಗಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಲಿತಾಂಶ ಅದ್ಭುತವಾಗಿರುತ್ತದೆ ಎಂದು, ಮಸ್ಕಿಿ ತಾಲೂಕಿನ ತಹಶೀಲ್ದಾಾರ ಡಾ. ಮಂಜುನಾಥ ಭೋಗಾವತಿ ಹೇಳಿದರು.
ಮಸ್ಕಿಿ ತಾಲೂಕಿನ ಬುದ್ಧಿಿನ್ನಿಿ (ಎಸ್) ಗ್ರಾಾಮದಲ್ಲಿ 2025- 26 ನೇ ಸಾಲಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇಂದಿನ ಯುವಕರು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುವಾಗ ಎಚ್ಚರವಹಿಸಿ ಅವುಗಳನ್ನು ತಮ್ಮ ಜೀವನಕ್ಕೆೆ ಉಪಯೋಗವಾಗುವ ರೀತಿಯಲ್ಲಿ ಬಳಕೆ ಮಾಡಬೇಕು, ಅವುಗಳನ್ನು ಕಾಲಹರಣ ಮಾಡಲು ಬಳಸಿಕೊಳ್ಳದೆ ಜ್ಞಾನದ ಸಾಧನಗಳಾಗಿ ಬಳಸಿಕೊಳ್ಳಬೇಕು. ’ಕೃತಕ ಬುದ್ಧಿಿಮತ್ತೆೆ’ ಸಾಧನ ಎಲ್ಲವನ್ನು ವೇಗವಾಗಿ, ನಿಖರವಾಗಿ ಮತ್ತು ಸುಲಭವಾಗಿ ಮಾಡುವ ಡಿಜಿಟಲ್ ಮಾಧ್ಯಮವಾಗಿದೆ. ಇದನ್ನು ಬಳಸಿಕೊಂಡು ಅಭ್ಯಾಾಸ ಮಾಡಿದರೆ ಪ್ರತಿಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸರಳವಾಗಿ, ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ಅಭ್ಯಾಾಸ ಮಾಡಿ ಯಶಸ್ವಿಿಗೊಳಿಸಬಹುದೆಂದರು. ಎ ಐ ಸಾಧನ ಹಲವು ವಿುಲ ಅವಕಾಶಗಳನ್ನು ತೆರೆದಿಟ್ಟಿಿದ್ದು, ಅದನ್ನು ವಿದ್ಯಾಾರ್ಥಿಗಳು ಸದುಪಯೋಗಪಡಿಸಿಕೊಂಡು ಸ್ಟಾಾರ್ಟ್ ಅಪ್‌ಗಳನ್ನು ಆರಂಭಿಸಿ, ಸ್ವಯಂ ಉದ್ಯೋೋಗ ಮಾಡಬಹುದು, ಉದ್ಯೋೋಗಿಗಳಾಗುವುದಕ್ಕಿಿಂತ, ಉದ್ಯೋೋಗದಾತರಾಗಲು ವಿುಲ ಅವಕಾಶಗಳಿವೆ ಎಂದರು. ದೇಶದಲ್ಲಿರುವ ಸಾವಿರಾರು ಸಂಖ್ಯೆೆಯ ಸ್ಟಾಾರ್ಟ್ ಅಪ್ ಮಾಲಕರು ‘ಎ.ಐ’ ಸಾಧನವನ್ನು ಬಳಸಿಕೊಂಡು ಏಳಿಗೆಯನ್ನು ಕಂಡಿದ್ದಾರೆ ಎಂದರು. ಡಿಜಿಟಲ್ ಭಾರತಕ್ಕಾಾಗಿ ಯುವಕರು ಕೈಜೋಡಿಸಿದರೆ, ದೇಶ ಪ್ರಗತಿ ಕಾಣುತ್ತದೆ ಎಂದರು.
ಮಾಜಿ ಶಾಸಕರಾದ, ಪ್ರತಾಪ್ ಗೌಡ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂದರೆ, ಸಮುದಾಯದಲ್ಲಿ ಸೇವಾ ಮನೋಭಾವನೆ ಮೂಡಿಸಿ ಪ್ರತಿಯೊಬ್ಬರೂ ಸಮಾಜಕ್ಕಾಾಗಿ ಸೇವೆಯನ್ನು ಮಾಡುವುದರ ಮೂಲಕ ಸಾರ್ಥಕವನ್ನು ಕಾಣಬೇಕೆಂದು ಹೇಳಿದರು. ಸೇವಾ ಮನೋಭಾವ ಕಡಿಮೆಯಾಗುತ್ತಿಿರುವ ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕವು ಗ್ರಾಾಮದಲ್ಲಿ ಸೇವಾ ಮನೋಭಾವದ ತತ್ವವನ್ನು ಬಿತ್ತುತ್ತಿಿರುವುದು ಶ್ಲಾಾಘನೀಯ ವೆಂದರು. ಗ್ರಾಾಮದ ಸ್ವಚ್ಛತೆ ಜೊತೆಗೆ ಅರಿವು ಕಾರ್ಯಕ್ರಮ ಎನ್.ಎಸ್.ಎಸ್ ವತಿಯಿಂದ ಆಗುತ್ತಿಿದೆ, ಇದರಲ್ಲಿ ಸಮುದಾಯ ಭಾಗವಹಿಸುವುದರ ಮೂಲಕ ಕಾರ್ಯಕ್ರಮಕ್ಕೆೆ ಒಂದು ಅರ್ಥ ಬರುತ್ತದೆ ಎಂದರು.
ಖ್ಯಾಾತ ವೈದ್ಯರಾದ ಡಾ. ಶಿವಶರಣಪ್ಪ ಇತ್ಲಿಿಯವರು ಮಾತನಾಡಿ ಯುವಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಸೇವಾಕಾರ್ಯದಲ್ಲಿ ತೊಡಗಿಕೊಂಡು ಸಮಾಜಕ್ಕೆೆ ಮಾದರಿಯಾಗಬೇಕೆಂದರು. ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಾಂಶುಪಾಲ ಡಾ. ಮಹಾಂತಗೌಡ ಪಾಟೀಲ್ ವಹಿಸಿದ್ದರು. ಪ್ರಾಾಸ್ತಾಾವಿಕವಾಗಿ ಶಿವ ಗ್ಯಾಾನಪ್ಪ ಲಕ್ಕುಂದಿಯವರು ಮಾತನಾಡಿದರು. ಸಣ್ಣಪ್ಪ ನಾಯಕ ಸ್ವಾಾಗತಿಸಿದರು. ಈ ಕಾರ್ಯಕ್ರಮವನ್ನು ಇಮಾಮ್ ಸಾಬ್ ಇವರು ನಿರೂಪಿಸಿದರು. ಬೋಧಕ, ಬೋಧಕೇತರ ಸಿಬ್ಬಂದಿಗಳು, ಗ್ರಾಾಮದ ಯುವಕರು, ಮುಖಂಡರು, ಶಿಬಿರಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಿಗೊಳಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ