Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆಶೀರ್ವಾದ ಐರಣಿ ಇದೀಗ ಶ್ರೀ ಲಲಿತಾನಂದನಾಥ 

ಸಿರುಗುಪ್ಪ,ಜು.6: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದ ಪತ್ರಕರ್ತ ರಾಜೀವ ಐರಣಿ ಇವರ ಏಕೈಕ ಸುಪುತ್ರ ಆಶೀರ್ವಾದ ಐರಣಿ ತನ್ನ ಹತ್ತನೇ ವಯಸ್ಸಿನಲ್ಲಿ ವೇದಾಧ್ಯಯನದಲ್ಲಿ ಆಸಕ್ತಿ ಮೂಡಿಸಿಕೊಂಡು ಕನಕಪುರ ಬಳಿಯ ಓಂ ಶಾಂತಿಧಾಮ ವೇದ ಗುರುಕುಲದಲ್ಲಿ ಶಿಕ್ಷಣಾರ್ಥಿಯಾದರು. ರಾಜ್ಯ ಸರ್ಕಾರಿ ಪಠ್ಯಕ್ರಮದ ಜೊತೆಗೆ ವೇದಾಧ್ಯಯನ ಮಾಡಿದರು. ಇದಕ್ಕೂ ಮೊದಲೇ ಶ್ರೀ ಯೋಗಾತ್ಮಾನಂದರಿಂದ ಬಾಲಪಾಠ ಪಡೆದಿದ್ದ ಕಾರಣ ಕಲಿಕೆ ಸುಗಮವಾಯಿತು.



ಗುರುಕುಲದಲ್ಲಿನ ಗುರುಮಾತೆ ಲಕ್ಷ್ಮಾಂಬಾ ಇವರಿಂದ ಬ್ರಹ್ಮವಿದ್ಯಾದೀಕ್ಷೆ ಮತ್ತು ಯೋಗದರ್ಶನ, ಉಪನಿಷತ್ ಹಾಗೂ ಸಂಖ್ಯಾಶಾಸ್ತ್ರ ಅಧ್ಯಯನ ಮಾಡಿದರು.

ಪದವಿ ಪೂರ್ವ ಶಿಕ್ಷಣಕ್ಕಾಗಿ ಮೈಸೂರು ನಗರದಲ್ಲಿ ಉನ್ನತ ಶಿಕ್ಷಣ ಜೊತೆಗೆ ಸಾಮವೇದ ಅದ್ಯಯನ ಮಾಡತ್ತಾ ಹೀಲಿಂಗ್ ವಿದ್ಯೆ ಯ ಅಧ್ಯಯನ ಮಾಡುತ್ತಾ ಪದವಿಧರರಾಗುತ್ತಾರೆ

ಈ ಶೋಭಕೃತ್ ನಾಮ ಸಂವತ್ಸರದಲ್ಲಿ ಗುರು ಪೌರ್ಣಮಿಯಂದು ತಮಿಳುನಾಡಿನ ಚೆನ್ನೈ ನಗರದ ತಾಂಬರಮ್ ಪ್ರದೇಶದ ಶ್ರೀಗುರು ಸನ್ನಿಧಾನದಲ್ಲಿ 40ಕ್ಕೂ ಹೆಚ್ಚು ಪಂಡಿತರ ಹಾಗೂ ಉಪಾಸಕರುಗಳ ಸಮ್ಮುಖದಲ್ಲಿ ಶ್ರೀ ಗುಹಾನಂದನಂದನಾಥ ಪರಂಪರಾಪ್ರಾಪ್ತ ಪರಮಹಂಸಿಕಾ ಶ್ರೀಚಂಪಕಾಂಬಾ ಪರಮಗುರು ಅನುಗ್ರಹದಿಂದ ಶ್ರೀಗಗನಾಂಬಿಕಾ ಸಹಿತ ಶ್ರೀಗಗನಾನಂದನಾಥ ಶ್ರೀಗುರುಗಳಿಂದ ಪೂರ್ಣಾಭಿಷೇಕ ಪಡೆದು ಇದೀಗ ಶ್ರೀಲಲಿತಾಾನಂದನಾಥ ಹೆಸರಿನಲ್ಲಿ ಪೂರ್ಣಾಭಿಷೇಕ ಗೊಂಡಿರುತ್ತಾರೆ.

ಇವರು ದೇದಿಪ್ಯಮಾನ ಸಾಧನೆಯ ಅರ್ಹತೆಗೆ ಪಾತ್ರರಾಗಿದ್ದು ಧನ್ಯತೆಯ ಬಾವ ಎಲ್ಲರಲ್ಲೂ ಮೂಡುವಂತಾಗಿದೆ.

ಇವರನ್ನು ಅನೇಕ ಉಪಾಸಕರು ವಿದ್ವಾಂಸರುಗಳು ಮುಕ್ತಕಂಠದಿಂದ ಶ್ಲಾಘಿಸಿದ್ದು ಕಿರಯ ವಯಸ್ಸಿನಲ್ಲಿ ಇಂಥಹ ಸಾಧನೆ ಮಾಡಿದ ಇವರು ಇನ್ನು ಹೆಚ್ಚಿನ ಕೊಡುಗೆಗಳನ್ನು ಲೋಕಕ್ಕೆ ನೀಡಲಿ ಎಂದು ಆಶೀರ್ವಾದ ಪೂರಕವಾಗಿ ಹರಸಿರುತ್ತಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ