Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಏಷ್ಯಾ ಜುವೆಲ್ಸ್‌ ಶೋ:‌ ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ, ಮಾರಾಟ ದರದಲ್ಲಿ ಕಡಿತ, ಮೇಕಿಂಗ್ ಚಾರ್ಜ್ ನಿಂದ ವಿನಾಯಿತಿ

ಬೆಂಗಳೂರು, ಆ, 11; ವರ ಮಹಾಲಕ್ಷ್ಮಿ ಹಾಗೂ ಹಬ್ಬದ ಋತುವಿಗೆ ಮಹಿಳೆಯರನ್ನು ಸೆಳೆಯಲು ಬೆಂಗಳೂರಿನ ರಿಟ್ಜ್‌ ಕಾರ್ಲಟನ್‌ ನಲ್ಲಿ ಮೂರು ದಿನಗಳ “ಏಷ್ಯಾ ಜುವೆಲ್ಸ್‌ ಶೋ 2023” ಆರಂಭವಾಗಿದೆ. ದೇಶದ ಎಲ್ಲಾ ಭಾಗಗಳಿಂದ ಆಭರಣ ಮಾರಾಟಗಾರರು ತನ್ನ ಮಳಿಗೆಗಳನ್ನು ತೆರೆದಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ವಿಶೇಷ ರಿಯಾಯಿತಿ ನೀಡಲಾಗಿದೆ. ಕೆಲವು ಆಭರಣ ಮಾರಾಟಗಾರರು ಮೇಕಿಂಗ್ ದರ ರದ್ದುಮಾಡಿದ್ದರೆ, ಇನ್ನೂ ಕೆಲ ಮಳಿಗೆಗಳು ಆಭರಣ ಮಾರಾಟದರದಲ್ಲಿ ರಿಯಾಯಿತಿ ನೀಡಿವೆ. ಒಂದೊಂದು ಮಳಿಗೆಯಲ್ಲಿ ಒಂದೊಂದು ಬಗೆಯ ವಿನ್ಯಾಸ, ವೈಶಿಷ್ಟ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.

ದಕ್ಷಿಣ ಭಾರತದ 48 ನೇ ಆಭರಣ ಮೇಳ - ಏಷ್ಯಾ ಜುವೆಲ್ಸ್ ಶೋಗೆ ಚಿತ್ರನಟಿ ಸ್ವಾತಿ ಪ್ರಭು ಚಾಲನೆ ನೀಡಿದರು. ಮೇದಿನಿ ಉದಯ್ ಗರುಡಾಚಾರ್, ಡಾ. ಸಚಿನ ಮೋಹನ್, ಪ್ರತಿಭಾ ಶರತ್ ಗೌಡ ಹಾಗೂ ಪಲ್ಲವಿ ರವಿ ಉಪಸ್ಥಿತರಿದ್ದರು.

ಪ್ರತಿದಿನ ಬೆಳಿಗ್ಗೆ 10:30 ರಿಂದ ರಾತ್ರಿ 8 ಗಂಟೆವರೆಗೆ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಹಿಂದೆಂದೂ ಇಲ್ಲದ ಆಭರಣಗಳ ಸಂಗ್ರಹವನ್ನು ಮೇಳ ಪ್ರದರ್ಶಿಸುತ್ತಿದ್ದು, ದೇಶದ ಎಲ್ಲಾ ಆಭರಣ ಕಂಪೆನಿಗಳನ್ನು ಒಂದೇ ಸೂರಿನಡಿ ತರಲಾಗಿದೆ.

ಮೇಳದ ಆಯೋಜಕ ಹರೀಶ್ ಸಚ್ ದೇವ್ ಮಾತನಾಡಿ, ಈ ಬಾರಿಯ ಪ್ರದರ್ಶನ ಅತ್ಯಂತ ವಿಶೇಷವಾಗಿದ್ದು, ವಿಶೇಷವಾಗಿ ಬೆಂಗಳೂರು ಗ್ರಾಹಕರ ಅಭಿರುಚಿ, ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಆಭರಣಗಳು ದೊರೆಯುತ್ತಿವೆ. ವಜ್ರ, ಪ್ಲಾಟಿನಂ, ಸಾಂಪ್ರದಾಯಿಕ ವಡವೆಗಳು, ಮದುವೆ, ಪ್ರಾಚೀನ, ವಿಶೇಷ ಸಂಗ್ರಹ, ಕುಂದನ್‌, ಜಡುವಾ, ಪೊಲ್ಕಿ ವಡವೆಗಳಲ್ಲದೇ ಬೆಳ್ಳಿ ಆಭರಣ ಕೂಡ ಪ್ರದರ್ಶನದ ವಿಶೇಷವಾಗಿದೆ.

ಅಪರೂಪದ ಹರಳುಗಳು ಸಹ ಇಲ್ಲಿ ಲಭ್ಯವಿದೆ. ಬೆಂಗಳೂರು, ಮುಂಬೈ, ದೆಹಲಿ, ಜೈಪುರ, ಹೈದ್ರಾಬಾದ್‌ ಮತ್ತಿತರ ನಗರಗಳಿಂದಲೂ ಖ್ಯಾತ ಆಭರಣ ತಯಾರಕರು ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರಮುಖವಾಗಿ ಬೆಂಗಳೂರಿನ ಗಿರಿಜಾ ಜುವೆಲರ್ಸ್‌, ನಿಖಾರ್‌ ಜುವೆಲ್ಸ್‌, ಖೀಯಾ ಜುವೆಲರ್ಸ್‌, ಸಿಂಹ, ಪಿಎಂಜೆ, ಮುಂಬೈನ ನೆಹಾ ಜುವೆಲ್ಸ್‌, ರೇಣುಕಾ ಫೈನ್‌ ಜುವೆಲರ್ಸ್‌, ಝಿವಾ, ಸೋಹಮ್‌ ಕ್ರಿಯೇಷನ್‌, ದೆಹಲಿಯ ಸೆಹಗಲ್‌, ಅರುಣಾ ಮತ್ತಿತರೆ ಕಂಪೆನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ