ಬಾಗೇಪಲ್ಲಿ: ಚುನಾವಣಾಧಿಕಾರಿಗಳಿಂದ 5.5 ಕೆ.ಜಿ. ಚಿನ್ನ ವಶ
ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ, ಏ.9: ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಗುರುವಾರ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.66 ಕೋಟಿ ಮೌಲ್ಯದ 5.585 ಕೆ.ಜಿ ಚಿನ್ನವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಂಧ್ರಪ್ರದೇಶದ ಕರ್ನೂಲಿನ ಚಿನ್ನಾಭರಣ ಮಾರಾಟ ಅಂಗಡಿಯಿಂದ ವಿಜಯವಾಡದ ಚಿನ್ನಾಭರಣ ಮಾರಾಟ ಅಂಗಡಿಗೆ ಈ ಚಿನ್ನ ಸಾಗಿಸಲಾಗುತ್ತಿತ್ತು ಎಂದು ಸಾಗಾಣಿಕೆದಾರರು ತಿಳಿಸಿದ್ದಾರೆ. ಆದರೆ, ಗಡಿ ಭಾಗದ ಬಾಗೇಪಲ್ಲಿ ಚೆಕ್ ಪೋಸ್ಟ್‌ಗೆ ಏಕೆ ಬಂದರು ಎಂದು ಅಧಿಕಾರಿಗಳು ಅನುಮಾನಿಸಿದ್ದಾರೆ.
ನಮ್ಮ ಗಡಿ ಭಾಗದ ಚೆಕ್‌ಪೋಸ್ಟ್‌ಗೆ ಬಂದಿದ್ದರಿಂದ ಚಿನ್ನ ವಶಕ್ಕೆ ಪಡೆದು ದೂರು ದಾಖಲಿಸಲಾಗಿದೆ. ಸದ್ಯಕ್ಕೆ ಚಿನ್ನವನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ’ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 3 ಲಕ್ಷ ಮೌಲ್ಯದ 4.9 ಕೆ.ಜಿ ತೂಕದ ಬೆಳ್ಳಿ ಬಿಸ್ಕತ್ ಹಾಗೂ ₹ 5 ಲಕ್ಷ ನಗದನ್ನು ಮುಳಬಾಗಿಲು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.