Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

2024 ಕ್ಕೆ ಬಿಜೆಪಿ ನಾಟಕ ಕಂಪನಿ ಬಂದ್

ಸುದ್ದಿಮೂಲ ವಾರ್ತೆ

ಕೊಪ್ಪಳ,ಆ.30:ಬಿಜೆಪಿ ನಾಟಕ ಕಂಪೆನಿ ೨೦೨೪ ಕ್ಕೆ ಬಂದ್‌ ಆಗುತ್ತದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಕೇಂದ್ರ ಸರಕಾರ ಸಿಲಿಂಡರ್‌ ಗೆ ೨೦೦ ರುಪಾಯಿ ಸಬ್ಸಿಡಿ ಘೊಷಣೆ ಮಾಡಿದೆ. ಸಿಲಿಂಡರ್‌ ಸಬ್ಸಿಡಿ ಈ ನಾಲ್ಕು ವರ್ಷದಿಂದ ಯಾಕೆ ಘೋಷಣೆ ಮಾಡಲಿಲ್ಲ?.‌ನಾವು ಅಧಿಕಾರಕ್ಕೆ ಬಂದ ತಕ್ಷಣ ಮೂರು ತಿಂಗಳೊಳಗಾಗಿ ೫ ಯೋಜನೆಗಳ ಪೈಕಿ ೪ ಯೋಜನೆ ಜಾರಿ ಮಾಡಿದ್ದೇವೆ.

ಈಗ ಚುನಾವಣೆ ಬಂದಿದೆ. ಜನರು ಶಿಕ್ಷೆ ಕೊಡುತ್ತಾರೆ ಎಂಬ ಭಯದಿಂದ ಈಗ ಸಿಲಿಂಡರ್‌ ಸಬ್ಸಿಡಿ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

ಜನರು ಬಿಜೆಪಿಗೆ ತಕ್ಕ ಶಿಕ್ಷೆ ಕೊಡುತ್ತಾರೆ, ತಿರಸ್ಕಾರ ಮಾಡುತ್ತಾರೆ.೯ ವರ್ಷ ದೇಶವಾಳಿದ ಬಿಜೆಪಿ ಬಡವರಿಗೆ ಮಾಡಿದ ಒಂದು ಯೋಜನೆಯ ಹೆಸರು ಹೇಳಲಿ. ನಮ್ಮ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ. ನಮ್ಮ ಬಗ್ಗೆ ಮಾತನಾಡುವ ಯೋಗ್ಯತೆಯನ್ನು ಬಿಜೆಪಿಯವರು ಕಳೆದುಕೊಂಡಿದ್ದಾರೆ.ಬಿಜೆಪಿಯವರಿಗೆ ನಾಚಿಕೆ, ಮಾನ ಮರ್ಯಾದೆ ಇದೆಯಾ? ಎಂದು ಟೀಕಿಸಿದರು.

ಬರದ ವಿಚಾರವಾಗಿ ಸಿಎಂ ಎರಡು ತಿಂಗಳ ಹಿಂದೆಯೇ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ನಿಯಮ ಸಡಿಲಿಕೆ ಮಾಡಿ ಎಂದು ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. ನಾವು ಈಗಾಗಲೇ ಅಧಿಕಾರಿಗಳಿಗೆ ಬೆಳೆ ಸಮೀಕ್ಷೆ ಮಾಡಲು ಸೂಚನೆ ನೀಡಲಾಗಿದೆ. ಕಾನೂನಿನಲ್ಲಿ ಕೆಲ ಮಾರ್ಪಾಡು ಮಾಡದೆ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಜನರಿಗೆ ಪಂಗನಾಮ ಹಾಕಿದ್ದು ಬಿಜೆಪಿಯವರು. ೧೫ ಲಕ್ಷ ಕೊಡುತ್ತೇವೆ ಎಂದು ಹೇಳಿ ಕೊಡದೆ ಜನರಿಗೆ ಪಂಗನಾಮ ಹಾಕಿದ್ದಾರೆ. ಎರಡು ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿ ಕೊಡದೆ ಇರೋದು ಪಂಗನಾಮ ಹಾಕಿದಂತೆ. ನಾವು ಈಗಾಗಲೇ ಜನರ ಆಕೌಂಟ್‌ಗೆ ಕೊಡುತ್ತಿದ್ದೇವೆ ಎಂದರು.

ನಮ್ಮ ದೇಶದ ಗಡಿ ಪ್ರದೇಶದಲ್ಲಿ ಚೀನಾದವರು ಬಂದಿರೋದು ಮ್ಯಾಪ್‌ ನಿಂದ ಗೊತ್ತಾಗುತ್ತದೆ. ಬಿಜೆಪಿಯವರು ದೊಡ್ಡ ದೇಶಭಕ್ತರು. ಗಡಿಯೊಳಗೆ ಬೇರೆ ದೇಶದವರು ಬಂದರೂ ಅದನ್ನು ಮರೆ ಮಾಚಲು ಏನೆಲ್ಲಾ ಮಾತನಾಡುತ್ತಾರೆ. ಮೊದಲಿನಂತೆ ಸಿದ್ದರಾಮಯ್ಯ ಅವರಲ್ಲಿ ಗಡಸುತನವಿಲ್ಲ ಎಂಬ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ ಶ್ರೀರಾಮುಲು ಅವರು ಸೋತ ಬಳಿಕ ಸಿದ್ದರಾಮಯ್ಯ ಅವರನ್ನು ಸಮೀಪದಿಂದ ನೋಡುವ ಪ್ರಯತ್ನ ಮಾಡಿಲ್ಲ. ಸಿದ್ದರಾಮಯ್ಯ ಅವರ ಗಡಸುತನ, ಗಟ್ಟಿತನ ಯಾವಾಗಲೂ ಇರುತ್ತದೆ. ಅದೇ ಅವರ ಗತ್ತು- ಗಮ್ಮತ್ತು ಇದೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ