Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆಸ್‌ನ ಒಬ್ಬ ಶಾಸಕನನ್ನು ಸೆಳೆಯಲು ಬಿಜೆಪಿಗೆ ಆಗದು

ಸುದ್ದಿಮೂಲ ವಾರ್ತೆ

ನವದೆಹಲಿ: ನ.8: ನಮ್ಮ ಪಕ್ಷದ ಒಬ್ಬನೇ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಬಿಜೆಪಿಯಿಂದ ಆಗುವುದಿಲ್ಲ. ಇದು ವಿಫಲ ಯತ್ನ ಎಂದು ಅವರಿಗೂ ಚನ್ನಾಗಿ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಬುಧವಾರ ಅವರು, ಆಪರೇಷನ್ ಕಮಲ ಮಾಡಲು ಬಿಜೆಪಿ ಸಜ್ಜಾಗುತ್ತಿದ್ದು, ಫಡ್ನವೀಸ್ ನೇತೃತ್ವದಲ್ಲಿ ಮಹರಾಷ್ಟ್ರದಲ್ಲಿ ಸಭೆ ನಡೆದಿದೆ ಎಂದು ಗುಪ್ತಚರ ಇಲಾಖೆಗಳು ತಿಳಿಸಿವೆಯಂತಲ್ಲ’ ಎಂದು ಕೇಳಿದ ಪ್ರಶ್ನೆಗೆ, “ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಗೊಂದಲ ಸೃಷ್ಟಿಸಲು ಹೀಗೆ ಮಾಡುತ್ತಿದ್ದಾರೆ. ನಾನು ಯಾವುದೇ ವಿಚಾರವನ್ನು ಬಹಿರಂಗಪಡಿಸುವುದಿಲ್ಲ. ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿಯವರು ಯಾರೋ ಬಂದಂತೆ, ಹೋದಂತೆ ಮಾಡಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಕೆಲಸಗಳಿಗೆ, ಕುಶಲೋಪರಿ ವಿಚಾರಿಸಲು ಅನೇಕರು ಬಂದಿರುತ್ತಾರೆ. ಆದರೆ ಮನೆಯಿಂದ ಹೊರಗೆ ಬಂದು ರಾಜಕೀಯ ವಿಚಾರಕ್ಕೆ ಬಂದಿದ್ದೇ ಎಂದು ಮಾಧ್ಯಮಗಳ ಮುಂದೆ ಹೇಳುತ್ತಾರೆ. ಚಲಾವಣೆಯಲ್ಲಿ ಇರಬೇಕಾದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ನೂರಾರು ಬೆಳವಣಿಗೆಗಳು ನಡೆಯುತ್ತವೆ. ಇದೆಲ್ಲವನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳುತ್ತದೆ. ಇದರ ಬಗ್ಗೆ ಸಿಎಂ ಮಾಹಿತಿ ನೀಡಿದ್ದಾಗಿದೆ. ನೂರು ಸಭೆ ಮಾಡಿರಲಿ, ಮಾಡದಿರಲಿ. ಅವರ ಎಲ್ಲಾ ನಡೆಯೂ ನನಗೆ ಗೊತ್ತಿದೆ. ಬಿಜೆಪಿಯ ನಾಯಕರು ತಮ್ಮದೇ ಕಷ್ಟದಲ್ಲಿದ್ದಾರೆ, ಒಂದಷ್ಟು ಜನ ನಿರುದ್ಯೋಗಿಗಳು ಇದ್ದಾರಲ್ಲಾ, ಅವರು ಚಪಲಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಶಾಸಕರು ಈ ಸಭೆಗಳಲ್ಲಿ ಭಾಗವಹಿಸಿದ್ದಾರೆಯೇ ಎಂದು ಕೇಳಿದಾಗ “ನಮ್ಮ ಶಾಸಕರು ಯಾರೂ ಹೋಗಿಲ್ಲ. ಮೊದಲಿನಿಂದ ಏಜೆಂಟ್ ಕೆಲಸ ಮಾಡುತ್ತಿದ್ದವರು, ನಮ್ಮ ಶಾಸಕರನ್ನು ಸ್ವತಃ ಹುಡುಕಿಕೊಂಡು ಬಂದಿದ್ದಾರೆ. ಯಾರು, ಯಾರ ಬಳಿ ಬಂದು ಮಾತನಾಡಿದ್ದಾರೆ, ಅವರೆಲ್ಲಾ ನಮ್ಮ ಬಳಿ ಬಂದು ಮಾಹಿತಿ ನೀಡಿದ್ದಾರೆ. ನಮ್ಮಿಂದ ಹಿಂದೆ ಅಲ್ಲಿಗೆ ಹೋದವರೇ ಈ ಆಪರೇಷನ್ ಕೆಲಸ ಮಾಡುತ್ತಿರುವುದು” ಎಂದರು.

ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷ ಎನ್ನುವ ಕುಟುಂಬದ ಮುಖ್ಯಸ್ಥ. ಪಕ್ಷದ ಸಾಕಷ್ಟು ಕೆಲಸಗಳು ಇರುತ್ತವೆ. ಆದಕ್ಕೆ ನಾನೇ ಒಂದಷ್ಟು ಜನ ನಾಯಕರ ಮನೆಗೆ ಹೋಗುತ್ತೇನೆ. ಅಥವಾ ನನ್ನ ಮನೆಗೆ ಕರೆಯುತ್ತೇನೆ. ರಾಮಲಿಂಗಾರೆಡ್ಡಿ, ಪರಮೇಶ್ವರ್ ಅವರ ಮನೆಗೆ ಹೋಗುತ್ತೇನೆ. ಅವರುಗಳೇ ನನ್ನ ಮನೆಗೆ ಬರುತ್ತೇನೆ ಎಂದಾಗ, ಬೇಡ ನಾನೇ ಬರುತ್ತೇನೆ ಎಂದು ಹೋಗಿದ್ದ ಸಂದರ್ಭಗಳೂ ಇವೆ. ಅದೇ ರೀತಿ ಸತೀಶ್ ಜಾರಕಿಹೊಳಿ ಅವರೇ ಮನೆಗೆ ಬರುತ್ತೇನೆ ಎಂದಿದ್ದರು. ಅದಕ್ಕೆ ಬೇಡ, ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಹೋದೆ. ನಾನೊಬ್ಬ ಪಕ್ಷದ ಅಧ್ಯಕ್ಷ, ಅದಕ್ಕೆ ಭೇಟಿಯಾಗಿದ್ದೇನೆ' ಎಂದರು.

ಪ್ರಧಾನಿ ನಿದ್ದೆ ಕೆಡಿಸಿಕೊಂಡಿದ್ದೇ ಸಂತೋಷ

ಪ್ರಧಾನಿಗಳು ನಮ್ಮನ್ನು ನೆನೆಸಿಕೊಳ್ಳುತ್ತಿದ್ದಾರಲ್ಲಾ ಅಷ್ಟೇ ಸಾಕು. ನಮ್ಮ ಗ್ಯಾರಂಟಿ, ಕೆಲಸ, ಒಗ್ಗಟ್ಟು ಅವರ ನಿದ್ರೆ ಕೆಡಿಸಿದೆ. ಇದು ಸಂತೋಷದ ವಿಚಾರ, ಅವರಿಗೆ ಅಭಿನಂದನೆಗಳು. ಅದಕ್ಕೆ ಮುಖ್ಯಮಂತ್ರಿ ಏನು ಉತ್ತರ ಕೊಡಬೇಕೋ ಕೊಟ್ಟಿದ್ದಾರೆ.

-ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ