Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತಂತ್ರಜ್ಞಾನ ಬಳಸಿಕೊಂಡು ಉತ್ತಮ ಪೊಟೊ ಗ್ರಾಫರ್ ಆಗಬೇಕು- ಬಿ ಕೆ ರವಿ

ಸುದ್ದಿಮೂಲವಾರ್ತೆ

ಕೊಪ್ಪಳ ಆ 19: ಇಂದು ಕ್ಯಾಮರಾ ತಂತ್ರಜ್ಞಾನ ಬದಲಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಫೋಟೊಗ್ರಾಫರಗಳು ಹೊಸತನವನ್ನು ಅಳವಡಿಸಿಕೊಂಡು ಉತ್ತಮ ಫೋಟೊ ಗ್ರಾಫರ್ ಆಗಬೇಕೆಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ ಬಿ ಕೆ ರವಿ ಹೇಳಿದರು.

ಅವರು ಇಂದು ಕೊಪ್ಪಳದಲ್ಲಿ ತಾಲೂಕಾ ಫೋಟೊ ಹಾಗು ವಿಡಿಯೋಗ್ರಾಫರ ಸಂಘದಿಂದ ಆಯೋಜಿಸಿದ್ದ 184 ನೆಯ ಛಾಯಗ್ರಹಣ ದಿನಾಚರಣೆಯನ್ನು ಫೋಟೊ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.

ಒಂದು ಫೋಟೊ ನೂರ ಪದಗಳಿಗೆ ಸಮ. ಫೋಟೊಗ್ರಾಫರಗಳು ಸಮಯಪ್ರಜ್ಞೆ ಬೆಳೆಸಿಕೊಂಡು ಉತ್ತಮ ಭಾವನೆಯ ಫೋಟೊಗಳನ್ನು ತೆಗೆಯಬೇಕೆಂದು ಹೇಳಿದರು.

ಇದೇ ಸಮಯದಲ್ಲಿ ಅತಿಥಿಗಳಾಗಿ ಆಗಮಿಸಿದ ಅಂತರಾಷ್ಟ್ರೀಯ ಛಾಯಗ್ರಾಹಕ ತಿಮ್ಮರಾಯಪ್ಪ ಕೆಂಪಣ್ಣ ಫೋಟೊ ಸತ್ಯವನ್ನೇ ಹೇಳುತ್ತದೆ. ಯಾವುದೇ ಸಂದರ್ಭದಲ್ಲಿ ಒಂದು ಫೋಟೊ ಸತ್ಯಕ್ಕೆ ಸಾಕ್ಷಿಯಾಗುತ್ತದೆ. ಫೋಟೊ ಕ್ಯಾಮರಾ ತಾನು ಏನು ಚಲನೆ ಮಾಡುವುದಿಲ್ಲ. ಆದರೆ ಫೋಟೊಗ್ರಾಫರ ಜಾಣ್ಮೆಯಿಂದ ಅದರ ಹೆಸರು ಬರುತ್ತದೆ ಎಂದರು.

ಇದೇ ವೇಳೆ ಮಾತನಾಡಿದ ಪತ್ರಕರ್ತ ಶರಣಪ್ಪ ಬಾಚಲಾಪುರ ಇಂದು ನಾಗರಿಕ ಪ್ರತಿಕೋದ್ಯಮ ಬಂದಂತೆ, ನಾಗರಿಕ ಫೊಟೊಗ್ರಾಫರ ಪದ್ದತಿ ಇದೆ. ಆದರೆ ಭಾವನೆಗಳನ್ನು ಸೆರೆಬಹಿಡಿಯುವ ಕಲೆ. ಜಾಣ್ಮೆ.‌ತಾಳ್ಮೆ ಫೋಟೊಗ್ರಾಫರಗಳಿಗಿದೆ ಎಂದರು.

ಈ‌ ಸಂದರ್ಭದಲ್ಲಿ ಫೋಟೊಗ್ರಾಫರ. ವಿಡಿಯೋ ಸಂಘದ ಅಧ್ಯಕ್ಷ ತಿಲಕಭೀಮರಾವ್ ಪದಕಿ. ವನ್ಯಜೀವಿ ಛಾಯಗ್ರಾಹಕ ಸಾದಿಕ ಕೆಎನ್ ಕೆ. ಉದ್ಯಮಿ ಶ್ರೀನಿವಾಸ ಗುಪ್ತಾ. ಇದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಶೋಕ ಹುಣಸಿಗಿಡದ ಹಾಗು ಬಸವರಾಜ ಕಂಪ್ಲಿ ವಹಿಸಿಕೊಂಡಿದ್ದರು.

ಈ ಸಂದರ್ಭದಲ್ಲಿ ಹಿರಿಯ ಛಾಯಗ್ರಾಹಕರಾದ ವಿರುಪಣ್ಣ ಶಿವಶಿಂಪಿ. ಬಸವರಾಜ, ಶರಣಪ್ಪ ಮುದ್ಲಾಪುರ ಹಾಗು ದೇವಪ್ಪ ತಿಗರಿಯವರನ್ನು ಸನ್ಮಾನಿಸಲಾಯಿತು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ