Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಲೆಮಾರಿ ಮಕ್ಕಳೊಂದಿಗೆ ಈಸ್ಟರ್ ಹಬ್ಬ ಆಚರಣೆ

 

ಸುದ್ದಿಮೂಲವಾರ್ತೆ ಮಾನ್ವಿ ಏ-8

ಪೋತ್ನಾಳ್ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್  ಪದಾಧಿಕಾರಿಗಳು ಅಲೆಮಾರಿ ಸಮುದಾಯಗಳ ಜೊತೆ ತ್ಯಾಗ, ದಾನ, ರಕ್ಷಣೆಯ ಸಂಕೇತ ಯೇಸು ಕ್ರಿಸ್ತನ ಪುನರುತ್ಥಾನ ( ಈಸ್ಟರ್) ಹಬ್ಬವನ್ನು  ಶನಿವಾರ ಆಚರಿಸಿದರು.

ತಮ್ಮ ಗ್ರಾಮಗಳನ್ನು ಬಿಟ್ಟು ಹೊಟ್ಟೆ ಪಾಡಿಗಾಗಿ ಬದುಕು ಸಾಗಿಸಲಿಕ್ಕೆ ಬೇರೆ  ಗ್ರಾಮಗಳಿಗೆ ವಲಸೆ ಹೋಗುವ ಸಮುದಾಯಗಳ ಜೊತೆ ಟ್ರಸ್ಟಿನ ನಿರ್ದೇಶಕ ಫಾ.ಡಾ.ಸತೀಶ ಫರ್ನಾಂಡೀಸ್ ಅವರು ಕೆಲವು ಸಮಯ ಕಳೆದು ಅವರಿಗೆ ಆರೋಗ್ಯ, ಮಕ್ಕಳ ರಕ್ಷಣೆ ಕುರಿತಾಗಿ ತಿಳಿ ಹೇಳಿದರು.  ಕ್ರಿಸ್ತನು ಈ ಭುವಿಗೆ ಬಂದು ನರಮಾನವನಾಗಿ ಜೀವಿಸಿ,  ಮನುಕುಲದ ಪಾಪಕ್ಕಾಗಿ ಪ್ರಾಣ ತ್ಯಾಗ ಮಾಡಿ, ಮನುಕುಲದ ಪಾಪವನ್ನು ತೊಳೆದು, ಮೂರನೇ ದಿನ ಜೀವಂತರಾಗಿ ಎದ್ದು ಬಂದರು.  ಈ ಹಬ್ಬವನ್ನು ತ್ಯಾಗದ ಮತ್ತು ರಕ್ಷಣೆಯ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮನುಷ್ಯನು ಬೇರೆಯವರಲ್ಲಿ ಹಂಚಿಕೊಳ್ಳುವುದನ್ನು ಕಲಿಯಬೇಕು.  ಕೊಡುವುದರಲ್ಲಿ ಇರುವ ಸಂತೋಷ ಮತ್ತು ಶಾಂತಿ ಎಲ್ಲಿಯೂ ಸಿಗುವುದಿಲ್ಲ ಎಂದರು.

ಸದಾ ಬಡವರ, ಮಕ್ಕಳ, ಶೋಷಿತರ ಬಗ್ಗೆ ಕಾಳಜಿ ಹೊಂದಿರುವ ಸಂಸ್ಥೆಯ ನಿರ್ದೇಶಕರು ಅವರ ಜೊತೆ ಸಹ ಭೋಜನ ಸವಿದು, ಹೊಸ ಬಟ್ಟೆ ಮತ್ತು ಮಕ್ಕಳಿಗೆ ಆಟದ ಸಾಮಾಗ್ರಿಗಳನ್ನು ನೀಡಿ ಅವರ ಸಂತೋಷದಲ್ಲಿ ಭಾಗಿಯಾದರು.

 ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ  ಜಯಶೀಲ ದೋತರಬಂಡಿ,  ಚಾರ್ಲಿ ಉದ್ಬಾಳ್, ಆರೋಗ್ಯಪ್ಪ ದುಮತಿ,  ಜೆಸ್ಸಿಂತಮ್ಮ ಮುದ್ದಂಗುಡ್ಡಿ, ಶಿಲ್ಪಾ ವಲ್ಕಂದಿನ್ನಿ, ಕು. ಮಮತಾ, ಕು. ಮುತ್ತುರಾಜ ಮತ್ತು ಮಕ್ಕಳು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ