Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕೃಷ್ಣ ಪರಮಾತ್ಮನ ಆಚರಣೆ ಅರ್ಥಪೂರ್ಣ : ಶಾಸಕ ಶರತ್ ಬಚ್ಚೇಗೌಡ

ಸುದ್ದಿಮೂಲ ವಾರ್ತೆ

ಹೊಸಕೋಟೆ,ಸೆ.7: ತಾಲ್ಲೂಕು ಕಛೇರಿಯಲ್ಲಿ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ತಾಲ್ಲೂಕು ಆಡಳಿತ ಮತ್ತು ಯಾದವ ಸಮುದಾಯದ ಸಂಘದ ವತಿಯಿಂದ ಆಚರಿಸಲಾಯಿತು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜಗತ್ತಿಗೆ ಧರ್ಮ ಉಳಿಯಬೇಕಾದರೆ ನಾವುಗಳು ಧರ್ಮವನ್ನು ಕಾಪಾಡಬೇಕು ಎಂದು ನೀತಿ ಭೋದನೆಯನ್ನು ಮಾಡಿದ ಮಹಾಮಹಿಮಶ್ರೀಕೃಷ್ಣಪರಮಾತ್ಮನ ಆರಾಧನೆ, ಆಚರಣೆ ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮತ್ತು ಯಾದವ ಸಮುದಾಯದ ಮುಖಂಡ ವಿ. ಪ್ರಸಾದ್‌, ಕೃಷ್ಣಂ ವಂದೇ ಜಗದ್ಗುರುಂ ಎಂಬ ಮಾತಿನಂತೆ ಶ್ರೀಕೃಷ್ಣ ಪರಮಾತ್ಮ ವಿಶ್ವಕ್ಕೆ ಮಾರ್ಗ ತೋರಿಸುಂತಹ ಮತ್ತು ಪ್ರಪಂಚದಲ್ಲಿ ಯಾವಾಗ ಅಧರ್ಮವು ತಾಂಡವವಾಡುತ್ತದೆ. ಆಗ ಮತ್ತೆ ಹುಟ್ಟಿ ಬರುತ್ತಾರೆ. ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಉಪದೇಶಿಸಿರುವಂತಹ ಭಗವಧ್ಗೀತೆಯನ್ನು ಪ್ರತಿಯೊಬ್ಬರು ಓದಬೇಕು ಮತ್ತು ತನ್ನ ಜೀವನದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅಳವಡಿಸಿಕೊಂಡಾಗ ನಮ್ಮ ಜೀವನದಲ್ಲಿ ಉತ್ತಮ ಪಲಿತಾಂಶಗಳು ದೊರೆಯುತ್ತವೆ ಎಂದು ತಿಳಿಸಿದರು.

ಹೊಸಕೋಟೆ ತಾಲ್ಲೂಕು ಯಾದವ ಸಮುದಾಯಕ್ಕೆ ಸರ್ಕಾರದಿಂದ ಗುತ್ತಿಗೆ ಆಧಾರದ ಮೇಲೆ ಮಂಜೂರಾಗಿರುವ ಇಪ್ಪತ್ತು ಗುಂಟೆ ಜಮೀನನ್ನು ಸರ್ಕಾರದಲ್ಲಿ ಖಾಯಂ ಮಂಜೂರು ಮಾಡಿಸಿಕೊಟ್ಟು ಯಾದವ ಜನಾಂಗದ ಶೈಕ್ಷಣಿಕ ಅಭಿವೃದ್ದಿಗೆ ಸಹಕರಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಜೆ ಬಚ್ಚೇಗೌಡ, ಮುತ್ಸಂದ್ರ ಆನಂದಪ್ಪ, ನಗರ ಸಭಾ ಸದಸ್ಯ ಕೇಶವಮೂರ್ತಿ, ಮಾಜಿ ತಾಲ್ಲೂಕ ಪಂಚಾಯಿತಿ ಸದಸ್ಯ ಬುವನಹಳ್ಳಿ ಗೋಪಾಲಪ್ಪ, ಶಿಕ್ಷಕರಾದ ಗಂಗಾಧರ್, ರಾಜಣ್ಣ,ಚನ್ನಪ್ಪ ಹಾಗೂ ಇನ್ನು ಅನೇಕರು ಪಾಲ್ಗೊಂಡಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ