Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಖ್ಯಮಂತ್ರಿಗಳಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ

ದುಡಿಮೆಗೆ ಗೌರವ ದೊರೆತರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ.

ಬೆಂಗಳೂರು, ಮಾರ್ಚ್ 23:ದುಡಿಮೆಗೆ ಗೌರವ ದೊರೆತರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಸ್ವಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ ವಿತರಣೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ದುಡಿಮೆಗೆ ಗೌರವ

ಸ್ವಾಮಿ ವಿವೇಕಾನಂದರು ' ಶಕ್ತಿ ನಿಮ್ಮ ಒಳಗಡೆ ಇದೆ.‌ ನೀವು ಏನು ಬೇಕಾದರು ಮಾಡಬಲ್ಲಿರಿ' ಎಂದಿದ್ದಾರೆ. ಮನಸ್ಸಿನಲ್ಲಿ ಸಂಕಲ್ಪ ಸಾಧಿಸುವ ಛಲ‌ ಇದ್ದರೆ‌ ಏನಾದರೂ ಸಾಧಿಸಬಹುದು ಎಂದರು. ನಿರಂತರ ಪ್ರಯತ್ನ ವಿದ್ದರೆ ಯಾವುದೂ ಅಸಾಧ್ಯವಲ್ಲ. ದುಡಿಮೆಗೆ ಪ್ರೋತ್ಸಾಹ ನೀಡಲು ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ 12 ಸಾವಿರ ಯುವ ಸಂಘಗಳನ್ನು ರಚಿಸಿ ಅವರಿಗೆ ತರಬೇತಿ, ಉತ್ಪಾದನೆ, ಮಾರುಕಟ್ಟೆ, ಬ್ಯಾಂಕ್ ಸಹಾಯ ನೀಡಿ ಸ್ವಯಂ ಉದ್ಯೋಗಿಗಳಾಗಳು ನೆರವು ನೀಡಲಾಗುತ್ತಿದೆ. ನಮ್ಮ ಯುವಕರು ಕೈ ಚಾಚಬಾರದು ಅವರು ಕೊಡುವ ಕೈ ಯಾಗಬೇಕು. ಈ ರೀತಿಯ ಯೋಜನೆ ರಾಜ್ಯದಲ್ಲಿ ಈವರೆಗೆ ಇರಲಿಲ್ಲ. ಗ್ರಾಮೀಣ ಭಾಗದ ಯುವಕರು ನಿರುದ್ಯೋಗಗಳಾಗಿದ್ದು ಅಲ್ಲಿಯೇ ಸಂಘ ರಚಿಸಿ ಉತ್ಪಾದನೆ ಮಾಡಿದರೆ, ಅವರು ಈ ನಾಡು ಕಟ್ಟಲು ಮುಂದಾಗುತ್ತಾರೆ. ಗ್ರಾಮೀಣ ಭಾಗದ ಯುವಕರು ಕೆಲಸವಿಲ್ಲದೇ ಇರಬಾರದು. ಎಲ್ಲರಿಗೆ ವಿದ್ಯೆ, ಎಲ್ಲರ ಕೈಗಳಿಗೆ ಕೆಲಸ ಕೊಡಬೇಕು. ಅವರು ದುಡಿಮೆ ಮಾಡಿ ಉತ್ತಮ ಚಾರಿತ್ರ್ಯ ವಂತರಾಗಿತ್ತಾರೆ.ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ ಎಂದರು.

ಸ್ತ್ರೀ ಸಾಮರ್ಥ್ಯ

ಮಹಿಳೆಯರ ಸಾಮರ್ಥ್ಯ ರಾಜ್ಯಕ್ಕೆ ಉಪಯೋಗ ಆಗಬೇಕು ಎಂದು ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಈಗಾಗಲೇ ಮೊದಲ ಕಂತು 50 ಸಾವಿರ ರೂ.ಗಳನ್ನು 10 ಸಾವಿರ ಸಂಘಕ್ಕೆ ನೀಡಿದ್ದು, ಎರಡನೇ ಕಂತಿನಲ್ಲಿ 50 ಸಾವಿರ ರೂ.ದೊರೆಯಲಿದೆ. 20 ಸಾವಿರ ಸಂಘಗಳಿಗೆ ನೇರವಾಗಿ ಅವರ ಖಾತೆಗಳಿಗೆ ಜಮಾ ಆಗಿದೆ. ಅವರಿಗೂ ತರಬೇತಿ ನೀಡಿ ಉತ್ಪಾದನೆಗೆ ಪೂರಕವಾಗಿ ನೆರವು ನೀಡಲಾಗುತ್ತಿದೆ ಎಂದರು. ಈ ವರ್ಷದ ಬಜೆಟ್ ನಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂ.ಗಳನ್ನು ನೀಡುವ ಯೋಜನೆಗೆ ಅನುದಾನ ಮೀಸಲಿಡಲಾಗಿದೆ. ಯೋಜನೆ ಕೂಡಲೇ ಪ್ರಾರಂಭವಾಗಲಿದೆ ಎಂದರು. ಅತ್ಯಂತ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಸರ್ಕಾರ ವಿಶೇಷ ಕಾಳಜಿ ಮಾಡುತ್ತಿದೆ ಎಂದರು.

ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ

ಆಟೊ ಚಾಲಕ ಬಾಂಧವರು ಹಗಲಿರುಳು ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ 2.5 ಲಕ್ಷ ಆಟೊ ಚಾಲಕರಿದ್ದಾರೆ. ಅವರಿಗೆ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾನಿಧಿ ಯೋಜನೆ‌ ಜಾರಿಗೆ ತರಲಾಗಿದೆ.

15 ಸಾವಿರ ಆಟೋ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ವಿಸ್ತರಿಸಲಾಗಿದೆ. ಶಾಲಾ/ ಕಾಲೇಜು ಪ್ರವೇಶ ಪ್ರಮಾಣ ಪತ್ರ ನೀಡುವವರಿಗೆ 2500 ರೂ.ಗಳಿಂದ 11 ಸಾವಿರ ರೂ.ಗಳ ವರೆಗೆ ನೀಡಲಾಗುವುದು ಎಂದರು.

ದುಡಿಮೆ ಕುಟುಂಬಕ್ಕೆ ಅನುಕೂಲ ತಂದುಕೊಡಬೇಕು. ದುಡಿಯುವ ವರ್ಗದ ಪರವಾಗಿ ನಮ್ಮ ಹೃದಯ ಮಿಡಿಯುತ್ತದೆ. ಅದಕ್ಕಾಗಿ ಈ ಯೋಜನೆ ಜಾರಿಗೆ ತಂದಿದ್ದೇವೆ. ಆಟೋ ಚಾಲಕನ ಮಗಳೂ ಕೂಡ ವಿದ್ಯೆ ಕಲಿತು ಐಎಎಸ್/ ಐಪಿಎಸ್ ಅಧಿಕಾರಿಗಳಾಗಬೇಕು ಎಂದರು.

 

ಕುರಿಗಾಹಿಗಳಿಗೆ ಆರ್ಥಿಕ ನೆರವು

ನೆಲೆಯಿಲ್ಲದ ಕುರಿಗಾಹಿಗಳಿಗೆ ಕಳೆದ ವರ್ಷ ಕುರಿ ದೊಡ್ಡಿ ನಿರ್ಮಾಣ ಮಾಡಲು ಅನುದಾನ ನೀಡಲಾಗುದೆ ಹಾಗೂ ಕುರಿ ಸತ್ತರೆ ಪರಿಹಾರ ನೀಡಲಾಗುತ್ತದೆ. ಕುರಿಗಾಹಿಗಳಿಗೆ 355 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. 20 ಕುರಿ ಒಂದು ಮೇಕೆಯನ್ನು ಕೊಳ್ಳಲು ಪ್ರತಿಯೊಬ್ಬರಿಗೆ 1.31 ಲಕ್ಷ ನೀಡಿ ಈ ವರ್ಷ 20 ಸಾವಿರ ಕುರಿಗಾಹಿಗಳಿಗೆ ನೀಡಿದ್ದೇವೆ. ಕುರಿ ಉಣ್ಣೆ ಉತ್ಪಾದನೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಉತ್ಪಾದನೆಯನ್ನು ಮಾರುಕಟ್ಟೆಗೆ ಅಮೃತ ಕುರಿಗಾಹಿ ಯೋಜನೆ ಜೋಡಿಸುತ್ತದೆ. ಪೂರ್ಣ ಪ್ರಮಾಣದ ವ್ಯಾಪಾರಕ್ಕೆ 20 ಸಾವಿರ ಕುರಿಗಾಹಿಗಳಿಗೆ ಯೋಜನೆ ತಲುಪಿದೆ. ಇನ್ನೂ 50 ಸಾವಿರ ಕುರಿಗಾಹಿಗಳ ಸಂಘಗಳಿಗೆ ಯೋಜನೆಯ ಫಲ ನೀಡಲಾಗುವುದು ಎಂದರು.

ಕುರಿ ಮಾಂಸ ಉತ್ಪಾದನೆ ಹೆಚ್ಚಳವಾಗಿ ಮಾಂಸ ವಿದೇಶಗಳಿಗೆ ರಪ್ತು ಆಗಬೇಕು. ಕುರಿಗಾಹಿಗಳ ಆದಾಯ ದ್ವಿಗುಣವಾಗಬೇಕು ಎಂದು ತಿಳಿಸಿದರು.

ಶಿಕ್ಷಣದಿಂದ ಬದಲಾವಣೆ

ಕಳೆದ ಒಂದು ವರ್ಷದಲ್ಲಿ 50 ಕನಕದಾಸ ಹಾಸ್ಟೆಲ್‌ ನಿರ್ಮಾಣ ಮಾಡಲಾಗುತ್ತಿದೆ. 5 ಮೆಗಾ ಹಾಸ್ಟೆಲ್ , ಮುಂದಿನ ವರ್ಷ ಐದು ಸಾವಿರ ಮಕ್ಕಳಿಗೆ ಹಾಸ್ಟೆಲ್ ಗಳನ್ನು ತೆರೆಯಲಾಗುವುದು. ಶಿಕ್ಷಣದಿಂದ ಬದಲಾವಣೆ ಸಾಧ್ಯ. ಹಿಂದುಳಿದ ವರ್ಗಗಳಿಗೆ ಆರ್ಥಿಕ, ಶಿಕ್ಷಣ, ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದಲ್ಲಿ ಬದಲಾವಣೆ ತರಲಾಗಿದೆ ಎಂದರು.

ಕಾಯಕವೇ ಕೈಲಾಸ

ದುಡಿಯುವ ವರ್ಗಗಳಿಗೆ ಪ್ರತಿಯೊಬ್ಬರಿಗೆ 50 ಸಾವಿರ ರೂ. ನೀಡಿ ಅವರ ಉದ್ಯೋಗಕ್ಕೆ ಅನುಕೂಲ ಮಾಡುವ ಕಾಯಕ ಯೋಜನೆ ಜಾರಿಯಲ್ಲಿದೆ. ನಾಡುಕಟ್ಟಲು ದುಡಿಯುವ ವರ್ಗದಿಂದ ಮಾತ್ರ ಸಾಧ್ಯ. ಕುರಿಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದರು.

 

ಅಭಿವೃದ್ಧಿಯ ಪಯಣ ಮುಂದುವರೆಯಲಿ

ಜನರ ಆಶೀರ್ವಾದ ಬೆಂಬಲದಿಂದ ನಾನು ಈ ಹುದ್ದೆಯಲ್ಲಿದ್ದು, ಜನರ ಆಶೀರ್ವಾದದಿಂದ ಸ್ವಾಭಿಮಾನಿ ಕರ್ನಾಟಕ ಕಟ್ಟಲು ಸಂಪೂರ್ಣ ಶಕ್ತಿಯನ್ನು ಬಳಕೆ ಮಾಡುವುದಾಗಿ ತಿಳಿಸಿದ ಅವರು ಒಂದು ವರ್ಷದ ಹಿಂದೆ ಕಂಡ ಕನಸು ನನಸಾಗಿದೆ. ವಿದ್ಯಾನಿಧಿ ಯಿಂದ 11 ಲಕ್ಷ ರೈತರ ಮಕ್ಕಳಿಗೆ, ಮೀನುಗಾರರು, ನೇಕಾರರ ಮಕ್ಕಳಿಗೆ ಅನುಕೂಲ ಆಗಿದೆ. ಅಭಿವೃದ್ಧಿ ಯ ಪಯಣ ಮುಂದುವರೆಯಲಿ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ, ಸಚಿವರಾದ ಪ್ರಭು ಚೌಹಾಣ್, ಡಾ: ಸಿ.ಎನ್.ಅಶ್ವಥ್ ನಾರಾಯಣ್, ಶಾಸಕ ರಿಜ್ವಾನ್ ಅರ್ಷದ್ ಮೊದಲಾದವರು ಉಪಸ್ಥಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ