Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಛತ್ರಪತಿ ಶಿವಾಜಿ ಜಯಂತಿ: ಶಿವಾಜಿ ಮಹಾರಾಜರ ಆದರ್ಶ ಮಕ್ಕಳಲ್ಲಿ ಬೆಳೆಸಿ

 ಸುದ್ದಿಮೂಲ ವಾರ್ತೆ ಮುದ್ದೇಬಿಹಾಳ, ೆ.20:
ಪ್ರಜೆಗಳ ಹಿತರಕ್ಷಣೆಗಾಗಿ ಪ್ರಾಾಣ ಕೊಡಲು ಲೆಕ್ಕಿಿಸದ ಧೀರ ಹೋರಾಟಗಾರ ಛತ್ರಪತಿ ಶಿವಾಜಿ ಅವರಾಗಿದ್ದು ಅವರ ಶೌರ್ಯ, ಸಾಹಸದ ಕಥೆಗಳನ್ನು ಮಕ್ಕಳಿಗೆ ತಾಯಂದಿರು ಹೇಳಬೇಕು ಎಂದು ತಹಶೀಲ್ದಾಾರ್ ಕೀರ್ತಿ ಚಾಲಕ್ ಹೇಳಿದರು.
ಪಟ್ಟಣದಲ್ಲಿ ತಾಲ್ಲೂಕು ಆಡಳಿತದಿಂದ ಗುರುವಾರ ಏರ್ಪಡಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ 396ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಿಯ ಭಕ್ತಿಿಯ ಮಾತನ್ನು ಪಾಲಿಸುತ್ತಿಿದ್ದ ಶಿವಾಜಿ ಅವರಿಗೂ ಶ್ರೀದೇವಿಯ ಒಲುಮೆಯಾಗಿತ್ತು. ದೇಶದ ಇತಿಹಾಸ ಕಾಪಾಡಬೇಕೆಂಬ ಮಹಾದಾಸೆ ಹೊಂದಿದ್ದ ಅವರ ಇತಿಹಾಸ ಓದಿದರೆ ಅವರ ವ್ಯಕ್ತಿಿತ್ವ ಸಾಹಸಗಳ ಕುರಿತು ಓದಿದರೆ ಮೈ ರೋಮಾಂಚನಗೊಳ್ಳುತ್ತದೆ.ತಾಯಂದಿರು ಇಂತಹ ದಾರ್ಶನಿಕರ ಇತಿಹಾಸವನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಧೈರ್ಯಶಾಲಿಗಳನ್ನಾಾಗಿ ರೂಪಿಸಬೇಕು ಎಂದರು.
ತಾಲೂಕಾ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್ಲ ಮಾತನಾಡಿ, ಭಾರತದ ಇತಿಹಾಸದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮಹಾರಾಣಾ ಪ್ರತಾಪಸಿಂಹರಂತಹ ಶೂರ ಧೀರರು ತಮ್ಮ ತಮ್ಮ ವೈಯಕ್ತಿಿಕ ಆದಾಯಕ್ಕಾಾಗಿ ಹೋರಾಟ ಮಾಡಿಲ್ಲ.ದೇಶದ ಹಿತರಕ್ಷಣೆಗಾಗಿ ಹೋರಾಡಿದರು ಎಂದರು.
ಉಪನ್ಯಾಾಸಕರಾಗಿ ಆಗಮಿಸಿದ ರಾಜನಾರಾಯಣ ನಲವಡೆ, ಸಮಾಜ ಸೇವಕ ಉದಯ ರಾಯಚೂರ ಮಾತನಾಡಿ, ಕೆಲವು ಅಂಕಣಕಾರರು ತಮ್ಮ ಹೆಸರನ್ನು ಬಹಿರಂಗಪಡಿಸಿಕೊಳ್ಳಲು ಶಿವಾಜಿ ಮಹಾರಾಜರ ಇತಿಹಾಸ ತಿರುಚಿ ಬರೆಯುವ ಕೆಟ್ಟ ಚಾಳಿ ರೂಢಿಸಿಕೊಂಡಿದ್ದಾಾರೆ.ಸತ್ಯಾಾಸತ್ಯತೆಯ ಇತಿಹಾಸ ಹೊರ ಹಾಕಿದರೆ ಎಲ್ಲ ಸಮುದಾಯಕ್ಕೆೆ ಒಳಿತಾಗುತ್ತದೆ.ಶಿವಾಜಿಯವರಲ್ಲಿದ್ದ ದೇಶ ಪ್ರೇೇಮ, ಮಾತೃಪ್ರೇೇಮ, ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಕಂಡು ಬಂದರೆ ಅಂದಿನ ಕಾಲದಲ್ಲಿ ತಕ್ಕ ಶಿಕ್ಷೆ ನೀಡುವ ಪದ್ಧತಿಗಳು ಆದರ್ಶವಾಗಿದ್ದವು ಎಂದರು.
ಮೆರಣಿಗೆಯು ಶಿವಾಜಿ ಮಹಾರಾಜರ ವೃತ್ತಕ್ಕೆೆ ಆಗಮಿಸುತ್ತಿಿದ್ದಂತೆ ಮರಾಠಾ ಸಮಾಜ ಬಾಂಧವರ ನೇತೃತ್ವದಲ್ಲಿ ಆಯೋಜಿಸಲಾದ ಧ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾಾರ ಕೀರ್ತಿ ಚಾಲಕ ನೆರವೇರಿಸಿದರು.
ಜಯಂತಿ ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಗೌರವಾಧ್ಯಕ್ಷ ರಾಜೇಂದ್ರ ಭೋಸಲೆ, ಉಪಾಧ್ಯಕ್ಷ ಅಣ್ಣಾಾಜಿ ಪವಾರ, ರಾಘವೇಂದ್ರ ಘಾಟಗೆ, ಖಜಾಂಚಿ ರಮೇಶ ಥೋರಾತ, ರವಿ ಭೋಸಲೆ, ಪ್ರ.ಕಾರ್ಯದರ್ಶಿ ಕೃಷ್ಣಾಾಜಿ ಪವಾರ. ಹಣಮಂತ ನಲವಡೆ, ಭರತ ಭೋಸಲೆ, ಮಾರುತಿ ನಲವಡೆ, ರಾಘವೇಂದ್ರ ನಲವಡೆ, ಸಚಿನ ಸಾಳುಂಕೆ, ಕಿರಣ ಪವಾರ, ಅನೀಲ ಜಾಧವ, ಅನೀಲ ಪವಾರ, ಸಂತೋಷ ಚವ್ಹಾಾಣ, ವಿನಾಯಕ ಘಾಟಗೆ, ವಿನೋದ ಜಾಧವ, ಲೋಹಿತ್ ಘಾಟಗೆ, ಗಣೇಶ ಘಾಟಗೆ, ಕೃಷ್ಣಾಾ ಭೋಸಲೆ, ಗಜಾನನ ನಲವಡೆ, ಬಸವರಾಜ ಸೂರ್ಯವಂಶಿ, ಸಂತೋಷ ಸಾಳುಂಕೆ, ಈಶ್ವರಪ್ಪ ಪವಾರ, ವೀರೇಶ ಹಾದಿಮನಿ,ಶಿವಾಜಿ ಬಿಜಾಪುರ, ಬಿಜೆಪಿ ನಿಕಟಪೂರ್ವ ಜಿಲ್ಲಾಾ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ, ಪ್ರಭು ಕಡಿ, ಭೀಮಾಜಿ ಘಾಟಗೆ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಮಾಣಿಕಚಂದ ದಂಡಾವತಿ, ಸುರೇಶಗೌಡ ಪಾಟೀಲ, ವಿಜಯಕುಮಾರ ಬಡಿಗೇರ, ನಾಗೇಶ ಲಾತೂರಕರ, ಗೌರಿಶಂಕರ ಹಿರೇಮಠ,ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ತಾಲೂಕಾ ದೈಹಿಕ ಪರಿವೀಕ್ಷಕ ಎ.ಜೆ.ದಖನಿ ಇದ್ದರು.ಟಿ.ಡಿ.ಲಮಾಣಿ ಸ್ವಾಾಗತಿಸಿ, ನಿರೂಪಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ