Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಪರಿಷತ್ ಕಲಾಪದಲ್ಲಿ ಸಿಟಿ ರವಿ ವಾಗ್ದಾಳಿ ಬೆಲೆ ಏರಿಕೆ, ಭ್ರಷ್ಟಾಚಾರ ಕೂಪದಲ್ಲಿ ಸರ್ಕಾರ

ಸುದ್ದಿಮೂಲ ವಾರ್ತೆ ಬೆಂಗಳೂರು, ೆ.02:
ಬೆಲೆ ಏರಿಕೆ, ಭ್ರಷ್ಟಾಾಚಾರ, ಅಪರಾಧ ಸೇರಿದಂತೆ ವಿವಿಧ ಕಾರಣಕ್ಕಾಾಗಿ ರಾಜ್ಯ ಸರ್ಕಾರ ಸುದ್ದಿಯಲ್ಲಿದೆ. ಭ್ರಷ್ಟಾಾಚಾರ ವಿಷಯದಲ್ಲಿ ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬ ಮಾತು ಕಾಂಗ್ರೆೆಸ್ ಸರ್ಕಾರಕ್ಕೆೆ ಅನ್ವಯವಾಗಲಿದೆ ಎಂದು ಮೇಲ್ಮನೆ ಬಿಜೆಪಿ ಸದಸ್ಯ ಸಿ.ಟಿ.ರವಿ ವ್ಯಂಗ್ಯವಾಡಿದರು.
ರಾಜ್ಯಪಾಲರ ಭಾಷಣದ ಮೇಲೆ ವಂದನಾ ನಿರ್ಣಯ ಚರ್ಚೆ ವೇಳೆ ಮಾತನಾಡಿ, ಪಹಣಿ, ಛಾಪಾ ಕಾಗದ ದರವನ್ನು ಸರ್ಕಾರ ಏರಿಸಿದೆ. ಪೊಲೀಸ್ ಇನ್‌ಸ್‌‌ಪೆಕ್ಟರ್ 4 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಟ್ರ್ಯಾಾಪ್ ಗೆ ಸಿಕ್ಕಿಿಬಿದ್ದಿದ್ದಾರೆ. ಶೇ.40ರಷ್ಟಿಿದ್ದ ಕಮೀಷನ್ ಶೇ. 60ಕ್ಕೆೆ ಹೆಚ್ಚಿಿದೆ ಎಂದು ಗುತ್ತಿಿಗೆದಾರರೇ ಹೇಳಿದ್ದಾರೆ. ಇದಕ್ಕೆೆ ಹೆಚ್ಚುವರಿಯಾಗಿ ವೈಸ್‌ಡಿ ಸೆಸ್ ಎಂದು ಶೇ.5ರಷ್ಟು ಹಾಕಲಾಗಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಹೇಳದೆ ಟೀಕಿಸಿದರು.
ವೈಎಸ್ ಡಿ ಸೆಸ್ ಕಾರಣಕ್ಕಾಾಗಿ ಸಚಿವರೊಬ್ಬರು ರಾಜೀನಾಮೆ ನೀಡಲು ಹೋಗಿದ್ದರು ಎಂದು ಹೇಳುತ್ತಿಿದ್ದಂತೆ ಆಕ್ಷೇಪಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್, ಸಚಿವರೆಂದರೆ ಯಾರು ಎಂದು ಪ್ರಶ್ನಿಿಸಿದರು. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡುವ ತಪ್ಪುು ಮಾಡಬೇಡಿ. ಸಚಿವ ಸ್ಥಾಾನಕ್ಕೆೆ ಟವೆಲ್ ಹಾಕಿರುವವರ ಸಂಖ್ಯೆೆ ಹೆಚ್ಚಿಿದೆ. ಈ ಬಗ್ಗೆೆ ಪ್ರತಿಭಟಿಸಿ ಎಂದು ಸಲಹೆ ನೀಡಿ ಪರೋಕ್ಷವಾಗಿ ಜಾರ್ಜ್ ಗೆ ಸಲಹೆ ನೀಡಿದರು.
ಸಾಮಾಜಿಕ ಅನ್ಯಾಾಯದ ಸರ್ಕಾರ:
ಬಿಜೆಪಿ ಸರ್ಕಾರವಿದ್ಧಾಾಗ ಹಿಂದುಳಿದ ವರ್ಗಗಳಿಗೆ 571 ಕೋಟಿ ರೂ. ಹಣ ಬಿಡುಗಡೆ ಮಾಡಿತ್ತು. ಹಿಂದುಳಿದ ವರ್ಗಗಳ ಚಾಂಪಿಯನ್ ಎಂದೆನಿಸಿಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2023-24ನೇ ಸಾಲಿನಲ್ಲಿ 150 ಕೋಟಿ ರೂ. ಅನುದಾನ ನೀಡಿದೆ. ಹೀಗಾಗಿ ಸಾಮಾಜಿಕ ನ್ಯಾಾಯ ಸರ್ಕಾರವಲ್ಲ.. ಅನ್ಯಾಾಯದ ಸರ್ಕಾರ ಎಂದು ಟೀಕಿಸಿದರು.
ರಾಜ್ಯಪಾಲರ ಭಾಷಣದಲ್ಲಿ ಶಿಸ್ತುಬದ್ದ ಸರ್ಕಾರ ಎಂದು ಉಲ್ಲೇಖಿಸಿದೆ. ಈ ಮಾತು ನಿಜವಾಗಿದ್ದರೆ 7.86 ಲಕ್ಷ ಕೋಟಿ ಸಾಲ ಯಾಕೆ ಮಾಡಬೇಕಿತ್ತು. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬ ಧೋರಣೆಯನ್ನ ಈ ಸರ್ಕಾರ ತೋರಿದೆ. ಡ್ರಗ್ಸ್, ಸೈಬರ್ ಹಾಗೂ ಆತ್ಯಾಾಚಾರ ಪ್ರಕರಣಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 23,113 ಸಕ್ರಿಿಯ ರೌಡಿಗಳಿದ್ಧಾಾರೆ. ಬೆಂಗಳೂರಿನಲ್ಲಿಯೇ 6,110 ರೌಡಿಗಳಿದ್ದಾರೆ. ಮೊದಲು ಇವರ ನಟ್ಟು-ಬೋಲ್ಟ್ ಅನ್ನು ಸರಿಪಡಿಸಿ. ಸಿನಿಮಾ ಕಲಾವಿದರಿಗಲ್ಲ. ರಸ್ತೆೆ ಹಾಗೂ ಮೂಲಸೌಕರ್ಯ ಬಗ್ಗೆೆ ಐಟಿ-ಬಿಟಿ ಕಂಪೆನಿಗಳ ಮುಖ್ಯಸ್ಥರು ಪ್ರಶ್ನಿಿಸಿದರೆ ಅವರ ಮೇಲೆ ಮುಗಿಬೀಳಲಿದೆ. ಮೊದಲು ರೌಡಿಗಳ ನಟ್ಟು-ಬೋಲ್ಟ್ ಸರಿಪಡಿಸಿ ಎಂದು ಅವರು ಕಿಡಿಕಾರಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ