Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

25 ಸಾವಿರಕ್ಕೂ ಅಧಿಕ ಓಟಗಾರರಿಂದ ‘ಸಿಟಿ ರನ್‌’ ಯಶಸ್ವಿ

ಸುದ್ದಿಮೂಲ ವಾರ್ತೆ

ಬೆಂಗಳೂರು, ಅ. 08 : ಸರ್ವೀಸಸ್‌ ಸ್ಪೋರ್ಟ್ಸ್‌ ಕಂಟ್ರೋಲ್‌ ಬೋರ್ಡ್‌ನ ಅನೀಶ್‌ ಥಾಪ ಹಾಗೂ ಮಹಾರಾಷ್ಟ್ರದ ಜ್ಯೋತಿ ಗಾವಟೆ ವಿಪ್ರೋ ಬೆಂಗಳೂರು ಮ್ಯಾರಥಾನ್‌ನ ಚಾಂಪಿಯನ್ನರಾಗಿ ಹೊರಹೊಮ್ಮಿದ್ದಾರೆ.

ನಭಾನುವಾರ ಗರದಲ್ಲಿ ನಡೆದ ಓಟದ ಸ್ಪರ್ಧೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಬೆಳಗ್ಗಿನ ಜಾವ ಓಟಕ್ಕೆ ಚಾಲನೆ ನೀಡಿದರು. 25000ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯಿತು. 42.195 ಕಿಲೋ ಮೀಟರ್‌ಗಳ ಪೂರ್ಣ ಮ್ಯಾರಥಾನ್‌, 21.1 ಕಿಲೋ ಮೀಟರ್‌ಗಳ ಹಾಫ್‌ ಮ್ಯಾರಥಾನ್‌ ಹಾಗೂ 5 ಕಿಲೋ ಮೀಟರ್‌ಗಳ ಹೋಪ್‌ ರನ್‌.

ಅನೀಶ್‌ ಥಾಪಗಿದು ಈ ವರ್ಷದಲ್ಲಿ 2ನೇ ಗೆಲುವು. ಅವರು ಎನ್‌ಇಬಿ ಸ್ಪೋರ್ಟ್ಸ್‌ ಆಯೋಜಿಸಿದ್ದ ನವದೆಹಲಿ ಮ್ಯಾರಥಾನ್‌ನಲ್ಲೂ ಗೆಲುವು ಸಾಧಿಸಿದ್ದರು. ಭಾನುವಾರ ಅನೀಶ್‌ 2 ಗಂಟೆ 18.06 ನಿಮಿಷಗಳಲ್ಲಿ ಮ್ಯಾರಥಾನ್‌ ಓಟ ಪೂರ್ತಿಗೊಳಿಸಿ ತಮ್ಮ ಪ್ರತಿಸ್ಪರ್ಧಿಗಳಾದ ಅಕ್ಷಯ್‌ ಸೈನಿ (ಎಸ್‌ಎಸ್‌ಸಿಬಿ) ಹಾಗೂ ಕುಲ್ದೀಪ್‌ ಸಿಂಗ್‌ (ಉತ್ತರ ಪ್ರದೇಶ) ರನ್ನು ಸೋಲಿಸಿದರು.

3 ಗಂಟೆ 8.53 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದ ಜ್ಯೋತಿ ಗಾವಟೆ, ಮಹಾರಾಷ್ಟ್ರದವರೇ ಆದ ತಮ್ಮ ಪ್ರತಿಸ್ಪರ್ಧಿ ಅಶ್ವಿನಿ ಜಾಧವ್‌(3 ಗಂಟೆ 9.00 ನಿಮಿಷ)ರನ್ನು ಮಣಿಸಿ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ‘ಇಷ್ಟೊಂದು ಪ್ರಮಾಣದಲ್ಲಿ ಬೆಂಗಳೂರಿನ ನಾಗರಿಕರು ಇಷ್ಟು ಬೆಳಗ್ಗೆ ಎದ್ದು ಓಟದ ಸ್ಪರ್ಧೆಗೆ ಬಂದಿರುವುದನ್ನು ನೋಡಿ ಬಹಳ ಖುಷಿಯಾಗುತ್ತದೆ’ ಎಂದರು.

ರೇಸ್‌ ನಿರ್ದೇಶಕ ನಾಗರಾಜ ಅಡಿಗ ಮಾತನಾಡಿ, ‘ವರ್ಷದಿಂದ ವರ್ಷಕ್ಕೆ ಹಲವು ಯುವ ಹಾಗೂ ಉತ್ಸಾಹಿ ಓಟಗಾರರು ಪಾಲ್ಗೊಳ್ಳುತ್ತಿರುವುದನ್ನು ನೋಡಲು ಖುಷಿಯಾಗುತ್ತದೆ ಎಂದರು.

ವಿಜೇತರಿಗೆ ಪ್ರಶಸ್ತಿ ವಿತರಿಸಿದ ಕ್ರೀಡಾ ಸಚಿವ ಬಿ. ನಾಗೇಂದ್ರ, ಬೆಂಗಳೂರಿಗರ ಉತ್ಸಾಹ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಆಸಕ್ತಿ ತೋರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಕರ್ನಾಟಕ ಒಲಿಂಪಿಕ್ಸ್‌ ಸಂಸ್ಥೆ ಅಧ್ಯಕ್ಷ ಕೆ.ಗೋವಿಂದರಾಜು, ಕ್ರೀಡೆಯು ಎಲ್ಲಾ ವರ್ಗದವರನ್ನು ಒಟ್ಟುಗೂಡಿಸುವ ಸಾಮರ್ಥ್ಯ ಹೊಂದಿದೆ ಎಂದರು. ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಅವರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು.

ಅರ್ಜುನ ಪ್ರಶಸ್ತಿ ವಿಜೇತೆ, ಓಟದ ರಾಯಭಾರಿ ಡಾ.ರೀತ್‌ ಅಬ್ರಾಹಂ ಮಾತನಾಡಿ, ‘ಓಟವು ನಗರ ಭಾಗಗಳಲ್ಲಿ ವಾಸಿಸುವ ಜನರ ಜೀವನದ ಭಾಗವಾಗಿದೆ. ಇಂತಹ ಕಾರ್ಯಕ್ರಮಗಳು ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತದೆ. ಮುಂದಿನ ಆವೃತ್ತಿಗಳಲ್ಲಿ ಇನ್ನಷ್ಟು ಜನರು ಪಾಲ್ಗೊಳ್ಳಲಿ ಎಂದು ಆಶಿಸುತ್ತೇನೆ ಎಂದರು.

ವಿಜೇತರು

ಪೂರ್ಣ ಮ್ಯಾರಥಾನ್

ಪುರುಷರ ಎಲೈಟ್‌ ವಿಭಾಗ: ಅನೀಶ್‌ ಥಾಪ (ಎಸ್‌ಎಸ್‌ಸಿಬಿ; 2:18.06), ಅಕ್ಷಯ್‌ ಸೈನಿ (ಎಸ್‌ಎಸ್‌ಸಿಬಿ: 2:25:04), ಕುಲ್ದೀಪ್‌ ಸಿಂಗ್‌ (ಉತ್ತರ ಪ್ರದೇಶ; 2:26:38)

ಮಹಿಳೆಯರ ಎಲೈಟ್‌ ವಿಭಾಗ: ಜ್ಯೋತಿ ಗಾವಟೆ (ಮಹಾರಾಷ್ಟ್ರ; 3:08:53), ಅಶ್ವಿನಿ ಜಾಧವ್‌ (ಮಹಾರಾಷ್ಟ್ರ; 3: 09:00), ಪ್ರಾಚಿ ಗೋಡ್ಬೊಲೆ (ಮಹಾರಾಷ್ಟ್ರ 4:13:17)

ಹಾಫ್‌ ಮ್ಯಾರಥಾನ್‌

ಪುರುಷರು: ವೈಭ್‌ ಪಾಟೀಲ್‌, ನಂಜುಡಪ್ಪ ಮುನಿಯಲ್ಲಪ್ಪ, ಗುರುಪ್ರಸಾದ್‌.ಮಹಿಳೆಯರು: ಬಿಜೋಯ ಬರ್ಮನ್‌, ದೀಪಾ ನಾಯಕ್‌, ಕೋಮಲ್‌ ಸ್ವಾಹ್ನೆ

 

 
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ