ಜೀರೋ ಟ್ರಾಫಿಕ್ ವ್ಯವಸ್ಥೆ ಆಯಕ್ತರ ವಿರುದ್ದ ಸಿಎಂ ಗರಂ
ಸುದ್ದಿಮೂಲ ವಾರ್ತೆ
ಮೈಸೂರು, ಜೂನ್ 10 : ತಮಗೆ ಬೇಡ ಎಂದಿದ್ದರೂ ಝೀರೊ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದ ಮೈಸೂರು ಪೊಲೀಸ್ ಆಯುಕ್ತರ ವಿರುದ್ಧ ಮುಖ್ಯಮಂತ್ರಿಗಳು ಗರಂ ಆದ ಘಟನೆ ನಡೆದಿದೆ. ನನಗೆ ಝೀರೊ ಟ್ರಾಫಿಕ್ ಯಾಕೆ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡರು.
ಬಿಳಿಗೆರೆಯಿಂದ ಸಂಜೆ ಜಿಲ್ಲಾ ಪಂಚಾಯಿತಿಗೆ ಸಿದ್ದರಾಮಯ್ಯ ಆಗಮಿಸಿದ್ದರು. ಝೀರೊ ಟ್ರಾಫಿಕ್ ಏಕೆ ಮಾಡಿದ್ದೀರಾ? ನನಗೆ ಝೀರೊ ಟ್ರಾಫಿಕ್ ಸೌಲಭ್ಯ ಬೇಡ ಎಂದು ಹೇಳಿರುವುದು ನಿಮಗೆ ಗೊತ್ತಿದೆಯಾ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ ಏನನ್ನೂ ಮಾತನಾಡದೇ ಪೊಲೀಸ್ ಆಯುಕ್ತರು ನಿಂತಿದ್ದರು. ಆಗ ʼಡೋಂಟ್ ಡೂ ದಟ್ʼ ಎಂದು ಸಿದ್ದರಾಮಯ್ಯ ಅವರು ಪೊಲೀಸ್ ಆಯುಕ್ತರಿಗೆ ಎಚ್ಚರಿಕೆ ನೀಡಿದರು.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಝೀರೊ ಟ್ರಾಫಿಕ್ ಸೌಲಭ್ಯ ಬೇಡ ಎಂದಿದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.