Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರ್ಣಯ ಮಂಡನೆಗೆ ಅಡ್ಡಿ: ಸಿಎಂ ಗರಂ

ಸುದ್ದಿಮೂಲ ವಾರ್ತೆ ಬೆಂಗಳೂರು, ೆ.03:
ಅಬಕಾರಿ ಇಲಾಖೆಯ ಭ್ರಷ್ಟಾಾಚಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಗಂಭೀರ ಚರ್ಚೆಗೆ ಸದನದಲ್ಲಿ ಮುಂದಾಗುವುದನ್ನು ಮನಗಂಡ ಮುಖ್ಯಮಂತ್ರಿಿ ಸಿದ್ದರಾಮಯ್ಯ, ಚರ್ಚೆಯನ್ನು ಮೊಟಕುಗೊಳಿಸಿ ಸರ್ಕಾರದ ಅಧಿಕೃತ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾಾದ ಕಾರಣವಾಗಿ ಸದನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಹೊಸ ವರ್ಷದ ಮೊದಲ ಅಧಿವೇಶನವನ್ನು ರಾಜ್ಯಪಾಲರ ಭಾಷಣದೊಂದಿಗೆ ಆರಂಭಿಸಲಾಯಿತು. ಕೊನೆಯ ಎರಡು ದಿನಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆೆ ಚರ್ಚೆ ನಡೆಸಲು ಅಜೆಂಡ ನಿಗದಿಪಡಿಸಲಾಗಿತ್ತು.
ಇಂದು ಬೆಳಗ್ಗೆೆ 10 ಗಂಟೆಗೆ ನಿಗದಿಯಾಗಿದ್ದ ಅಧಿವೇಶನ ಒಂದು ಕಾಲು ಗಂಟೆ ತಡವಾಗಿ ಆರಂಭವಾಯಿತು. ಅಜೆಂಡಾ ಪ್ರಕಾರ ಮುಖ್ಯಮಂತ್ರಿಿಯವರು ಅಧಿಕೃತ ನಿರ್ಣಯ ಮಂಡಿಸುವ ವಿಷಯ ಸೂಚಿ ನಿಗದಿಯಾಗಿತ್ತು. ಆದರೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹಠದಿಂದಾಗಿ ನಿಯಮ 69ರ ಅಡಿ ಅಬಕಾರಿ ಇಲಾಖೆಯ ಭ್ರಷ್ಟಾಾಚಾರದ ಚರ್ಚೆಗೆ ಸಭಾಧ್ಯಕ್ಷ ಯು.ಟಿ.ಖಾದರ್ ಅವಕಾಶ ಮಾಡಿಕೊಟ್ಟರು.
ಅಶೋಕ್ ಅವರು ನಿರಂತರವಾಗಿ ಅಬಕಾರಿ ಇಲಾಖೆಯ ಭ್ರಷ್ಟಾಾಚಾರವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಆನಂತರ ಬಿಜೆಪಿಯ ಶಾಸಕರು ಮಾತನಾಡಲು ಎದ್ದು ನಿಂತಾಗ ಸಿಟ್ಟಾಾದ ಸಿದ್ದರಾಮಯ್ಯ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ನಿರ್ಧಾರವಾದ ಪ್ರಕಾರ, ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ಮಾತ್ರ ಮಾತನಾಡಲು ಅವಕಾಶ ನೀಡಬೇಕು. ಅವರು ಒಂದು ಗಂಟೆ ಮಾತ್ರ ಮಾತನಾಡಬೇಕು. ಉಳಿದಂತೆ ಕಾರ್ಯ ಕಲಾಪ ಪಟ್ಟಿಿಯಲ್ಲಿರುವ ಕಾರ್ಯಸೂಚಿಯ ಪ್ರಕಾರವೇ ಸದನ ನಡೆಯಬೇಕು ಎಂಬ ನಿರ್ಧಾರವಾಗಿತ್ತು. ಅಶೋಕ್ ಅವರು 2 ಗಂಟೆ ಮಾತನಾಡಿದ್ದಾರೆ. ಈಗ ಒಬ್ಬರಾದ ನಂತರ ಒಬ್ಬರಂತೆ ಮಾತನಾಡುತ್ತೇವೆ ಎಂದು ಕೇಳುತ್ತಿಿದ್ದಾರೆ. ಇದು ಸರಿಯಲ್ಲ. ಚರ್ಚೆಯನ್ನು ಮೊಟೊಕುಗಳಿಸಿ ಸರ್ಕಾರದ ಅಧಿಕೃತ ನಿರ್ಣಯ ಮಂಡನೆಗೆ ಅವಕಾಶ ಮಾಡಿಕೊಡಿ ಎಂದು ಸಿದ್ದರಾಮಯ್ಯ ಸಭಾಧ್ಯಕ್ಷರಲ್ಲಿ ಆಗ್ರಹಿಸಿದರು.
ಇದಕ್ಕೆೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಮತ್ತು ಜೆಡಿಎಸ್ ನ ಸದಸ್ಯರು, ಸರ್ಕಾರ ಭ್ರಷ್ಟಾಾಚಾರದಲ್ಲಿ ಮುಳುಗಿಹೋಗಿದೆ. ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುತ್ತಿಿದೆ. ಅದರ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದರೆ ಹೇಗೆ ಎಂದು ವಾಗ್ವಾಾದಕ್ಕಿಿಳಿದರು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರು ಪ್ರತಿವಾದಕ್ಕಿಿಳಿದರು.ಆರೋಪ ಪ್ರತ್ಯಾಾರೋಪಗಳು ತೀವ್ರಗೊಂಡು ಸಾಧನದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಸಚಿವ ಪ್ರಿಿಯಾಂಕ ಖರ್ಗೆ, ಪತ್ರಿಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಓದಿ ಹೇಳಲು ವಿರೋಧ ಪಕ್ಷದ ನಾಯಕರು ಚರ್ಚೆ ಮಾಡಬೇಕೆ ಎಂದು ಮೂದಲಿಸಿದರು. ಇದನ್ನು ಒಪ್ಪದ ಆರ್. ಅಶೋಕ್ ತಾವು ಮಾಧ್ಯಮಗಳ ವರದಿಯನ್ನಷ್ಟೆೆ ಅಲ್ಲ ಆರೋಪಗಳ ದೂರು ಹಾಗೂ ವಿಚಾರಣೆಯ ಸಂದರ್ಭದಲ್ಲಿ ಹೇಳಿಕೆಗಳನ್ನು ಸಾಕ್ಷ್ಯಗಳನಾಗಿ ಒದಗಿಸಿದ್ದೇನೆ. ಸಚಿವ ಪ್ರಿಿಯಾಂಕ್ ಖರ್ಗೆ ಮಾಡುತ್ತಿಿರುವ ಆರೋಪ ಸಮರ್ಥನೆಯವಲ್ಲ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ