Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಧಿಕಾರಕ್ಕಾಾಗಿ ಕಾಂಗ್ರೆೆಸ್ ಮನೆ ಛಿದ್ರವಾಗಿದೆ: ವಿ. ಸೋಮಣ್ಣ ವಾಗ್ದಾಾಳಿ

ಸುದ್ದಿಮೂಲ ವಾರ್ತೆ ಮೈಸೂರು, ನ.23:
ಅಧಿಕಾರಕ್ಕಾಾಗಿ ನಡೆಯುತ್ತಿಿರುವ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆೆಸ್ ಮನೆಗೆ ಎಷ್ಟು ಬಾಗಿಲುಗಳಿವೆ ಎಂಬುದೇ ಗೊತ್ತಾಾಗುವುದಿಲ್ಲ. ಒಬ್ಬೊೊಬ್ಬರದು ಒಂದೊಂದು ದಿಕ್ಕು ಎಂದು ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ನಾಯಕರದು ಒಂದೊಂದು ಬಾಗಿಲು ಇದೆ. ಕಾಂಗ್ರೆೆಸ್ ಛಿದ್ರವಾಗಿ ಹೋಗಿದೆ. ಸಿಎಂ ಸಿದ್ದರಾಮಯ್ಯ ಅವರು ದಿಕ್ಕುದೆಸೆ ಇಲ್ಲದೆ ಸರ್ಕಾರ ನಡೆಸುತ್ತಿಿದ್ದಾರೆ. ಭ್ರಷ್ಟರೂ ಆಗಿಹೋಗಿದ್ದಾರೆ. ಅಧಿಕಾರದ ಹುಚ್ಚು ಹಾಗೂ ದರ್ಪ ಹೆಚ್ಚಾಾಗಿದೆ ಎಂದು ಆರೋಪಿಸಿದರು.
ರಾಜ್ಯದ ಮತದಾರರು ಕಾಂಗ್ರೆೆಸ್‌ಗೆ ಉತ್ತಮ ಆಡಳಿತ ನಡೆಸಲಿ ಎಂದು ಬಹುಮತ ಕೊಟ್ಟಿಿದ್ದಾರೆ. ಆದರೆ ಇದನ್ನು ಅವರು ಧಿಕ್ಕರಿಸಿ ಅಧಿಕಾರಕ್ಕಾಾಗಿ ಚೆಲ್ಲಾಟ ಆಡುತ್ತಿಿದ್ದಾರೆ. ರಾಜ್ಯದ ಅಭಿವೃದ್ಧಿಿ ಕಾರ್ಯಗಳೇ ನಡೆಯುತ್ತಿಿಲ್ಲ. ಕ್ರಾಾಂತಿ ಹಾಗೂ ಭ್ರಾಾಂತಿಯಲ್ಲೇ ಕಾಂಗ್ರೆೆಸ್ ನಾಯಕರು ಮುಳುಗಿದ್ದಾರೆ. ಇಂತಹ ಲಂಗ ಸರ್ಕಾರದ ಬಗ್ಗೆೆ ಮಾತನಾಡಲು ಬೇಸರ ಆಗುತ್ತದೆ ಎಂದು ಹೇಳಿದರು.
ನಾನು ನೋಡಿದ ಸಿದ್ದರಾಮಯ್ಯ ಈ ರೀತಿ ಇರಲಿಲ್ಲ. ಅವರೀಗ ಬಹಳ ಬದಲಾಗಿದ್ದಾರೆ. ಕಾಂಗ್ರೆೆಸ್‌ನಲ್ಲಿ ಕುದುರೆ ವ್ಯಾಾಪಾರ ಜೋರಾಗಿ ನಡೆಯುತ್ತಿಿದೆ. ಇಂದಿರಾಗಾಂಧಿ ಕಾಲದಿಂದಲೂ ಅದೇ ವ್ಯವಸ್ಥೆೆ ಇದೆ. ಕಳೆದೊಂದು ವರ್ಷದಿಂದ ಕುದುರೆ ವ್ಯಾಾಪಾರ ಜೋರು ಮಾಡಿಕೊಂಡಿದ್ದಾರೆ, ನಾನೆಷ್ಟು ಖರೀದಿಸಿದೆ ಎಂದು ಸಿದ್ದರಾಮಯ್ಯ ಅವರು ಲೆಕ್ಕ ಹಾಕುತ್ತಿಿದ್ದಾರೆ. ತಮ್ಮ ಬಳಿ ಎಷ್ಟು ಕುದುರೆಗಳು ಇವೆ ಎಂದು ಮತ್ತೊೊಂದ ಬಣ ಲೆಕ್ಕ ಹಾಕುತ್ತಿಿದೆ ಎಂದು ಟೀಕಿಸಿದರು.
ಕಾಂಗ್ರೆೆಸ್‌ನ ಈಗಿನ ಲಾಭವನ್ನು ಬಿಜೆಪಿ ಪಡೆಯುವುದಿಲ್ಲ. ನಮಗೆ ಅದರ ಆಸೆಯೂ ಇಲ್ಲ. ಜನರೇ ಅವರಿಗೆ ಬುದ್ಧಿಿ ಕಲಿಸಿ ನಮಗೆ ಅಧಿಕಾರ ನೀಡುತ್ತಾಾರೆ ಎಂದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ