Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಾಂಗ್ರೆೆಸ್‌ಗೆ ದಲಿತ ಸಮುದಾಯದ ಬಗ್ಗೆೆ ಕಾಳಜಿ ಇಲ್ಲ : ಎನ್. ಮಹೇಶ್

ಸುದ್ದಿಮೂಲ ವಾರ್ತೆ ಕಲಬುರಗಿ, ನ.29:
ಕಾಂಗ್ರೆೆಸ್ ಪಕ್ಷವು ದಲಿತ ಸಮುದಾಯವನ್ನು ಕೇವಲ ಮತಬ್ಯಾಾಂಕ್ ಆಗಿ ಬಳಸುತ್ತಾಾ ಬಂದಿದ್ದು, ಅವರಿಗೆ ಮುಖ್ಯಮಂತ್ರಿಿ ಸ್ಥಾಾನ ನೀಡುವ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ದೌರ್ಬಲ್ಯ ಪ್ರದರ್ಶಿಸುತ್ತಿಿದೆ ಎಂದು ಮಾಜಿ ಸಚಿವ ಎನ್. ಮಹೇಶ್ ವಾಗ್ದಾಾಳಿ ನಡೆಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಪತ್ರಿಿಕಾಗೋಷ್ಠಿಿಯಲ್ಲಿ ಸಂವಿಧಾನ ಜಾಗೃತಿಗೆ ಸಂಬಂಧಿಸಿದ ’ಭೀಮನಡೆ ಅಭಿಯಾನ’ ಕುರಿತು ಮಾತನಾಡಿದ ಅವರು, ಕಾಂಗ್ರೆೆಸ್‌ಗೆ ದಲಿತ ಸಮುದಾಯದ ಬಗ್ಗೆೆ ಕಾಳಜಿ ಇಲ್ಲ. 75 ವರ್ಷಗಳಿಂದ ದಲಿತ ಸಮುದಾಯ ಕಾಂಗ್ರೆೆಸ್‌ಗೆ ನಿರಂತರವಾಗಿ ಮತ ಹಾಕಿದ್ದರೂ ಅವರಿಗೆ ಸಿಎಂ ಸ್ಥಾಾನ ನೀಡಿಲ್ಲ ಎಂದು ಆರೋಪಿಸಿದರು.
ಎಸ್. ಎಂ. ಕೃಷ್ಣ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆೆಸ್ ಪಕ್ಷವನ್ನು ಅಧಿಕಾರಕ್ಕೆೆ ತಂದರು, ಆದರೆ,ಅವರನ್ನು ಸಿಎಂ ಸ್ಥಾಾನ ನೀಡದೇ ಹೊರಗಿಡಲಾಯಿತು.ಅಲ್ಲದೇ, ಪರಮೇಶ್ವರ್ ಅವರು ಸಹ ಪಕ್ಷವನ್ನು ಅಧಿಕಾರಕ್ಕೆೆ ತಂದರು, ಅವರನ್ನು ಸೋಲಿಸಿ ಹೊರಗಿಡಲಾಯಿತು. ದಲಿತ ಸಮುದಾಯ ಹೇಗಿದ್ದರೂ ಕಾಂಗ್ರೆೆಸ್‌ಗೆ ಮತ ಹಾಕುತ್ತಾಾರೆ ಎಂಬ ಕಾರಣಕ್ಕೆೆ ದಲಿತ ಸಮುದಾಯಕ್ಕೆೆ ಸಿಎಂ ಸ್ಥಾಾನ ನೀಡಲು ಕಾಂಗ್ರೆೆಸ್ ಪಕ್ಷ ಹಿಂದೇಟು ಹಾಕುತ್ತಿಿದೆ ಎಂದು ಟೀಕಿಸಿದರು.
ಪ್ರಧಾನಿ ಮೋದಿ ಅಧಿಕಾರ ವಹಿಸಿಕೊಂಡ ನಂತರ ಸಂವಿಧಾನ ದಿನ ಆಚರಣೆ ಆರಂಭವಾಯಿತು. ಸಂವಿಧಾನ ರಚಿಸಿದ್ದವರು ನಾವೇ ಎಂದು ಹೇಳುವ ಕಾಂಗ್ರೆೆಸ್ ಮತ್ತು ರಾಹುಲ್ ಗಾಂಧಿ ಅವರು ಈ ದಿನವನ್ನು ಏಕೆ ಆಚರಿಸಲಿಲ್ಲ ಎಂದು ಮಹೇಶ್ ಪ್ರಶ್ನಿಿಸಿದರು. 1975ರ ತುರ್ತು ಪರಿಸ್ಥಿಿತಿ, 1951ರಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೆರಲು ಮಾಡಿದ ತಿದ್ದುಪಡಿ ಸೇರಿದಂತೆ ಕಾಂಗ್ರೆೆಸ್ ತನ್ನ ಅಧಿಕಾರಾವಧಿಯಲ್ಲಿ 76 ಬಾರಿ ಸಂವಿಧಾನ ತಿದ್ದುಪಡಿ ಮಾಡಿ, ಪ್ರಜಾಪ್ರಭುತ್ವಕ್ಕೆೆ ಧಕ್ಕೆೆ ತಂದಿದೆ ಎಂದು ಆಪಾದಿಸಿದರು.
ಸುದ್ದಿಗೋಷ್ಠಿಿಯಲ್ಲಿ ಶಾಸಕ ಬಸವರಾಜ ಮತ್ತಿಿಮಡು, ಅವಿನಾಶ್ ಜಾಧವ, ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅವ್ವಣ್ಣ ಮ್ಯಾಾಕೇರಿ, ಅಂಬರಾಯ ಅಷ್ಟಗಿ, ರಾಜು ವಾಡೇಕಾರ್, ಶರಣಪ್ಪ ತಳವಾರ, ಶಿವಯೋಗಿ ನಾಗನಹಳ್ಳಿಿ ಲಿಂಗರಾಜ ಬಿರಾದಾರ, ವಿಶಾಲ್ ಧರ್ಗಿ, ಧರ್ಮಣ್ಣ ಇಟಗಿ, ದಿಲೀಪ್ ಪಾಟೀಲ್, ಸಂತೋಷ ಹಾದಿಮನಿ, ಬಾಬುರಾಯ ಹಾಗರಗುಂಡಗಿ, ನಾಗರಾಜ್ ಮಹಾಗಾಂವರ್ಕ ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ