Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಡಿಎಸ್ ಮತ್ತು ಕಾಂಗ್ರೆಸ್ ಕೋಳಿಯನ್ನು ಕತ್ತರಿಸಿ ನಮ್ಮ ಮಸಾಲೆ ಸೇರಿಸಿ: ಸಿ.ಟಿ. ರವಿ

ಸುದ್ದಿ ಮೂಲ ವಾರ್ತೆ

ಬೆಂಗಳೂರು, ಮಾ 21: ಕೂಲಿ ಮಾಡಿದವರು ಕೂಲಿ ಕೇಳುತ್ತಾರೆ. ಅದು ನ್ಯಾಯ ಹೌದಲ್ಲವೇ? ಹಾಗೆಯೇ ಕೆಲಸ ಮಾಡಿದವರಿಗೆ ಮತ ಕೊಡುವುದು ನ್ಯಾಯ ಅಲ್ಲವೇ? ಮಸಾಲೆ ಜಯರಾಂ ಅವರು ಕೆಲಸ ಮಾಡಿ ಮತ ಕೇಳಲು ಬಂದಿದ್ದಾರೆ. ಮತ ಕೊಟ್ಟು ಅವರ ಕೆಲಸದ ಕೂಲಿ ಕೊಡಿ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಿನಂತಿಸಿದರು.

ತುರುವೇಕೆರೆಯಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಬೃಹತ್ ರೋಡ್ ಷೋ ಸಂದರ್ಭದಲ್ಲಿ ಮಾತನಾಡಿ, ಮಸಾಲೆ ನಮ್ಮ ಬಳಿ ರೆಡಿ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಕೋಳಿಯನ್ನು ಕತ್ತರಿಸಿ ನಮ್ಮ ಮಸಾಲೆಯನ್ನು ಸೇರಿಸಿ ಎಂದು ವಿನಂತಿಸಿದರು. ಕೆಲವರು ದುಡ್ಡು ಮಾಡಲು ರಾಜಕೀಯಕ್ಕೆ ಬರುತ್ತಾರೆ. ಮಸಾಲೆ ಜಯರಾಂ ಅವರು ತಮ್ಮ ದುಡಿಮೆಯ ಹಣವನ್ನು ಖರ್ಚು ಮಾಡಿ ಜನಸೇವೆ ಮಾಡುತ್ತಿದ್ದಾರೆ. ಗಂಟು ಹೊಡೆದುಕೊಂಡು ಹೋಗುವವರಿಗೆ ಮತ ಕೊಡದಿರಿ ಎಂದರು.

ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಒಂದು ನಂಟಿದೆ. ಇಲ್ಲಿಗೆ ಹರಿಯುವ ಹೇಮಾವತಿ ತಾಯಿ ಉಗಮವಾಗುವುದು ನನ್ನ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಎಂದು ತಿಳಿಸಿದರು. ನಾವು ಅಲ್ಲಿಂದ ನೀರು ಕೊಡುತ್ತೇವೆ. ಕೆರೆ ತುಂಬಿಸಿ ಈ ಭಾಗದ ಜನರ ಬದುಕು ಹಸನು ಮಾಡಿದ್ದು ಬಿಜೆಪಿ ಸರಕಾರ ಯಡಿಯೂರಪ್ಪನವರು ಮತ್ತು ಮಸಾಲೆ ಜಯರಾಂ ಅವರು ಅದಕ್ಕಾಗಿ ಬಿಜೆಪಿ ಬೆಂಬಲಿಸಿ ಬಿಜೆಪಿಯ ಕಮಲವನ್ನು ಅರಳಿಸಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಸಚಿವ ಮಾಧುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದ ಬಸವರಾಜ್, ಶಾಸಕ ಮಸಾಲಾ ಜಯರಾಂ, ಯಾತ್ರೆ ಸಂಚಾಲಕ ಸಚ್ಚಿದಾನಂದ ಮೂರ್ತಿ ಮತ್ತಿತರರು ಸಹಸ್ರಾರು ಜನರು, ಕಾರ್ಯಕರ್ತರ ಜೊತೆ ರೋಡ್ ಷೋದಲ್ಲಿ ಭಾಗವಹಿಸಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ