Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ: ವೂಡೆ ಪಿ.ಕೃಷ್ಣ

ಸುದ್ದಿಮೂಲ ವಾರ್ತೆ
ಕೊರಟಗೆರೆ ಮೇ 1: ದೇಶ ಬಲಿಷ್ಠವಾಗಿ ನಿರ್ಮಾಣವಾಗಬೇಕಾದರೆ ಕೇವಲ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅವಶ್ಯಕ ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯರ್ದಶಿ ನಾಡೋಜ ಡಾ.ವೂಡೆ ಪಿ. ಕೃಷ್ಣ ತಿಳಿಸಿದರು.

ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಹಾಂಸ್ಥಾನ ಮಠದಲ್ಲಿ 2 ನೇ ಸಂಸ್ಕಾರ ಶಿಬಿರದಲ್ಲಿ ಸೋಮವಾರ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣವನ್ನು ಮಾಡಿದರು.

ಮಕ್ಕಳನ್ನು ನಾವು ಚಾರಿತ್ರ್ಯವಂತರಾಗಿ, ಶೀಲವಂತರಾಗಿ ರೂಪಿಸುವುದರ ಮೂಲಕ ಸದೃಡ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಬೇಕು. ಇಂದು ಶಾಲಾ ಕಾಲೇಜಿನಲ್ಲಿ ಕೇವಲ ಅಕ್ಷರ ಜ್ಞಾನವನಷ್ಟೇ ನೀಡುತ್ತಿದ್ದು ನೈತಿಕ ಶಿಕ್ಷಣಕ್ಕೆ ಆಧ್ಯತೆಯನ್ನು ನೀಡದಿರುವುದರ ಕಾರಣವೇ ಆತಂಕವಾದ ಹೆಚ್ಚುತ್ತಿದೆ ಎಂದು ವಿಷಾದಿಸಿದರು.

ಮಕ್ಕಳು ಬೇಸಿಗೆ ರಜೆಯಲ್ಲಿ ಕೇವಲ ಟಿ.ವಿ ಮೊಬೈಲ್ ಗಳ ದಾಸರಾಗುತ್ತಿದ್ದ ಈ ಸಮಯವನ್ನು ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಸಂಸ್ಕಾರಯುತ ನಮ್ಮ ಸಂಸ್ಕೃತಿಯನ್ನು ಸಾರುವಂತಹ ವಚನ, ದೇಸೀಯ ಕಲೆಗಳು, ನೃತ್ಯಗಳು, ನೀತಿ ಕತೆಗಳು ಶ್ಲೋಕ ಮತ್ತು ಹಾಡುಗಳನ್ನು ಕಲಿಸುವುದರ ಮೂಲಕ ಮಕ್ಕಳಲ್ಲಿ ನವಚೈತನ್ಯವನ್ನು ರೂಪಿಸಿದೆ. ಹಿಂದೆ ಕೇವಲ ಆದಿಚುಂಚನಗಿರಿ ಮಠದಲ್ಲಿ ಮಾತ್ರ ನಡೆಯುತ್ತಿದ್ದ ಸಂಸ್ಕಾರ ಶಿಬಿರ ಈಗ ಕುಂಚಿಟಿ ಮಹಾಸಂಸ್ಥಾನ ಮಠದಲ್ಲಿಯೂ ಆರಂಭವಾಗಿರುವುದು ಅತ್ಯುತ್ತಮ ಬೆಳವಣಿಗೆ ಎಂದರು.

ಕುಂಚಿಟಿಗ ಮಹಾಂಸ್ಥಾನ ಮಠದ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಕೇವಲ ಹಣ ಸಂಪಾದನೆಯನ್ನೇ ಮುಖ್ಯವಾಗಿಟ್ಟುಕೊಂಡು ಎಲ್ಲರು ಒತ್ತಡದ ಬದುಕಿನಲ್ಲಿ ಓಡುತ್ತಿದ್ದೀರಿ. ನಿಮ್ಮ ಮಕ್ಕಳನ್ನು ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನಾಗಿ ರೂಪಿಸಲು ಯಾರೂ ಚಿಂತಿಸುತ್ತಿಲ್ಲ. ಮಕ್ಕಳಿಗೆ ಕೇವಲ ಹಣ ನೀಡಿದರೆ ಎಲ್ಲವೂ ನೀಡಿದಂತೆ ಎನ್ನುವ ತಪ್ಪು. ಮಕ್ಕಳಿಗೆ ಸಂಸ್ಕಾರ, ಪ್ರೀತಿ, ಪ್ರೇಮ ಸಂಬಂಧಗಳ ಮೌಲ್ಯ ತಿಳಿಸದೇ ಹೋದಲ್ಲಿ ಎಲ್ಲವೂ ವ್ಯರ್ಥವಾಗಲಿದ್ದು ಎಲ್ಲರೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಸು ಹಾನಗಲ್ಲ,ಆಯುರ್ವೇದ ತಜ್ಞೆ ಡಾ. ಕೆ. ಸ್ನೇಹ, ವಿಶ‍್ರಾಂತ ಸಂಸ್ಕೃತ ಪ್ರಾಂಶುಪಾಲ ಡಾ. ವೆಂಕಟೇಶಪ್ಪ, ಮಕ್ಕಳ ತಜ್ಞ ಡಾ. ನವೀನ್ ದೇವರಾಜಯ್ಯ, ನಿವೃತ್ತ ಪ್ರಾಚಾರ್ಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ವಿಶ್ರಾಂತ ಸಿಂಡಿಕೇಟ್ ಸದಸ್ಯ ಡಾ. ಸಿ ನಂಜುಂಡಯ್ಯ, ಸರ್ಕಲ್ ಇನ್ಸ್ ಪೆಕ್ಟರ್ ಮುತ್ತುರಾಜ್, ಡಿ.ಸಿ ಶ್ರೀನಿವಾಸ್ ಮಾತನಾಡಿದರು.

ವೇದಿಕೆಯಲ್ಲಿ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಟಿ.ಎಸ್ ಕುಮಾರಸ್ವಾಮಿ, ಶಿಬಿರದ ನೇತೃತ್ವ ವಹಿಸಿದ್ದ ಡಾ. ರವೀಂದ್ರ, ಪ್ರೊ. ಬೋಗಣ್ಣ, ಶಿಕ್ಷಕರಾದ ಗಿರೀಶ್, ರಘು ಲಿಂಗರಾಜು ಸೇರಿದಂತೆ ಇತರರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ