Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಮ್ಮ ಕೈಗೆ ಫುಟ್ಬಾಲ್ ನೀಡುವೆ ಹಾಲಿ-ಮಾಜಿಗಳನ್ನು

ಸುದ್ದಿಮೂಲವಾರ್ತೆ

ಗಂಗಾವತಿ,ಏ.೧೦- ನಮ್ಮ ಪಕ್ಷದ ಚಿನ್ಹೆ ಫುಟ್ಬಾಲ್ ಆಗಿದ್ದು, ಕ್ಷೇತ್ರದ ಗೆಲುವಿನ ನಿರ್ಣಾಯಕರಾದ ನಿಮ್ಮ (ಮತದಾರ) ಕೈಗೆ ಫುಟ್ಬಾಲ್ ನೀಡುವೆ ಹಾಲಿ-ಮಾಜಿಗಳನ್ನು ಫುಟ್ಬಾಲ್ ಆಡಿ ಚುನಾವಣೆಯಲ್ಲಿ ಸೋಲಿಸಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಂಗಾವತಿ ವಿಧಾನ ಸಭಾ ಕ್ಷೇತ್ರದ ಈ ಪಕ್ಷದ ಘೋಷಿತ ಅಭ್ಯರ್ಥಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಹೇಳಿದರು.

ಗಂಗಾವತಿ ವಿಧಾನ ಸಭಾ ಕ್ಷೇತ್ರದ ಇರಕಲ್ಲಗಡ ಗ್ರಾಮದಲ್ಲಿ ಏರ್ಪಡಿಸಿದ್ದ ಪಕ್ಷದ ಪ್ರಚಾರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಭಾಗಕ್ಕೆ ಕೃಷ ಬಿ ಸ್ಕೀಂ ಮತ್ತು ನಾಲ್ಕು ಸಮಾನಾಂತರ ಜಲಾಶಯ ನಿರ್ಮಾಣ ಮಾಡುವ ಮೂಲಕ ಇಂಚಿಂಚು ಕೃಷಿ ಭೂಮಿಯನ್ನು ನೀರಾವರಿ ಮಾಡುವುದಾಗಿ ಭರವಸೆ ನೀಡಿದರು.

ಗಂಗಾವತಿ ಕ್ಷೇತ್ರವು ಮಹಾ ಕಾವ್ಯ ರಾಮಾಯಣ ಇತಿಹಾಸ ಹೊಂದಿದ್ದು ನಾನು ಇಲ್ಲಿ ಯಾರನ್ನು ಸೋಲಿಸಲು ಬಂದಿಲ್ಲ ಅಭಿವೃದ್ಧಿಯೇ ಮೂಲಮಂತ್ರ. ನಮ್ಮ ಪಕ್ಷದ ಚಿನ್ಹೆ ಫುಟ್ಬಾಲ್ ಆಗಿದ್ದು ಕ್ಷೇತ್ರದ ಗೆಲುವಿನ ನಿರ್ಣಾಯಕರಾದ ನಿಮ್ಮ (ಮತದಾರ) ಕೈಗೆ ಫುಟ್ಬಾಲ್ ನೀಡುವೇ ಹಾಲಿ-ಮಾಜಿಗಳನ್ನು ನೀವೇ ಫುಟ್ಬಾಲ್ ಆಡುವ ಮೂಲಕ ಗೆಲ್ಲಿಸಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಅರ್ಶಿವಾದ ನೀಡಿ ಎಂದು ಮನವಿ ಮಾಡಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರದ ಬುಡಶೆಟ್ನಾಳ್, ಲೇಬಗೇರಿ ಹಾಗೂ ಮುದ್ಲಾಪುರ ಗ್ರಾಮಗಳ ರೋಡ್ ಶೋ ಮತ್ತು ಪಕ್ಷ ಸೇರ್ಪಡೆ ಹಾಗೂ ಪಕ್ಷದ ಪ್ರಚಾರ ಕಾರ್ಯಕ್ರಮಗು ರೆಡ್ಡಿ ನೇತ್ರತ್ವದಲ್ಲಿ ಜರುಗಿದವು.
ಯುವ ಘಟಕದ ರಾಜ್ಯಾಧ್ಯಕ್ಷ ಭೀಮಾ ಶಂಕರ ಪಾಟೀಲ್, ಜಿಲ್ಲಾಧ್ಯಕ್ಷ ಮನೋಹರ ಗೌಡ ಹೇರೂರು, ನಗರ ಪ್ರಚಾರ ಸಮಿತಿ ಅಧ್ಯಕ್ಷ ಅಮರಜ್ಯೋತಿ ನರಸಪ್ಪ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಾಜೇಶ್ವರಿ ಸುರೇಶ್, ಗ್ರಾಮೀಣ ಘಟಕದ ಅಧ್ಯಕ್ಷ ದುರ್ಗಪ್ಪ ಆಗೋಲಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್ ಹಿರೂರು ಮುಖಂಡರಾದ ಸೈಯದ್ ಜಿಲಾನ್ ಪಾಷ, ಗಂಗಾವತಿ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಚನ್ನವೀರನಗೌಡ ಕೋರಿ ಇನ್ನೂ ಮುಂತಾದ ಪಕ್ಷದ ಹಿರಿಯರು,ಯುವಕರು ಮತ್ತು ಮಹಿಳಾ ಕಾರ್ಯಕರ್ತಯರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ