Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಉತ್ತರ ಕರ್ನಾಟಕದಲ್ಲಿಯೂ ದಸರಾ ಗೊಂಬೆ

ಸುದ್ದಿಮೂಲವಾರ್ತೆ

ಕೊಪ್ಪಳ,ಅ.24;ನಾಡಹಬ್ಬ ದಸರಾ ಸಂದರ್ಭದಲ್ಲಿ ಮನೆ ಮನೆಯಲ್ಲಿ ಗೊಂಬೆಗಳನ್ನು ಇಟ್ಟು ಪ್ರದರ್ಶನ ಮಾಡುತ್ತಾರೆ. ಈ ಪದ್ದತಿಯು ಹಳೆಯ ಮೈಸೂರು ಭಾಗದಲ್ಲಿ ಮಾತ್ರವಿದೆ. ಆದರೆ ಉತ್ತರ ಕರ್ನಾಟಕದಲ್ಲಿ ದಸರಾ ಪ್ರದರ್ಶನ ಮಾಡುವುದು ಅಪರೂಪ ಆದರೆ ಕೊಪ್ಪಳ ನಗರದಲ್ಲಿ ಕುಟುಂಬದಲ್ಲಿ ಕಳೆದ 50 ವರ್ಷಗಳಿಂದ ಗೊಂಬೆಗಳನ್ನು ಪ್ರದರ್ಶಿಸುತ್ತಾರೆ.

ದಸರಾ ಹಬ್ಬದ ಸಂದರ್ಭದಲ್ಲಿ ಮನೆಗಳಲ್ಲಿ ಬಣ್ಣ ಬಣ್ಣದ ವೈವಿದ್ಯಮಯ ಗೊಂಬೆಗಳನ್ನು ಸಾಲಾಗಿ ಇಟ್ಟು. ಗೊಂಬೆಗಳ ಪ್ರದರ್ಶನ ಮಾಡುವುದು ವಿಶೇಷ. ಈ ವಿಶೇಷತೆ ಕೊಪ್ಪಳದ ಕಡೆ ಕಾಣುವುದು ಅಪರೂಪ. ಆದರೆ ಕೊಪ್ಪಳ ನಗರದ ದೇವರಾಜ ಅರಸ ಕಾಲೋನಿಯಲ್ಲಿರುವ ಗದಗ ಕುಟುಂಬದಲ್ಲಿ ದಸರಾ ಗೊಂಬೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಮಲ್ಲಿಕಾರ್ಜುನ ಗದಗ ಹಾಗು ರವೀಂದ್ರ ಗದಗರ ಮನೆಯಲ್ಲಿ ನೂರಾರು ಗೊಂಬೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಅವರ ತಂದೆ ವೀರಣ್ಣ ಗದಗ ಜೋಗದಲ್ಲಿ ಕರ್ನಾಟಕ ಪವರ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು 30 ವರ್ಷ ಅವರು ಜೋಗದಲ್ಲಿದ್ದಾಗ ಅಲ್ಲಿ ಅಕ್ಕ ಪಕ್ಕದವರು ಗೊಂಬೆಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಆಗಿನಿಂದಲೂ ಅವರ ಕುಟುಂಬದಲ್ಲಿ ಗೊಂಬೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ. ಈ ಕುಟುಂಬವು ಕೊಪ್ಪಳಕ್ಕೆ ಬಂದು 23 ವರ್ಷದ ಹಿಂದೆ ಇಲ್ಲಿಗೆ ಬಂದಿದ್ದು ಆಗಿನಿಂದ ಪ್ರತಿ ವರ್ಷ ಮನೆಯಲ್ಲಿ ದಸರಾ ಗೊಂಬೆಗಳನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಜಾತ್ರೆಗಳಲ್ಲಿ. ಚನ್ನಪಟ್ಟಣ. ನಗರ ಪ್ರದೇಶದಲ್ಲಿರುವ ಅಂಗಡಿಗಳಲ್ಲಿ ವಿಶೇಷ ಗೊಂಬೆಗಳನ್ನು ಖರೀದಿಸಿ ಜೋಪಾನವಾಗಿಟ್ಟಿದ್ದಾರೆ. ದಸರಾ ಸಂದರ್ಭದಲ್ಲಿ ಎರಡು ದಿನಗಳ ಕಾಲ ಸುಂದರವಾಗಿ ಜೋಡಿಸಿಟ್ಟು ಅವುಗಳನ್ನು ಪ್ರದರ್ಶನ ಮಾಡುತ್ತಾರೆ.

ಎರಡು ದಿನವು ವಿಶೇಷವಾಗಿ ಪೂಜೆ ಸಲ್ಲಿಸಿ ನೈವೇದ್ಯ ಮಾಡುತ್ತಾರೆ. ಎರಡು ದಿನಗಳ ನಂತರ ಈ ಗೊಂಬೆಗಳನ್ನು ಮತ್ತೆ ಮುಂದಿನ ವರ್ಷಕ್ಕಾಗಿ ಜೋಪಾನವಾಗಿ ಎತ್ತಿಡುತ್ತಾರೆ. ಇದರಿಂದಾಗಿ ಇವರ ಕುಟುಂಬದಲ್ಲಿ ಸುಮಾರು 50 ವರ್ಷಗಳ ಹಿಂದಿನ ಗೊಂಬೆಗಳಿವೆ. ಈ ಗೊಂಬೆಗಳು ವಿಶಿಷ್ಠ ಹಾಗು ಆಕರ್ಷಕವಾಗಿವೆ. ಕೊಪ್ಪಳದಲ್ಲಿ ದಸರಾ ಗೊಂಬೆಗಳ ಪ್ರದರ್ಶನದ ನಮ್ಮ ಭಾಗದಲ್ಲಿ ಕೂಡಿಸುವದರಿಂದ ಸಾಕಷ್ಟು ಜನ ಬಂದು ನೋಡ್ತಾರೆ ಎಂದು ಹೇಳುತ್ತಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ