Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅಭಿವೃದ್ಧಿಿಗಾಗಿ ಸಿಎಂ ಜೊತೆ ಕೆಲಸ ಮಾಡುತ್ತೇನೆ: ಡಿಸಿಎಂ ಡಿಕೆಶಿ

ಸುದ್ದಿಮೂಲ ವಾರ್ತೆ ಬೆಂಗಳೂರು, ನ.30:
ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಭಿನ್ನಾಾಭಿಪ್ರಾಾಯ ಇಲ್ಲ ಎಂದು ಉಪ ಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆೆಗಳಿಗೆ ಅವರು ಭಾನುವಾರ ಪ್ರತಿಕ್ರಿಿಯೆ ನೀಡಿದರು.
ಸಿಎಂ ಹಾಗೂ ನಾನು ಒಟ್ಟಾಾಗಿ ಕೆಲಸ ಮಾಡುತ್ತಿಿದ್ದೇವೆ. ಉಪಹಾರ ಸಭೆಯಲ್ಲೂ ಒಟ್ಟಾಾಗಿ ಕೆಲಸ ಮಾಡುವ ಬಗ್ಗೆೆ ಚರ್ಚಿಸಿದ್ದೇವೆ. ರಾಜ್ಯದ ಜನ ನಮ್ಮ ಮೇಲೆ ಬಹಳ ನಿರೀಕ್ಷೆ ಹೊಂದಿದ್ದು, ನಾವು ಅದಕ್ಕೆೆ ತಕ್ಕಂತೆ ಕೆಲಸ ಮಾಡಬೇಕು. 2028 ರ ಚುನಾವಣೆ ನಮ್ಮ ಮುಂದಿನ ಗುರಿ ಎಂದು ತಿಳಿಸಿದರು.
ಬೆನ್ನಿಿಗೆ ಚೂರಿ ಹಾಕುವ ವ್ಯಕ್ತಿಿತ್ವ ಅಲ್ಲ :
ನಾನು ಯಾವತ್ತೂ ಗುಂಪುಗಾರಿಕೆ ಮಾಡುವುದಿಲ್ಲ. ನಾನು ದೆಹಲಿಗೆ ಹೋದರೆ ಒಬ್ಬನೇ ಹೋಗುತ್ತೇನೆ. ನಾನು 8-10 ಶಾಸಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬಹುದಿತ್ತು. ಅದು ದೊಡ್ಡ ವಿಚಾರವಲ್ಲ. ನಾನು ಅಧ್ಯಕ್ಷ ಸ್ಥಾಾನದಲ್ಲಿ ಇರುವಾಗ ಎಲ್ಲರನ್ನೂ ಒಟ್ಟಾಾಗಿ ಕರೆದುಕೊಂಡು ಹೋಗಬೇಕು. 140 ಶಾಸಕರೂ ನಮ್ಮ ನಾಯಕರು. ಯಾರಿಗೂ ತಾರತಮ್ಯ ಮಾಡಲ್ಲ. ನಾನು ಕುಮಾರಸ್ವಾಾಮಿ ಅವರ ಜತೆಯಲ್ಲೇ ನಿಷ್ಠೆೆಯಿಂದ ಕೆಲಸ ಮಾಡಿದ್ದೇನೆ. ಇದನ್ನು ಕುಮಾರಸ್ವಾಾಮಿ ಅವರು ಒಪ್ಪದೇ ಇರಬಹುದು, ನನ್ನ ನಿಷ್ಠೆೆ, ನನ್ನ ಆತ್ಮಸಾಕ್ಷಿ ಆ ದೇವರಿಗೆ ಗೊತ್ತಿಿದೆ. ಕುಮಾರಸ್ವಾಾಮಿ ಅವರ ಸರ್ಕಾರ ಉಳಿಸಲು ಕೊನೆ ದಿನದವರೆಗೂ ಎಷ್ಟು ಪ್ರಯತ್ನ ಮಾಡಿದ್ದೇನೆ ಎಂದು ಅವರ ತಂದೆಯವರಿಗೂ ಗೊತ್ತಿಿದೆ. ಅವರು ತಮ್ಮ ಆಸೆಗೆ ಏನಾದರೂ ಮಾತಾಡಿಕೊಳ್ಳಲಿ, ನಾನು ಬೇಸರ ಮಾಡಿಕೊಳ್ಳಲ್ಲ. ನಾನು ಎಂದಿಗೂ ಬೆನ್ನಿಿಗೆ ಚೂರಿ ಹಾಕಲ್ಲ. ನೇರವಾಗಿ ಹೋರಾಟ ಮಾಡುವವನು. ನಾನು ಕೆ. ಸಿ.ವೇಣುಗೋಪಾಲ್ ಸೇರಿದಂತೆ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ.
ಸರ್ವಪಕ್ಷ ಸಭೆ ಕುರಿತು ಸಿಎಂ ಜೊತೆ ಚರ್ಚೆ:
ನಾನು ಮತ್ತು ಸಿಎಂ ಈಗ ಹಲವು ಯೋಜನೆಗಳು, ಅಭಿವೃದ್ಧಿಿ ಕಾರ್ಯಕ್ರಮಗಳ ಬಗ್ಗೆೆ ಚರ್ಚೆ ಮಾಡಿದ್ದೇವೆ. ನೀರಾವರಿ, ಮೆಕ್ಕೆೆಜೋಳ ಹಾಗೂ ಕಬ್ಬು ಬೆಳೆ ಬಗ್ಗೆೆ ಸಂಸತ್ತಿಿನಲ್ಲಿ ಧ್ವನಿ ಎತ್ತುವ ಬಗ್ಗೆೆ ಸಂಸದರ ಜೊತೆ ಚರ್ಚೆ ಮಾಡಬೇಕು. ಸರ್ವಪಕ್ಷ ಸಭೆ ಕರೆಯಬೇಕು ಈ ಸಭೆಯಲ್ಲಿ ಎಲ್ಲಾ ಸಂಸದರು ಭಾಗವಹಿಸಬೇಕು. ಹೀಗಾಗಿ ಈ ಸಭೆಯನ್ನು ದೆಹಲಿಯಲ್ಲಿ ಮಾಡಬೇಕು ಎಂಬುದು ನನ್ನ ವೈಯಕ್ತಿಿಕ ಅಭಿಪ್ರಾಾಯ. ಈ ಕುರಿತು ಸಿಎಂ ಜೊತೆ ಚರ್ಚಿಸುತ್ತೇನೆ. ಬಿಜೆಪಿ ಅವಿಶ್ವಾಾಸ ನಿರ್ಣಯ ಮಂಡಿಸಲು ಮುಂದಾಗುತ್ತಿಿರುವ ಕ್ರಮವನ್ನು ಸ್ವಾಾಗತಿಸುತ್ತೇನೆ ಎಂದರು.
ಪ್ರಿಿಯಾಂಕ್ ಖರ್ಗೆ ಅವರು ತಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆಯವರನ್ನು ಆಗಾಗ ಭೇಟಿಯಾಗುತ್ತಿಿರುತ್ತಾಾರೆ. ಇದಕ್ಕೆೆ ಸುಮ್ಮನೆ ಇಲ್ಲದ ಅರ್ಥ ಕಲ್ಪಿಿಸಲು ಸಾಧ್ಯವಿಲ್ಲ. ಅಪ್ಪ ಮಗ ಮಾತನಾಡಲು ಅರ್ಜಿ ಹಾಕಿಕೊಳ್ಳಬೇಕೆ. ಪ್ರಿಿಯಾಂಕ್ ಖರ್ಗೆ ಅವರು ಎಐ ತಂತ್ರಜ್ಞಾನದ ಅತ್ಯುತ್ತಮ ಸಾಧನ ಪರಿಚಯಿಸಿದ್ದಾರೆ. ಇದರ ಉದ್ಘಾಾಟನೆಗೆ ರಾಹುಲ್ ಗಾಂಧಿ ಅವರನ್ನು ಆಹ್ವಾಾನಿಸಿದೆವು, ಅವರು ಬರಲು ಆಗಿರಲಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರು ಅದರ ಬಗ್ಗೆೆ ಮಾಹಿತಿ ಪಡೆಯಲು ಕರೆದಿದ್ದರು. ಹೀಗಾಗಿ ಪ್ರಿಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಅವರನ್ನು ಕರೆಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಇಲ್ಲೂ ರಾಜಕೀಯ ಮಾತನಾಡಿದ್ದಾರೆ ಎಂದು ಹೇಳಲು ಸಾಧ್ಯವೇ. ಬೇರೆಯವರು ಸೇರಿದಾಗ ನಿಮಗೆ ಲೆಕ್ಕಕ್ಕೆೆ ಇರುವುದಿಲ್ಲ. ನಮ್ಮದು ಮಾತ್ರ ಲೆಕ್ಕ ಹಾಕುತ್ತೀರಿ ಎಂದು ಹೇಳಿದರು.
ಬಾಕ್‌ಸ್‌
ಬದುಕಿದ್ದೇವೆ ಎಂಬುದನ್ನು ತೋರಿಸಲು ಮಾತನಾಡುತ್ತಾಾರೆ
ಶಿವಕುಮಾರ್ ಸೂಪರ್ ಸಿಎಂ ಆಗುತ್ತಿಿದ್ದಾರೆ ಎನ್ನುವ ಬಿಜೆಪಿ ನಾಯಕರ ಟೀಕೆಗೆ ಉತ್ತರಿಸಿದ ಡಿಕೆಶಿ, ಬಿಜೆಪಿ ವಿರೋಧ ಪಕ್ಷವಾಗಿ ಏನಾದರೂ ಮಾತನಾಡಬೇಕಲ್ಲ, ಬದುಕಿದ್ದೇವೆ ಎಂದು ತೋರಿಸಲು ಮಾತನಾಡುತ್ತಾಾರೆ. ಬಿಜೆಯವರ ಬಗ್ಗೆೆ ತಲೆ ಕೆಡಿಸಿಕೊಳ್ಳಲು ಆಗುತ್ತದೆಯೇ ಎಂದು ತಿರುಗೇಟು ಕೊಟ್ಟರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ