Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನವೆಂಬರ್ ಕ್ರಾಾಂತಿಯೋ, ದೈವಭಕ್ತಿಿಯೊ ಚರ್ಚೆ ಮುನ್ನೆೆಲೆಗೆ ದೀಪಾವಳಿಯಂದೆ ಡಿಸಿಎಂ ಡಿಕೆಶಿ ಟೆಂಪಲ್ ರನ್

ಸುದ್ದಿಮೂಲ ವಾರ್ತೆ ರಾಯಚೂರು, ಅ.20:
ರಾಜ್ಯದ ಕಾಂಗ್ರೆೆಸ್ ಸರ್ಕಾರದಲ್ಲಿ ನವೆಂಬರ್ ಕ್ರಾಾಂತಿಯ ಚರ್ಚೆ ಜೋರಾಗಿರುವ ಮಧ್ಯೆೆಯೇ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಮಂತ್ರಾಾಲಯ ಹಾಗೂ ಪಂಚಮುಖಿ ಭೇಟಿ ಕುತೂಹಲ ಹೆಚ್ಚಿಿಸಿದೆ.
ನವೆಂಬರ್ ಕ್ರಾಾಂತಿ, ಮುಖ್ಯಮಂತ್ರಿಿ ಬದಲಾವಣೆ ಎಂಬುದೆಲ್ಲ ಗಾಳಿ ಸುದ್ದಿಘಿ, ಮಾಧ್ಯಮಗಳ ಸೃಷ್ಠಿಿ ಅಂತೆಲ್ಲ ಹೇಳುತ್ತಲೆ ಡಿಸಿಎಂ ದೇವರುಗಳ ಮೊರೆ ಹೋಗುತ್ತಿಿರುವುದು ಸೃಷ್ಠಿಿಗಿಂತ ನಿಜವಿರಬಹುದೆ ಎಂಬ ಚರ್ಚೆ ಅವರದ್ದೆೆ ಪಕ್ಷದೊಳಗೆ ಮತ್ತು ಹೊರಗೂ ನಡೆಯುತ್ತಿಿದೆ.
ಈ ಮಧ್ಯೆೆ ದೀಪಾವಳಿಯಂದು ರಾಯಚೂರು ಜಿಲ್ಲೆೆಗೂ ಡಿ.ಕೆ.ಶಿವಕುಮಾರ ಅವರು ಭೇಟಿ ನೀಡುತ್ತಿಿರುವುದರಿಂದ ರಾಜಕೀಯವಾಗಿಯೂ ಮತ್ತು ದೇವರ ಮೇಲಿನ ಭಕ್ತಿಿಯಿಂದಲೂ ಸಾಧ್ಯ. ಅ.22ರಂದು ಬೆಳಿಗ್ಗೆೆ ರಾಯಚೂರಿಗೆ ಸಮೀಪ ಇರುವ ಮಂತ್ರಾಾಲಯದ ಶ್ರೀ ರಾಯರ ದರ್ಶನ ಪಡೆಯಲು ಆಗಮಿಸಲಿದ್ದು ಅ.21ರಂದೆ ರಾತ್ರಿಿ ಮಂತ್ರಾಾಲಯ ತಲುಪಿ ವಾಸ್ತವ್ಯ ಮಾಡಲಿದ್ದಾಾರೆ. 22ರ ಬೆಳಿಗ್ಗೆೆ ಶ್ರೀ ಗುರುರಾಘವೇಂದ್ರ ಸ್ವಾಾಮಿಗಳವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯಲಿದ್ದಾಾರೆ. ನಂತರ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರ ಆಶೀರ್ವಾದ ಪಡೆಯುವ ಕಾರ್ಯಕ್ರಮವಿದೆ.
ಅಲ್ಲಿಂದ ನೇರವಾಗಿ ರಾಯಚೂರು ತಾಲೂಕಿನ ಸುಕ್ಷೇತ್ರ ಗಾಣದಾಳಕ್ಕೆೆ ಆಗಮಿಸಿ ಅಲ್ಲಿನ ಶ್ರೀ ಪಂಚಮುಖಿ ಆಂಜನೇಯ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾಾರೆ.
ಈ ಎರಡೂ ಸುಕ್ಷೇತ್ರಗಳ ಭೇಟಿ ಒಂದೇ ದಿನ ದರ್ಶನ ಮಾಡುವುದರಿಂದ ಇಷ್ಟಾಾರ್ಥಗಳು ನೆರವೇರಲಿವೆ ಎಂಬ ಪ್ರತೀತಿ ಇದೆ ಎನ್ನುವ ಮಾಹಿತಿಯಿಂದಲೇ ಡಿಸಿಎಂ ಡಿ.ಕೆ.ಶಿವಕುಮಾರ ಅವರು ಈ ದರ್ಶನಕ್ಕೆೆ ಮುಂದಾಗಿದ್ದಾಾರೆ ಎನ್ನಲಾಗುತ್ತಿಿದೆ.
ಅಲ್ಲದೆ, ಅದೇ ದಿನ ಪಂಚಮುಖಿ ಗಾಣದಾಳದಲ್ಲಿ ರಾಯಚೂರು ಗ್ರಾಾಮಾಂತರ ಕ್ಷೇತ್ರದ ದೇವಸೂಗೂರು, ಗಿಲ್ಲೇಸೂಗೂರು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷರಾಗಿರುವ ರಾಜಶೇಖರ ರಂಗಾ, ನಾಗೇಂದ್ರಪ್ಪ ಮಟಮಾರಿ ಜೊತೆಗೆ ಇತ್ತೀಚೆಗೆ ವಿವಿಧ ಬ್ಲಾಾಕ್‌ಗಳಿಗೆ ಚುನಾಯಿತರಾಗಿರುವ ಪಕ್ಷದ ಮುಖಂಡರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸುತ್ತಿಿದ್ದಾಾರೆ ಎಂಬ ಸಮರ್ಥನೆ ಪಕ್ಷದ ನಾಯಕರದ್ದಾಾಗಿದೆ.
ಆದರೆ, ವಾಸ್ತವದಲ್ಲಿ ಡಿ.ಕೆ.ಶಿವಕುಮಾರ ಕ್ಷೇತ್ರದರ್ಶನಕ್ಕೆೆ ಬರುವುದರಿಂದ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾಾರೆ ಹೀಗಾಗಿ, ಕಾಗೆ ಕೂಡಲು, ಕೊಂಬೆ ಮುರಿಯಲು ಎಂಬ ಅಸ ಕಾಂಗ್ರೆೆಸ್ ನಾಯಕರ ಮಾತಿನಲ್ಲಿದೆ.
ಒಟ್ಟಾಾರೆ, ರಾಜ್ಯ ಸರ್ಕಾರದಲ್ಲಿಘಿ, ಕಾಂಗ್ರೆೆಸ್ ಪಕ್ಷದಲ್ಲಿ ನವೆಂಬರ್ ಕ್ರಾಾಂತಿ ಆಗುತ್ತದೊ ಇಲ್ಲವೊ, ರಾಯಚೂರು ಗ್ರಾಾಮಾಂತರದ ಪಕ್ಷದ ನಾಯಕರಲ್ಲಂತೂ ಸಂ ಕಾ(ಕ್ರಾಾ)ಂತಿಯಂತೂ ಆಗಲಿದೆ ಎಂಬುದರಲ್ಲಿ ಅನುಮಾನವಿಲ್ಲಘಿ.
ಡಿ.ಕೆ.ಶಿವಕುಮಾರ ಅವರು ಮಂತ್ರಾಾಲಯದ ಶ್ರೀರಾಯರ ಹಾಗೂ ಗಾಣದಾಳದ ಪಂಚಮುಖಿ ಆಂಜನೇಯ್ಯ ದೇವರ ದರ್ಶನಕ್ಕೆೆ ಬರಲಿದ್ದು ಅಂದೇ ಗ್ರಾಾಮಾಂತರದ ಎರಡೂ ಬ್ಲಾಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಆಯೋಜಿಸಿದ್ದು ರಾಜ್ಯಾಧ್ಯಕ್ಷರಾಗಿ ಅವರು ಭಾಗವಹಿಸಿ ಕಾರ್ಯಕರ್ತರ, ಮುಖಂಡರ ಜೊತೆ ಸಭೆ ಮಾಡಲಿದ್ದಾಾರೆ ಎಂದು ಶಾಸಕ ಬಸನಗೌಡ ದದ್ದಲ್ ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ