ಅಹಿಂಸಾ ಪ್ರತಿಪಾದಕರ ಹತ್ಯೆ, ಗಲ್ಲು ಶಿಕ್ಷೆಗೆ ಆಗ್ರಹ
ಸುದ್ದಿಮೂಲವಾರ್ತೆ
ಕೊಪ್ಫಳ ಜು 10: ಜೈನರು ಅಹಿಂಸಾ ಪ್ರತಿಪಾದಕರು. ಒಂದು ಸಣ್ಣ ಪ್ರಾಣಿಯನ್ನು ಕೊಲ್ಲುವುದಿಲ್ಲ. ಇಂಥ ದರ್ಮದ ಗುರುಗಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಹೇಯ ಕೃತ್ಯ. ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಕೊಪ್ಪಳ ತಾಲೂಕಾ ಜೈನ ಸಮಾಜದ ಅಧ್ಯಕ್ಷ ಪದ್ಮಗೌಡ ಹಿರೇಗೌಡರ ಆಗ್ರಹಿಸಿದ್ದಾರೆ.
ಇಂದು ಕೊಪ್ಪಳದಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೊಡಿಯ ಕಾಮಕುಮಾರ ನಂದಿ ಸ್ವಾಮಿಗಳ ಹತ್ಯೆ ಖಂಡಿಸಿ ಜೈನ ಸಮಾಜದಿಂದ ನಡೆದ ಪ್ರತಿಭಟನೆಯಲ್ಲಿ ಭಾಗಹಿಸಿ ಮಾತನಾಡಿದರು.
ಜೈನ ಸಮಾಜ ಅಲ್ಪಸಂಖ್ಯಾತರಲ್ಲಿಯೇ ಅಲ್ಪ ಸಂಖ್ಯಾತರು. ಆದರೆ ಸರಕಾರಕ್ಕೆ ಅತಿ ಹೆಚ್ಚು ತೆರಿಗೆ ಕಟ್ಟುವ ಸಮಾಜ. ಜೈನ ಮುನಿಗಳು ವಿರಾಟಕ್ಕೆ ಹೋಗುವಾಗ ಅವರಿಗೆ ರಕ್ಷಣೆ ಹಾಗು ಅವರ ವಾಸ್ತವ್ಯಕ್ಕೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
ನಗರದ ಶ್ರೀಬಾಹುಬಲಿ ಕ್ಷೇಮಾಭಿವೃದ್ಧಿ ಸಹಕಾರ ಸಂಘದಲ್ಲಿ ಶ್ರದ್ದಾಂಜಲಿ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೌನ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಭರತೇಶ ರೆವಡಿ, ಅಭಿನಂದನ್, ಕಾಂತರಾಜ್ , ಸಮ್ಯೇಕ್ ಗೋಗಿ , ಸುರೇಂದ್ರ ಪಾಟೀಲ ಸೇರಿ ಹಲವರಿದ್ದರು.
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.