Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಸರಕೋಡು-ಗೂಳ್ಯಂ ಮಧ್ಯೆ ಹಗರಿ ನದಿಗೆ ಸೇತುವೆ ನಿರ್ಮಾಣಕ್ಕೆ ಆಗ್ರಹ

 ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.08:
ಕರ್ನಾಟಕದ ಗಡಿ ಗ್ರಾಾಮವಾಗಿರುವ ಬಸರಕೋಡು ಆಂಧ್ರದ ಗಡಿ ಗ್ರಾಾಮವಾಗಿರುವ ಗೂಳ್ಯಂ ಮಧ್ಯೆೆ ಹರಿಯುತ್ತಿಿರುವ ವೇದಾವತಿ (ಹಗರಿ) ನದಿಗೆ ಸೇತುವೆ ನಿರ್ಮಾಣಕ್ಕೆೆ ಆಗ್ರಹಿಸಿ ಸೋಷಲಿಸ್‌ಟ್‌ ಯೂನಿಟಿ ಸೆಂಟರ್ ಆ್ ಇಂಡಿಯಾದ ಬಳ್ಳಾಾರಿ ಗ್ರಾಾಮೀಣ ಸ್ಥಳೀಯ ಸಮಿತಿಯು ಸಂಸದರಾದ ಇ.ತುಕಾರಾಂ ಅವರಿಗೆ ಮನವಿ ಸಲ್ಲಿಸಿದೆ.
ಕರ್ನಾಟಕದ ಬಳ್ಳಾಾರಿ ತಾಲೂಕಿನಲ್ಲಿ ಗಡಿ ಗ್ರಾಾಮವಾಗಿರುವ ಬಸರಕೋಡು ಗ್ರಾಾಮವು ಆಂಧ್ರ - ಕರ್ನಾಟಕದ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಗೂಳ್ಯಂ ಗ್ರಾಾಮವಿದ್ದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆೆಯಲ್ಲಿ ಇದೆ. ಈ ಗ್ರಾಾಮಗಳ ಮಧ್ಯೆೆ ವೇದಾವತಿ (ಹಗರಿ) ನದಿಯು ಹರಿಯುತ್ತಿಿವೆ.
ಬಸರಕೋಡಿನಿಂದ ಗೂಳ್ಯಂ ಗ್ರಾಾಮಕ್ಕೆೆ ಸಂಚರಿಸುವ ವಾಹನಗಳಾಗಲೀ ಪಾದಾಚಾರಿಗಳಾಗಲೀ ಈ ನದಿಯ ನೀರಿನಲ್ಲಿ ಒಂದು ಕಿ.ಮೀ. ಅಂತರವನ್ನು ಕ್ರಮಿಸಬೇಕು. ಈ ನದಿಯು ಉಸುಕಿನಿಂದ ಕೂಡಿರುವುದರಿಂದ ವಾಹನಗಳು ಉಸುಕಿನಲ್ಲಿ ಸಿಕ್ಕಿಿಕೊಳ್ಳುತ್ತವೆ. ಕಾಲ್ನಡಿಗೆಯಿಂದ ಹೋಗುವವರಿಗೂ ಉಸುಕಿನಲ್ಲಿ ಕಾಲು ಸಿಲುಕುತ್ತವೆ. ಪ್ರಸ್ತುತ ಎರಡೂ ಗ್ರಾಾಮಗಳ ಜನರು ಕಾಲುದಾರಿಯನ್ನೇ ಅವಲಂಬಿಸಿದ್ದಾಾರೆ. ಕಾರಣ ಸೇತುವೆಯ ಅಗತ್ಯವಿದೆ ಎಂದು ಸಮಿತಿ ತಿಳಿಸಿದೆ.
ಈ ಎರಡೂ ಗ್ರಾಾಮಗಳು ಆಂಧ್ರ - ಕರ್ನಾಟಕದ ಗಡಿ ಭಾಗಗಳಾಗಿ ಇರುವುದರಿಂದ ವ್ಯಾಾಪಾರ - ವಹಿವಾಟು ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ ಸಂಬಂಧಗಳು ಇರುವುದರಿಂದ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ. ಆಂಧ್ರದ ಕರ್ನೂಲ್ ಜಿಲ್ಲೆೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾಾರಿಗೆ ಬರುವ ಅನೇಕರು ಶಿಕ್ಷಣ, ವೈದ್ಯಕೀಯ ಇನ್ನಿಿತರೆಗಳಿಗಾಗಿ ಬಳ್ಳಾಾರಿಯನ್ನು ಅವಲಂಬಿಸಿದ್ದಾಾರೆ. ಕಾರಣ ಈ ನದಿಗೆ ಅಡ್ಡವಾಗಿ ಒಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಸಮಿತಿಯು ಕೋರಿದೆ.
ಎಸ್.ಯು.ಸಿ.ಐ ಕಮ್ಯುನಿಸ್‌ಟ್‌ ಪಕ್ಷದ ಗ್ರಾಾಮೀಣ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಎ.ದೇವದಾಸ್, ಸದಸ್ಯ ಹನುಮಂತಪ್ಪ, ಮತ್ತು ಬಸರಕೋಡು ಗ್ರಾಾಮದ ಗ್ರಾಾಮಸ್ಥರಾದ ಕೆ.ಸಿದ್ದಪ್ಪ, ಅಂಜಿನಪ್ಪ, ಮಾಳಪ್ಪ, ಮಲ್ಲಯ್ಯ ಹಂದ್ಯಾಾಳು, ಮಲ್ಲಿಕಾರ್ಜುನ, ಶ್ರೀನಿವಾಸ, ಬಿ. ತಿಪ್ಪಯ್ಯ ಇನ್ನಿಿತರರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ