Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಕಲಬುರಗಿ ಜಿಲ್ಲೆಯ ಮಳೆ ಕೊರತೆಯಿಂದ ಬರ ಪರಿಸ್ಥಿತಿಯ ವಿವರ 

ಸುದ್ದಿಮೂಲ ವಾರ್ತೆ

ಮಳೆ ವಿವರ: 2023-24 ನೇ ಸಾಲಿನ ಮುಂಗಾರು ಹಂಗಾಮಿನ ಜೂನ ತಿಂಗಳಿನಲ್ಲಿ ಶೇ -43% ಮಳೆ ಕೊರತೆಯಿಂದ ಬಿತ್ತನೆ ಕುಂಠಿತಗೂಂಡಿರುತ್ತದೆ. ಜುಲೈ ತಿಂಗಳಿನಲ್ಲಿ ಅತಿ ಹೆಚ್ಚು (+93%) ಮಳೆಯಿಂದಾಗಿ ಪ್ರಮುಖ ಬೆಳೆಗಳಾದ ತೂಗರಿ, ಹೆಸರು, ಉದ್ದು, ಸೋಯಾಬೀನ್‌ ಮತ್ತು ಇತರೆ ಬೆಳೆಗಳು ಅಂದಾಜು 10531 ಹೆಕ್ಟರ ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿರುತ್ತದೆ. ಅದರಂತೆ 14.21 ಕೋಟಿ ರೂಪಾಯಿ ಪರಿಹಾರ ರೈತರ ಬ್ಯಾಂಕ್‌ ಖಾತೆಗಳಿಗೆ ಡಿಬಿಟಿ ಮೂಲಕ ಜಮೆ ಮಾಡಲಾಗಿರುತ್ತದೆ. ಅಗಷ್ಟ ತಿಂಗಳಲ್ಲಿ ಮಳೆ ಬಾರದೆ ಶೇ -82 ರ ಕೊರತೆಯಿಂದ (ಅನಾವೃಷ್ಠಿ) ಬೆಳೆ ಹಾನಿಯಾಗಿದ್ದು. 11 ತಾಲೂಕುಗಳ Ground Truthing ಕಾರ್ಯ ಪೂರ್ಣಗೊಂಡಿದ್ದು ತೀವೃ ಬರಪೀಡಿತ ಜಿಲ್ಲೆಯೆಂದು ಘೋಷಣೆಯಾಗಿರುತ್ತದೆ ಎಂದು ಜಂಟಿ ಸಮೀಕ್ಷೆ ವರದಿಯನ್ವಯ ಸರ್ಕಾರಕ್ಕೆ ವರದಿ ಮಾಡಲಾಗಿದೆ.

ಬರ ನಿರ್ವಹಣೆಗೆ ತೇವಾಂಶ ಸಂರಕ್ಷಣಾ ಕ್ರಮಗಳು: ಕಲಬುರಗಿ ಜಿಲ್ಲೆಯಲ್ಲಿ20 ನೇ ಅಕ್ಟೊಬರ್‌ 2023ರ ವರೆಗೆ 82 ಮಿಲಿ ಮೀಟರ್‌ ಮಳೆ ಬರಬೇಕಾಗಿದ್ದು ಆದರೆ 13 ಮಿಲಿ ಮೀಟರ್‌ ಮಳೆ ಬಂದಿರುತ್ತದೆ.

ಇದರಿಂದಾಗಿ ಶೇ. -84 ರಷ್ಟು ಮಳೆ ಕೊರತೆ ಕಂಡು ಬಂದಿದೆ. ಕಳೆದ ಮೂರು ವಾರಗಳಿಂದ ಮಳೆಯ ಕೊರತೆ ಕಂಡು ಬಂದ ಕಾರಣ ಹಾಗೂ ಅನಿರಿಕ್ಷಿತ ಬಿಸಿಲಿನ ತಾಪಮಾನದಿಂದಾಗಿ ಭೂಮಿಯಲ್ಲಿ ಬಿರುಕು ಕಾಣಿಸಿಕೊಂಡು ಭೂಮಿಯಲ್ಲಿನ ತೇವಾಂಶದ ಕಡಿಮೆಯಾಗುವ ಸಾಧ್ಯತೆಯಿದ್ದು ರೈತ ಬಾಂಧವರು ಮುಂಜಾಗೃತ ಕ್ರಮವಾಗಿ ಭೂಮಿಯಲ್ಲಿ ತೇವಾಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಈ ಕೆಳಕಂಡಂತೆ ಕ್ರಮ ವಹಿಸಲು ವಿನಂತಿಸಿದೆ.

1) ನಿರಂತರವಾಗಿ ಬೆಳೆಗಳಲ್ಲಿ ಅಂತರ ಬೇಸಾಯ ಮಾಡಿ ಮಣ್ಣಿನ ಮೇಲ್ಪದರು ಪುಡಿಯಾಗುವಂತೆ ನೊಡಿಕೊಂಡು ಭೂಮಿಯಲ್ಲಿ ಬಿರುಕು ಬಿಡದಂತೆ ಮುಂಜಾಗೃತ ಕ್ರಮ ವಹಿಸುವುದು ಇದರಿಂದ ಭೂಮಿಯಲ್ಲಿನ, ತೇವಾಂಶ/ಹಸಿ ಕಾಪಾಡಿಕೊಂಡಂತಾಗುತ್ತದೆ.

2) ನೀರಿನ ಲಭ್ಯತೆ ಇರುವ ರೈತ ಬಾಂಧವರು ಸಾಲು ಬಿಟ್ಟು ಸಾಲು ನೀರು ಹಾಯಿಸುವ ಮೂಲಕ ಸಂದಿಗ್ದ ಪರಿಸ್ಥಿತಿಯಲ್ಲಿ ನೀರು ಒದಗಿಸಿ ಬೆಳೆಯನ್ನು ಕಾಪಾಡಿಕೊಳ್ಳುವುದು.

3) ಸರಕಾರದ ಸಹಾಯ ಧನದಲ್ಲಿ ಲಭ್ಯವಿರುವ HDPE ROLL PIPE (ಸುರುಳಿ ಪೈಪ್)‌ ಬಳಸಿಕೊಂಡು ನೀರಿನ ಮೂಲದಿಂದ ದೂರವಿರುವ ಹೊಲಕ್ಕೆ ನೀರು ಸಾಗಿಸಲು ಅನುಕುಲ ಮಾಡಿಕೊಳ್ಳುವುದು ಹಾಗೂ ನೀರು ಹಾಯಿಸುವ ಮೂಲಕ ಬೆಳೆಯನ್ನು ಕಾಪಾಡಿಕೊಳ್ಳುವುದು.

4) ಸರಕಾರದ ಸಹಾಯ ಧನದಲ್ಲಿ/ರೈತರ ಬಳಿ ಲಭ್ಯವಿರುವ ತುಂತುರು ನೀರಾವರಿ/ಹನಿ ನೀರಾವರಿ ಸಾಧನಗಳನ್ನು ಬಳಸಿಕೊಂಡು ಬೆಳೆಯ ಹೂವಾಡುವ ಹಂತ, ಕಾಯಿಕಟ್ಟುವ ಹಂತಗಳಲ್ಲಿ ನೀರು ಹಾಯಿಸಿ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಹನಿ/ತುಂತುರು ನೀರಾವರಿ ಪದ್ಧತಿ ಉಪಯೋಗಿಸುವದರಿಂದ ಹೆಚ್ಚಿನ ಪ್ರದೇಶದ ಬೆಳೆಯನ್ನು ಕಾಪಾಡಿಕೊಳ್ಳುವುದಲ್ಲದೆ ನೀರಿನ ಸಮರ್ಥಬಳಕೆಯಾಗುತ್ತದೆ.

5) ಹಿಂಗಾರು ಜೋಳ ಮೊಳಕೆ ಹಂತದಲ್ಲಿದ್ದು ತೇವಾಂಶದ ಕೋರತೆ ನೀಗಿಸಲು ಶೆ 25ರಷ್ಟು ಸಸಿಗಳನ್ನು ಕಿತ್ತು ಸಸಿಯಿಂದ ಸಸಿಗೆ 10 ಸೆ.ಮಿ ಅಂತರ ಕಾಪಾಡಿಕೊಂಡು ಬೆಳೆ ಕಾಪಾಡಿಕೊಳ್ಳುವುದು.

6) ಹೊಲಗಳಲ್ಲಿ ಲಭ್ಯವಿರುವ ಸಸ್ಯ ಅವಿಶೇಷಗಳನ್ನು (ಹುಲ್ಲು, ಕಸ, ಕಡ್ಡಿ, ತರಗೆಲೆಗಳನ್ನು) ಸಾಲುಗಳ ಮಧ್ಯದಲ್ಲಿ ಹರಡುವ ಮೂಲಕ ಸಸ್ಯ ಹೊದಿಕೆ ನಿರ್ಮಿಸಿ ಭೂಮಿಯ ಮೆಲ್ಮೈ ತೇವಾಂಶ ಆವಿಯಾಗದಂತೆ ಕಾಪಾಡಿಕೊಳ್ಳುವುದು.

ಬೆಳೆ ಹಾನಿ: ಬರಗಾಲದಿಂದ 2,76,360 ಹೆ. ಪ್ರದೇಶದಷ್ಟು ಬೆಳೆ ಹಾನಿಯಾದ್ದು, ಪ್ರಮುಖ ಬೆಳೆಗಳಾದ ತೊಗರಿ 1,94,960 ಹೇ. ಹತ್ತಿ 35,705 ಹೇ. ಕಬ್ಬು 22,399 ಹೇ. ಸೋಯಾಬೀನ್‌ 16,203 ಹೇ. ಉದ್ದು 5854 ಹೇ. ಪ್ರದೇಶದಲ್ಲಿ ಬೆಳೆ ಹಾನಿಯಾಗಿರುತ್ತದೆ.

ಬಿತ್ತನೆ ಕ್ಷೇತ್ರ: 2023-24 ನೇ ಸಾಲಿನ ಮುಂಗಾರು ಹಂಗಾವಿನಲ್ಲಿ ಒಟ್ಟು 8,87,014 ಹೇಕ್ಟರ್ ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದ್ದು ಒಟ್ಟು 8,56,934 ಹೆಕ್ಟರನಲ್ಲಿ (97%) ಪ್ರಮುಖ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬೀನ್‌, ಹತ್ತಿ, ಕಬ್ಬು ಮತ್ತು ಇತರೆ ಬೆಳೆಗಳು ಬಿತ್ತನೆಯಾಗಿದೆ.

2023-24 ನೇ ಸಾಲಿನ ಹಿಂಗಾರು ಹಂಗಾವಿನಲ್ಲಿ ಒಟ್ಟು 2.22 ಲಕ್ಷ ಹೇ ಬಿತ್ತನೆ ಕ್ಷೇತ್ರ ಗುರಿ ಹೊಂದಲಾಗಿದ್ದು ಒಟ್ಟು 59,763 ಹೆಕ್ಟರನಲ್ಲಿ (27%)ಬಿತ್ತನೆಯಾಗಿದ್ದು, ಪ್ರಮುಖ ಬೆಳೆಗಳಾದ ಹಿಂಗಾರಿ ಜೋಳ,ಕಡಲೆ ಗೋಧಿ ಸೂರ್ಯಕಾಂತಿ, ಶೇಂಗಾ, ಕುಸುಬೆ ಇತರೆ ಬೆಳೆಗಳು ಬಿತ್ತನೆಯಾಗಿದೆ. ತೀವ್ರಮಳೆ ಕೊರತೆಯಿಂದ ಹಿಂಗಾರು ಬಿತ್ತನೆ ಕುಂಠಿತಗೂಂಡಿರುತ್ತದೆ.

ಬೀಜ ವಿತರಣೆ: 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 26,101 ಕ್ವಿಂಟಲ್‌ ವಿವಿಧ ಬೆಳೆಗಳಾದ ತೊಗರಿ, ಹೆಸರು, ಉದ್ದು, ಸೋಯಾಬೀನ್‌ ಮತ್ತು ಮೆಕ್ಕೆಜೋಳ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸಲಾಗಿರುತ್ತದೆ. 2023-24 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಇಲ್ಲಿಯವರೆಗೂ 8,773 ಕ್ವಿಂಟಲ್‌ ಬೀಜ ವಿತರಿಸಲಾಗಿರುತ್ತದೆ. ಇನ್ನೂ 14,652 ಕ್ವೀಂಟಾಲ್‌ ದಾಸ್ತಾನು ಇರುತ್ತದೆ. ಹಾಗೂ ಬೀಜ ವಿತರಣೆ ಪ್ರಗತಿಯಲ್ಲಿರುತ್ತದೆ. ಯಾವುದೇ ಬೀಜದ ಕೊರತೆಯಿರುವುದಿಲ್ಲ.

ರಸಗೊಬ್ಬರ ವಿತರಣೆ: 2023-24 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 76,648 ಮೆ.ಟನ್‌ ರಸಗೂಬ್ಬರ ಹಂಚಿಕೆ ಮಾಡಲಾಗಿದ್ದು. ಆರಂಭಿಕ ಶಿಲ್ಕು 40,239 ಮೆ.ಟನ್‌ ಸೇರಿ ಈ ವರ್ಷ ಮುಂಗಾರಿನಲ್ಲಿ ಒಟ್ಟು 1,43,437 ಮೆ.ಟನ್‌ ರಸಗೊಬ್ಬರ ಜಿಲ್ಲೆಗೆ ಪೂರೈಕೆಯಾಗಿರುತ್ತದೆ. (ಯೂರಿಯಾ:45,483 ಮೆ.ಟನ್‌, ಡಿಎಪಿ-57,381 ಮೆ.ಟನ್‌ , ಕಾಂಪ್ಲೇಕ್ಸ-34,818 ಮೆ.ಟನ್‌, ಹಾಗೂ ಇತರೆ ರಸಗೂಬ್ಬರಗಳು) ಇದರಲ್ಲಿ ಒಟ್ಟು 1,11,634 ಮೆ.ಟನ್‌ ರಸಗೂಬ್ಬರ ವಿತರಣೆಯಾಗಿದ್ದು ಉಳಿದ ದಾಸ್ತಾನು ಒಟ್ಟು31,803 ಮೆ.ಟನ್‌ ಇರುತ್ತದೆ. (ಯೂರಿಯಾ:11,361 ಮೆ.ಟನ್‌, ಡಿಎಪಿ:10,934 ಮೆ.ಟನ್‌ ಕಾಂಪ್ಲೇಕ್ಸ-7,666 ಮೆ.ಟನ್‌, ಹಾಗೂ ಇತರೆ ರಸಗೂಬ್ಬರಗಳು). ಹಿಂಗಾರು ಹಂಗಾಮಿನಲ್ಲಿ 29,731 ಮೆ.ಟ. ರಸಗೊಬ್ಬರ ಹಂಚಿಕೆಯಾಗಿದ್ದು ಒಟ್ಟು 41,972 ಮೆ ಟನ್‌ ಸರಬುರಾಜಾಗಿದ್ದು, 4,734 ಮೆ ಟನ್‌ ಮಾರಾಟದ ನಂತರ 37,238 ಮೆ.ಟ ದಾಸ್ತಾನು ಇರುತ್ತದೆ.

ಬೆಳೆ ಸಮೀಕ್ಷೆ: 2023-24 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯಲ್ಲಿ 7,14,609 ತಾಕುಗಳ ಗುರಿ ಹೊಂದಲಾಗಿರುತ್ತದೆ. ಈಗಾಗಲೇ 7,09,088 ತಾಕುಗಳ (ಶೇ 99.22 ರಷ್ಟು) ಬೆಳೆ ಸಮೀಕ್ಷೆ ಕೈಗೊಳ್ಳಲಾಗಿರುತ್ತದೆ. ರೈತ ಬಾಂಧವರು ತಮ್ಮ ಕ್ಷೇತ್ರದಲ್ಲಿ ದಾಖಲಾದ ಬೆಳೆ ಬಗ್ಗೆ ಆಕ್ಷೇಪಣೆಯಿದ್ದಲ್ಲಿ ತಮ್ಮ ಮೊಬೈಲ್‌ ಮೂಲಕ ಬೆಳೆ ದರ್ಶಕ ಆಪ್‌ ನಲ್ಲಿ ಸಲ್ಲಿಸಬಹುದು.

ಬೆಳೆ ವಿಮೆ: 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 1,62,077 ರೈತರು 1,86,890 ಹೇ. ಗಳಿಗೆ ಬೆಳೆ ವಿಮೆ ನೋಂದಣಿ ಮಾಡಿಸಿರುತ್ತಾರೆ. 2022-23 ರ ಮುಂಗಾರು ಬೆಳೆ ವಿಮೆ ಒಟ್ಟು ರೂ. 108.595 ಕೋಟಿ 1,38,355 ರೈತರ ಬ್ಯಾಂಕ ಖಾತೆಗೆ ಜಮೆಯಾಗಿರುತ್ತದೆ.

ಮಳೆ ಕೊರತೆಯಿಂದ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕುಂಠಿತಗೂಂಡಿದ್ದು ಬೆಳೆ ಹಾನಿ ಆಗುವ ಸಂಭವ ಇರುದರಿಂದ ಬೆಳೆ ವಿಮೆ ನೋಂದಾಯಿಸಲು ರೈತರಲ್ಲಿ ಕೋರಲಾಗಿದೆ.

FID ನೂಂದಣಿ: ಜಿಲ್ಲೆಯಲ್ಲಿ ಒಟ್ಟು 4,21,715 ಭೂಹಿಡುವಳಿದಾರರಿದ್ದು ಇದರಲ್ಲಿ 3,89,387 ರೈತರು FID ನೂಂದಾಯಿಸಿದ್ದು ಇರುತ್ತದೆ. ಅನಾವೃಷ್ಠಿಯಿಂದ ಆದ ಬೆಳೆ ಹಾನಿ ಹಾಗೂ ತೊಗರಿ ನೆಟೆ ರೋಗ ಪರಿಹಾರ ಪಡೆಯಲು ಬಾಕಿ ಉಳಿದ FID ಇಲ್ಲದ 44,556 ರೈತರು ಕಡ್ಡಾಯವಾಗಿ ತಮ್ಮ ಸಮೀಪದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಿಗೆ, ತೋಟಗಾರಿಕೆ ಇಲಾಖೆ ಕಚೇರಿ, ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ FID ನೊಂದಣಿ ಮಾಡಿಕೊಳ್ಳಲು ಕೋರಲಾಗಿದೆ.

ಪಿ.ಎಮ್.ಕಿಸಾನ್‌ e-KYC: ಜಿಲ್ಲೆಯಲ್ಲಿ ಒಟ್ಟು ಅರ್ಹ 2,64,471 ಫಲಾನುಭವಿಗಳಲ್ಲಿ 2,22,313 ಫಲಾನುಭವಿ ರೈತರು ಈಗಾಗಲೇ e-KYC ಮಾಡಿಸಿರುತ್ತಾರೆ. ಉಳಿದ 42,158 ರೈತರು e-KYC ಮಾಡಿಸುವುದು ಬಾಕಿ ಇರುತ್ತದೆ. ರೈತ ಭಾಂದವರು ಮುಂದಿನ ಕಂತಿನ ಸಹಾಯ ಧನ ಪಡೆಯಲು ತಕ್ಷಣ ಸಿಎಸ್‌ಸಿ ಕೇಂದ್ರ/ಗ್ರಾಮ ಒನ್‌, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಗೆ ಭೇಟಿ ನೀಡಿ e-KYC ತಪ್ಪದೆ ಮಾಡಿಸಲು ವಿನಂತಿಸಿದೆ.

ಸುರಕ್ಷೀತ ಕೀಟನಾಶಕ ಬಳಕೆ: ತೊಗರಿ, ಹತ್ತಿ ಬೆಳೆಗಳು ಸದ್ಯ ಹೂವಾಡುವ ಹಂತದಲ್ಲಿದ್ದು ಕೀಟದ ಹಾವಳಿ ನಿಯಂತ್ರಿಸಲು ಕಲಬುರ್ಗಿ ಜಿಲ್ಲೆಯ ರೈತ ಭಾಂಧವರು ಕೀಟನಾಶಕಗಳನ್ನು ಸಿಂಪಡಿಸುವುದು ಸರ್ವೇ ಸಾಮಾನ್ಯವಾಗಿದ್ದು ಕೀಟನಾಶಕ ಸಿಂಪರಣೆ ಸಮಯದಲ್ಲಿ ಮುಂಜಾಗ್ರತ ಕ್ರಮವಾಗಿ ಕೈ ಗವಚ, ಹಳೆಯ ಬಟ್ಟೆಗಳನ್ನು ಧರಿಸುವುದು (ಕೈಗಳು ಪೂರ್ತಿ ಮುಚ್ಚುವ ಹಾಗೆ) ತಲೆ ಕೂದಲು ಹಾಗೂ ಮೂಗಿಗೆ ಮಾಸ್ಕ ಧರಿಸುವುದು ಅಲ್ಲದೆ ಕಣ್ಣು ರಕ್ಷಿಸಲು ಕನ್ನಡಕ ಧರಿಸುವುದು. ಕೀಟನಾಶಕ ಸಿಂಪರಣೆ ಮಾಡುವಾಗ ಊಟ, ನೀರು ಅಥವಾ ಧೂಮಪಾನ ಮಾಡಬಾರದದೆಂದು ವಿನಂತಿಸಲಾಗಿದೆ.

ತೋಟಗಾರಿಕೆ ಬೆಳೆಗಳು: 2023-24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 14,353 ಹೆ ಬಿತ್ತನೆ ಗುರಿ ಹೂಂದಲಾಗಿರುತ್ತದೆ. ಅದರಲ್ಲಿ 4,797 ಹೇ ಮಾತ್ರ ಬಿತ್ತನೆಯಾಗಿದ್ದು ಹಿಂಗಾರು ಹಂಗಾಮಿನಲ್ಲಿ 2,130 ಹೇ ಗುರಿ ಹೊಂದಲಾಗಿದ್ದು, ಅದರಲ್ಲಿ 361 ಹೇ ಬಿತ್ತನೆಯಾಗಿರುತ್ತದೆ.

ಜಿಲ್ಲೆಯಲ್ಲಿ ಕಂಡು ಬಂದ ತೀವ್ರ ಬರದ ಕಾರಣ ಭೂಮಿಯ ನೀರಿನ ಮಟ್ಟ ಕುಸಿದಿದ್ದು ತೋಟಗಾರಿಕೆ ಬೆಳೆಗಳ ಬಿತ್ತನೆಯಲ್ಲಿ ತೀವ್ರ ಕುಂಠಿತವಾಗಿದೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ