Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜೆಡಿಯು ಜೊತೆ ವಿಲೀನಗೊಳಿಸಲು ನಿತೀಶ್ ಆಹ್ವಾನಿಸಿದ್ದರು: ದೇವೇಗೌಡ

ಸುದ್ದಿಮೂಲ ವಾರ್ತೆ

ಬೆಂಗಳೂರು ಅ.4: ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷವನ್ನು ತಮ್ಮ ಜನತಾದಳ ಸಂಯುಕ್ತದ (ಜೆಡಿಯು) ಜತೆ ವಿಲೀನಗೊಳಿಸುವಂತೆ ಹಾಗೂ ವಿರೋಧ ಪಕ್ಷಗಳ ಐಎನ್‌ಡಿಐಎ ಬಣ ಸೇರುವಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಸ್ತಾಪಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದಾಗಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ತಿಳಿಸಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶದಲ್ಲಿ ಮಾತನಾಡಿದ ಅವರು, ಹಿಂದಿನ ಜನತಾದಳದ ವಿವಿಧ ಗುಂಪುಗಳಾದ ಜೆಡಿಯು- ಜೆಡಿಎಸ್ ಹಾಗೂ ಸಮಾಜವಾದಿ ಪಕ್ಷವನ್ನೂ ಒಳಗೊಂಡಂತೆ ಜನತಾ ಫ್ರೀಡಂ ಫ್ರಂಟ್ ರಚಿಸುವ ಬಯಕೆಯೊಂದಿಗೆ ಸುಮಾರು ಮೂರು ನಾಲ್ಕು ತಿಂಗಳ ಹಿಂದೆ ನಿತೀಶ್ ಕುಮಾರ್ ನನ್ನನ್ನು ಸಂಪರ್ಕಿಸಿದ್ದಾಗಿ ಬಹಿರಂಗಪಡಿಸಿದರು.

ನಾಲ್ಕು ತಿಂಗಳ ಹಿಂದೆ ಜನತಾ ಫ್ರೀಡಂ ಫ್ರಂಟ್ ಪ್ರಸ್ತಾವನೆಯೊಂದಿಗೆ ಸಂಪರ್ಕಿಸಲಾಯಿತು. ಆದರೆ, ತಾವು ಇದಕ್ಕೆ ತಾವು ಒಪ್ಪಲಿಲ್ಲ. ತಮಗೆ ರಾಷ್ಟ್ರೀಯ ಹುದ್ದೆಗಳಲ್ಲಿ ಆಸಕ್ತಿ ಇಲ್ಲ. ಈಗಾಗಲೇ ನನಗೆ 91 ವರ್ಷ ಮತ್ತು ಕಾಂಗ್ರೆಸ್ ನನ್ನನ್ನು ಹೇಗೆ ಕೈಬಿಟ್ಟಿದೆ ಎಂಬುದನ್ನು ನೋಡಿದ್ದೇನೆ. ಈ ವಯಸ್ಸಿನಲ್ಲಿ ನನಗೆ ಯಾವುದೇ ಪ್ರಯೋಗಗಳು ಬೇಡ ಎಂದು ಹೇಳಿದರು. ನನ್ನ ಮನವೊಲಿಸಲು ನಿತೀಶ್ ತಮ್ಮ ಪಕ್ಷದ ಅಧ್ಯಕ್ಷರು ಮತ್ತು ಹಿರಿಯ ನಾಯಕರನ್ನು ಕಳುಹಿಸಿದರು. ಆದರೆ, ನಾನು ಒಪ್ಪಲಿಲ್ಲ. ನಾನು ಅವರಿಗೆ ಹೇಳಿರುವುದಾಗಿ ತಿಳಿಸಿದರು.

ಈ ಹಿಂದೆ ಜೆಡಿಎಸ್‌ನಲ್ಲಿ ಇದ್ದ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ದೇವೇಗೌಡ, ಸಿದ್ದರಾಮಯ್ಯ ಅವರನ್ನು ನಾನು ರಾಜಕಾರಣಕ್ಕೆ ತಂದಿದ್ದು, ನಾನು ಮತ್ತಷ್ಟು ಚರ್ಚೆ ನಡೆಸಲು ಬಯಸುವುದಿಲ್ಲ. ನಾನು ಸಾಕಷ್ಟು ಅನುಭವಿಸಿದ್ದೇನೆ ಎಂದು ಜೆಡಿಎಸ್, ಬಿಜೆಪಿಯ 'ಬಿ' ಟೀಂ ಎಂದು 2018ರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟೀಕಿಸಿದ್ದರ ಕುರಿತು ಪ್ರತಿಕ್ರಿಯಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ