Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿರಾಶ್ರಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ

 ಸುದ್ದಿಮೂಲ ವಾರ್ತೆ ಶಹಾಪುರ, ನ.29:

 ತಾಲೂಕಿಗೆ ಬದುಕು ಕಟ್ಟಿಿಕೊಳ್ಳಲು ಬಡವರು ಗ್ರಾಾಮೀಣ ಪ್ರದೇಶದಿಂದ ನಗರಕ್ಕೆೆ ಆಗಮಿಸುತ್ತಾಾರೆ. ಈ ಹಿಂದೆ ಸೂರು ಇಲ್ಲದ 1981 ಜನರಿಗೆ ಮತ್ತು ಸದ್ಯಹಂಚಿಕೆಗೆ ಸಿದ್ದವಾದ 937 ಜನರಿಗೆ ಮನೆ ಮತ್ತು ನಿವೇಶನ ಒದಗಿಸುವ ಕೆಲಸ ಮಾಡಲಾಗಿದ್ದು ಕಾಂಗ್ರೆೆಸ್ ಸರಕಾರ ಬಡವರ ನಿರಾಶ್ರಿತರ ಪರವಿರುವ ಸರಕಾರವೆಂದು ಸಾಬೀತು ಪಡಿಸಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ನಗರದ ನಗರಸಭೆ ಆವರಣದಲ್ಲಿ ಶನಿವಾರ 64 ಜನರಿಗೆ ಆಶ್ರಯ ನಿವೇಶನ ಹಕ್ಕು ಪತ್ರ ವಿತರಿಸಿ ಮಾತನಾಡಿದರು.

ನಗರದ ಸರ್ವೆ.ನಂ 595 ಮತ್ತು 596ರಲ್ಲಿ ಸರಕಾರಿ ಜಾಗ ರೇಷ್ಮೆೆ ಇಲಾಖೆಯ 50 ಎಕರೆಯ ಸ್ಥಳವಿದ್ದು ಅದರಲ್ಲಿ ಸುಮಾರು 1,000ಕ್ಕೂ ಹೆಚ್ಚು ನಿವೇಶನಗಳು ದೊರೆಯಲಿವೆ. ಅವುಗಳನ್ನು ಸಹ ಪಡೆದು ಅರ್ಹರಿಗೆ ಶೀಘ್ರದಲ್ಲಿ ಸೂರು ಒದಗಿಸುವ ಪ್ರಾಾಮಾಣಿಕ ಕೆಲಸ ಮಾಡಲಾಗುವುದು ಎಂದು ಹೇಳಿದರು.

ನಗರದಲ್ಲಿ 200 ಲೇಜೌಟ್‌ಗಳನ್ನು ಗುರುತಿಸಿದ್ದು, ಹಳಿಸಗರನಲ್ಲಿ 12 ಎಕರೆಯಲ್ಲಿ 450 ಪ್ಲಾಾಟ್‌ಗಳು ಮಾಡಲಾಗಿದೆ. ಕಳೆದ 2018ರಲ್ಲಿ ಟೆಂಡರ್ ಕರೆಯಲಾಗಿತ್ತು, ಬಿಜೆಪಿ ಸರಕಾರದಲ್ಲಿ ಅನುದಾನ ನೀಡಲಿಲ್ಲ. ಈ ಆರ್ಥಿಕ ವರ್ಷದಲ್ಲಿ ಕೆಕೆಆರ್‌ಡಿಬಿ ಅಡಿಯಲ್ಲಿ ಎಲೆಕ್ಟ್ರಿಿಕಲ್, ನೀರಿನ ಟ್ಯಾಾಂಕ್, ಚರಂಡಿಗೆ 3 ಕೋಟಿ ರೂ, ನೀಡಿ ಕೆಲಸ ಮುಗಿಸಿದ್ದು, ಆದಷ್ಟು ಬೇಗ ಅವುಗಳನ್ನು ಸಹ ವಿತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾಾರ ಸಿದ್ಧರೂಢ ಬನ್ನಿಿಕೊಪ್ಪ, ಪೌರಾಯುಕ್ತ ಜೀವನ ಕಟ್ಟಿಿಮನಿ, ನಗರ ಯೋಜನಾ ಪ್ರಾಾಧಿಕಾರ ಅಧ್ಯಕ್ಷ ಸಿದ್ದು ಆರಬೋಳ, ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಎಇಇ ನಾನಾಸಾಬ್, ಪರಿಸರ ಅಭಿಯಂತರರಾದ ಹರೀಶ ಸಜ್ಜನ ಸೇರಿದಂತೆ ಮುಖಂಡರು, ನಗರಸಭೆ ಸಿಬ್ಬಂದಿಗಳು ಇದ್ದರು.

,,,ಬಾಕ್‌ಸ್‌ ಐಟಂಗಾಗಿ,,,

ರಾಜ್ಯ ಮತ್ತು ಕೇಂದ್ರ ಸರಕಾರ ನೀಡುವ ಸೂರಿನ ಭಾಗ್ಯದಲ್ಲಿ  ನಗರದಲ್ಲಿ 3,777 ಮಂದಿಗೆ ಅನುದಾನ ವಿತರಿಸಲಾಗಿದ್ದು, 913 ಮನೆಗಳು ಸಂಪೂರ್ಣಗೊಂಡಿವೆ. ರಾಜ್ಯ ಸರಕಾರ ಜನರ ಆಶೋತ್ತರಕ್ಕೆೆ ಸ್ಪಂದಿಸುತ್ತಿಿದೆ. ಮುಂದಿನ ಮೂರು ತಿಂಗಳಲ್ಲಿ 800 ನಿವೇಶನಗಳ ಹಕ್ಕುಪತ್ರ ನೀಡಿ ವಿತರಿಸಲಾಗುವುದು. ಹಾಲಭಾವಿ ರಸ್ತೆೆಯಲ್ಲಿ 7 ಎಕರೆ ಸ್ಥಳ ಗುರುತಿಸಿದ್ದು 272 ನಿವೇಶನಗಳು ದೊರೆಯುತ್ತವೆ. ಹಳಿಸಗರ ರೈಲ್ವೆೆ ಬ್ರಿಿಡ್‌ಜ್‌ ಬಳಿ 9 ಎಕರೆ ಜಾಗ ಮಂಜೂರಾತಿಯಾಗಿದ್ದು 2 ಎಕರೆಯು ಅಂಬಿಗರ ಚೌಡಯ್ಯ ಕಲ್ಯಾಾಣ ಮಂಟಪ ಒದಗಿಸಿದ್ದು ಉಳಿದದ್ದರಲ್ಲಿ 200ಕ್ಕೂ ಹೆಚ್ಚು ನಿವೇಶನ ಮಾಡಲಾಗುವುದು ಎಂದು ಸಚಿವ ದರ್ಶನಾಪುರ ಭರವಸೆ ನೀಡಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ