Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರಾಯಚೂರು ಮಹಾನಗರ ಪಾಲಿಕೆಯಿಂದ ಮನೆ ಬಾಗಿಲಿಗೆ ಕಂದಾಯ ಅದಾಲತ್

ಸುದ್ದಿಮೂಲ ವಾರ್ತೆ ರಾಯಚೂರು, ನ.10:
ಖಾತಾ ಬದಲಾವಣೆ, ಇ-ಖಾತಾ ಪಡೆಯುವಿಕೆ ಸೇರಿದಂತೆ ಕಂದಾಯ ಆಡಳಿತಕ್ಕೆೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಾಕಷ್ಟು ದೂರು ಮತ್ತು ಮಹಾನಗರ ಪಾಲಿಕೆಯ ಆಡಳಿತ ವೈಲ್ಯ ಕುರಿತಂತೆ ಆಡಳಿತಾರೂಢ ಚುನಾಯಿತ ಪ್ರತಿನಿಧಿಗಳು, ಶಾಸಕರು, ಸಚಿವರು, ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಎಚ್ಚೆೆತ್ತುಕೊಂಡಿರುವ ಮಹಾನಗರ ಪಾಲಿಕೆಯ ಆಯುಕ್ತರು ಮನೆಬಾಗಿಲಿಗೆ ಕಂದಾಯ ಅದಾಲತ್ ತೆಗೆದುಕೊಂಡು ಹೋಗುವ ಮೂಲಕ ಕಂದಾಯ ದೂರುಗಳಿಗೆ ಅಂತ್ಯಗೊಳಿಸಲು ಮುಂದಾಗಿದ್ದಾಾರೆ.
ಈ ಕುರಿತಂತೆ ಇಂದು ಪ್ರಕಟಣೆ ಹೊರಡಿಸಿರುವ ಆಯುಕ್ತ ಜುಬೀನ್ ಮೊಹೋಪಾತ್ರಾಾ ಪರವಾಗಿ ಉಪಾಯುಕ್ತ ಕಂದಾಯ ವಿಭಾಗ ಇವರು ಈ ಕಾರ್ಯಕ್ರಮದಲ್ಲಿ ಖಾತಾ ಬದಲಾವಣೆ, ಇ-ಖಾತಾ (ಎ ಮತ್ತು ಬಿ), ಇ-ಖಾತಾ ದಾಖಲೆಯಲ್ಲಿ ತಿದ್ದುಪಡಿ, ಆಸ್ತಿಿ ತೆರಿಗೆ ಸಂಬಂಧಿಸಿದ ಅಹ್ವಾಾಲುಗಳು, ಕಂದಾಯ ಶಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ತಕರಾರು ನಿವಾರಣೆ ಕುರಿತು ಮನೆ ಬಾಗಿಲಿಗೆ ತೆರಳಿ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ಪರಿಹರಿಸಲು ಮುಂದಾಗಿದ್ದಾಾರೆ.
ಇದಕ್ಕಾಾಗಿ ಕಂದಾಯ ಅದಾಲತ್‌ನ್ನು ಬೆಳಿಗ್ಗೆೆ 10.30ರಿಂದ ಸಂಜೆ 5.30ರ ವರೆಗೆ ಆಯಾ ವಾರ್ಡ್ ವ್ಯಾಾಪ್ತಿಿಯಲ್ಲಿ ನಿಗದಿಗೊಳಿಸಿದ ಸ್ಥಳದಲ್ಲಿ ನವೆಂಬರ್ 14ರಿಂದ ಡಿಸೆಂಬರ್ 17ರ ವರೆಗೆ ಈ ಕಂದಾಯ ಅದಾಲತ್ ನಡೆಸಲಾಗುವುದೆಂದು ತಿಳಿಸಿದ್ದಾಾರೆ.
ಇದಕ್ಕಾಾಗಿ ವಲಯ 1, ವಲಯ 2 ಎಂದು ವಿಭಾಗ ಮಾಡಿ ಕಂದಾಯ ವಿಭಾಗದ ಸಿಬ್ಬಂದಿಗಳಿಗೆ ಡಾಟಾ ಎಂಟ್ರಿಿ ಆಪರೇಟರ್‌ಗಳಿಗೆ ಜವಾಬ್ದಾಾರಿ ವಹಿಸಲಾಗಿದೆ.
ಈ ಕಾರ್ಯಕ್ರಮದಡಿ ಸಾರ್ವಜನಿಕರು ತಮ್ಮ ಆಸ್ತಿಿಗಳ ಕುರಿತಂತೆ ಖಾತಾ ಬದಲಾವಣೆ, ಇ-ಖಾತಾ (ಎ ಮತ್ತು ಬಿ) ಇ-ಖಾತಾ ದಾಖಲೆ ತಿದ್ದುಪಡಿ, ಆಸ್ತಿಿ ತೆರಿಗೆ ಸಂಬಂಧಿಸಿದಂತೆ ಯಾವುದೇ ತೊಂದರೆಗಳಿದ್ದರೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಆಯಾ ವಾರ್ಡ್‌ವಾರು ಕಂದಾಯ ಅದಾಲತ್ ನಡೆಯುವ ದಿನಾಂಕ ಮತ್ತು ಸ್ಥಳ ಹಾಗೂ ಸಂಬಂಧಿಸಿದ ಕರವಸೂಲಿಗಾರ, ಕಂಪ್ಯೂೂಟರ್ ಆಪರೇಟರ್ ಪಟ್ಟಿಿಯನ್ನು ನೋಟಿಸ್ ಬೋರ್ಡಿಗೆ ಪ್ರಕಟಿಸಿದೆ ಎಂದು ಪತ್ರಿಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ