Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶಕ್ತಿ ಯೋಜನೆಗೆ ಚಾಲನೆ, ನುಡಿದಂತೆ ನಡೆದಿದ್ದೇವೆ:ಡಾ.ಶರಣ ಪ್ರಕಾಶ

ಸುದ್ದಿಮೂಲ ವಾರ್ತೆ
ರಾಯಚೂರು,ಜೂ.11:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ರಾಯಚೂರು ವಿಭಾಗದಲ್ಲಿ ಶಕ್ತಿ ಯೋಜನೆಗೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡಿ ಚಾಲನೆ ನೀಡಿದರು.



ರಾಯಚೂರಿನ ಕೇಂದ್ರೀಯ ಬಸ್ ನಿಲ್ದಾಣದ ಲ್ಲಿ ವಿವಿಧ ತಾಲೂಕು ಕೇಂದ್ರಗಳಿಗೆ ತೆರಳುವ ಬಸ್ ಗಳ ಅಲಂಕಾರ ಮಾಡಿದ್ದು ಆ ಬಸ್ ಗಳಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಚಿವರು ಚಾಲನೆ ನೀಡಿ ಮಾತನಾಡಿದ ಸಚಿವ ಡಾ.ಶರಣ‌ ಪ್ರಕಾಶ ಪಾಟೀಲ, ರಾಜ್ಯಾದ್ಯಂತ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಮಾಡಿದ ವಾಗ್ದಾನದಂತೆ ಆಶೀರ್ವಾದ ಮಾಡಿದರೆ ಐದು ಗ್ಯಾರೆಂಟಿ ಘೋಷಣೆ ಜಾರಿ ಭರವಸೆ ನೀಡಿದ್ದೆವು.

ಈ ಪೈಕಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಎಲ್ಲ ಮಹಿಳೆಯರು ಉಚಿತವಾಗಿ ಪ್ರಯಾಣಕ್ಕೆ ಅನುವು ಮಾಡಿಕೊಟ್ಟೊದ್ದೇವೆ. ಅದರ ಖರ್ಚು ರಾಜ್ಯ ಸರ್ಕಾರ ನಿಗಮ ಕ್ಕೆ ಭರಿಸಲಿದೆ ಎಂದರು.

ಸಾರಿಗೆ ನೌಕರರು ಮಹಿಳೆಯರಿಗೆ ಗೌರವ ಕೊಡಬೇಕು, ಟಿಕೆಟ್ ಇಲ್ಲ ಎಂದು ಅನುಚಿತ ವರ್ತನೆ ಮಾಡಿದರೆ ಶಿಸ್ತು ಕ್ರಮ ವಹಿಸಲಿದ್ದೇವೆ.

ಜುಲೈ ನಿಂದ 10ಕೆಜಿ ಅಕ್ಕಿ, ಆಗಸ್ಟ್ ಉಚಿತ ವಿದ್ಯುತ್ ಪೂರೈಕೆ, ಆಗಸ್ಟ್ ್ರ್ರ್ರ್ಮಮನೆಯ ಯಜಮಾನಿಗೆ 2 ಸಾವಿರ ಗೃಹ ಲಕ್ಷ್ಮಿ ನೀಡುತ್ತೇವೆ. ಕೌಶಲ್ಯಾಭಿವೃದ್ದಿ ಇಲಾಖೆಯಡಿ ಸುಮಾರು 4 ಲಕ್ಷ ವಿದ್ಯಾರ್ಥಿಗಳಿಗೆ 3 ಸಾವಿರ ಯುವ ನಿಧಿ ಅಡಿ ವೇತನ ಸಿಗಲಿದೆ. ಈ ಐದು ಗ್ಯಾರಂಟಿ ಕಾಂಗ್ರೆಸ್ ನೀಡಲಿದೆ.

ರಾಯಚೂರಿಗೆ ಏಮ್ಸ್, ಬೀದರ್ ಗೆ ಐಐಟಿ ನೀಡುವುದು ನಿಶ್ಚಿತ ಎಂದು ಭರವಸೆ ನೀಡಿದರು.

ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಇವತ್ತು ಮಹಿಳೆಯರ ಸಂಭ್ರಮ ದಿನ, ಮಹಿಳೆಯರ ಏಳ್ಗೆಗೆ ಸಿಎಂ, ಡಿಸಿಎಂ ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಶಕ್ತಿ ಯೋಜನೆ ಮೂಲಕ ಜಿಲ್ಲೆಯ ಮತ್ತು ರಾಜ್ಯದೊಳಗೆ ಉಚಿತವಾಗಿ ಸಂಚಾರ ಮಾಡಬಹುದು.

ಏಮ್ಸ್ ಗೆ ವೈದ್ಯಕೀಯ ಸಚಿವರಾಗಿದ್ದು ಅನುಕೂಲ ಆಗಿದೆ. ಅವರು ನಮಗೆ ಬಲ ತರಲಿದ್ದಾರೆ. ನುಡಿದಂತೆ ನಡೆಯುತ್ತಿದ್ದೇವೆ. ಶೇ.೫೦% ರಷ್ಟು ಆಸನ ವ್ಯವಸ್ಥೆ ಇದೆ. ಕಿರಿಕಿರಿ ಮಾಡಬಾರದು.ಉಚಿತ ಎಂದೇಳಿ ಸಿಬ್ಬಂದಿ ನಿರ್ಲಕ್ಷಿಸಿದರೆ ಕ್ರಮ‌ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವರಾಜ ಪಾಟೀಲ ಇಟಗಿ, ಕೆಪಿಸಿಸಿ ಪ್ರ.ಕಾರ್ಯದರ್ಶಿ ಎ.ವಸಂತಕುಮಾರ್, ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ, ಸಿಇಓ ಶಶಿಧರ ಕುರೇರ್, ವಿಭಾಗಿಯ ನಿಯಂತ್ರಣಾಧಿಕಾರಿ ಚಂದ್ರಶೇಖರ‌ ಎಂ.ಎಸ್., ಕಾಂಗ್ರೆಸ್ ಮುಖಂಡರಾದ ಅಂಬಣ್ಣ, ಶಂಶಾಲಂ, ನಾಗವೇಣಿ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ