ಸುದ್ದಿಮೂಲ ವಾರ್ತೆ ರಾಯಚೂರು, ನ.28:
ದಾಂಪತ್ಯ ಜೀವನಕ್ಕೆೆ ಬಹಳಷ್ಟು ಮಹತ್ವ ನೀಡುವ ನಾವೆಲ್ಲರೂ ಚಿಕ್ಕ ಕುಟುಂಬಕ್ಕಾಾಗಿ ಮಕ್ಕಳ ಜನನದ ಸಂಪೂರ್ಣ ನಿಯಂತ್ರಣಕ್ಕಾಾಗಿ ಮಹಿಳೆಯರಂತೆ ಪುರುಷರೂ ಸಹಿತ ಎನ್‌ಎಸ್‌ವಿ ಶಸಚಿಕಿತ್ಸೆೆ ಮಾಡಿಸಿಕೊಳ್ಳಲು ಮುಂದೆ ಬರಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಾಣ ಕಾರ್ಯಕ್ರಮ ಅನುಷ್ಟಾಾನ ಅಧಿಕಾರಿ ಡಾ. ಶಿವಕುಮಾರ ನಾರಾ ಕೋರಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಇಲಾಖೆ, ರಾಷ್ಟ್ರೀಯ ಕುಟುಂಬ ಕಲ್ಯಾಾಣ ಕಾರ್ಯಕ್ರಮದಡಿಯಲ್ಲಿ ನಗರದ ತಾಯಿ ಮಕ್ಕಳ ಆಸ್ಪತ್ರೆೆಯಲ್ಲಿ ಹಮ್ಮಿಿಕೊಂಡ ಎನ್‌ಎಸ್‌ವಿ ಶಸಚಿಕಿತ್ಸೆೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ದಂಪತಿಯು ನಿರ್ಧಾರ ಕೈಗೊಂಡಲ್ಲಿ ಪುರುಷರಿಗೆ ಇರುವ ಸರಳ ವಿಧಾನ ನೋ ಸ್ಕಾಾಲ್ಪೇಲ್ ವ್ಯಾಾಸೆಕ್ಟುಮಿ ಶಸ ಚಿಕಿತ್ಸೆೆ ಮಾಡಿಸುವ ಮೂಲಕ ಸಂತಸದ ಕುಟುಂಬ ಹೊಂದಲು ಅವಕಾಶವಿದೆ. ರಾಯಚೂರು ಜಿಲ್ಲೆಯ ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆೆಗಳಲ್ಲಿ, ರಿಮ್‌ಸ್‌ನಲ್ಲಿ ಶಸಚಿಕಿತ್ಸೆೆ ಮಾಡಲಾಗುತ್ತಿಿದ್ದು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
ಪುರುಷರಿಗೆ ಸಂತಾನ ನಿರೋಧ ಶಸಚಿಕಿತ್ಸೆೆ ಮಾಡಿಸಿದರೆ ಪುರುಷತ್ವಕ್ಕೆೆ ಧಕ್ಕೆೆ ಬರುವುದೆಂಬ ತಪ್ಪುು ನಂಬಿಕೆ ಸಲ್ಲದು ದಂಪತಿಗಳು ಮಕ್ಕಳು ಬೇಡವೆಂದು ನಿರ್ಧರಿಸಿದಾಗ ಕೇವಲ ಮಡದಿಗೆ ಮಾತ್ರ ಲ್ಯಾಾಪರೊಸ್ಕೋೋಪಿಕ್ ಅಥವಾ ಟ್ಯುಬೆಕ್ಚುಮಿ ಶಸಚಿಕಿತ್ಸೆೆ ಮಾಡಿಸುವುದು ವಾಡಿಕೆಯಾಗಿದೆ. ದಯವಿಟ್ಟು ತಪ್ಪುು ನಂಬಿಕೆಗಳನ್ನು ನಂಬದೆ ಅತ್ಯಂತ ಸರಳ-ಸುಲಭವಾದ ಶಸಚಿಕಿತ್ಸೆೆಗೆ ಪತಿಯು ಸಹ ಮುಂದೆ ಬರುವ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮಹಮ್ಮದ್ ಶಾಕೀರ ಮೋಹಿಯುದ್ದಿನ್, ತಾಯಿ ಮಕ್ಕಳ ಆಸ್ಪತ್ರೆೆಯ ಆಡಳಿತ ವೈದ್ಯಾಾಧಿಕಾರಿ ಡಾ ಪ್ರಜ್ವಲಕುಮಾರ, ಪ್ರಸೂತಿ ತಜ್ಞರಾದ ಶಾಲಿನಿ, ಭುವನೇಶ್ವರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಅಮರೇಶ ಗಡ್ಡಿಿ ಸೇರಿದಂತೆ ಸಿಬ್ಬಂದಿ ವರ್ಗ, ಸಾರ್ವಜನಿಕರು ಉಪಸ್ಥಿಿತರಿದ್ದರು.