Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಾಲ್ಕು ವರ್ಷದ ನಂತರ ದಸರಾ ಏರ್‌ ಶೋ

ಸುದ್ದಿಮೂಲ ವಾರ್ತೆ

ಮೈಸೂರು, ಅ. 22 : ದಸರಾದ ಅಂಗವಾಗಿ ನಾಲ್ಕು ವರ್ಷದ ನಂತರ ಮೈಸೂರಿನಲ್ಲಿ ಭಾನುವಾರ ವೈಮಾನಿಕ ಪ್ರದರ್ಶನ ನಡೆಯಿತು. ಜಿಲ್ಲಾಡಳಿತ ಎರಡು ದಿನದ ವೈಮಾನಿಕ ಪ್ರದರ್ಶನವನ್ನು ಹಮ್ಮಿಕೊಂಡಿತ್ತು.

ನಗರದ ಆಗಸದಲ್ಲಿ ಬಗೆಬಗೆಯ ಲೋಹ ದ ಹಕ್ಕಿಗಳು ಹಾರಾಟ ನಡೆಸಿದವು.

ಬೆಂಗಳೂರಿನ ವಾಯುಪಡೆಯ ಸೂರ್ಯಕಿರಣ್‌ ಏರೋ ಬ್ಯಾಟಿಕ್‌ ತಂಡದವರು ಒಂದು ಗಂಟೆ ಕಾಲ ವೈಮಾನಿಕ ಪ್ರದರ್ಶನವನ್ನು ನಡೆಸಿಕೊಟ್ಟರು.

ಗಂಟೆಗೆ 200 ರಿಂದ 300 ಕಿ.ಮಿಗೂ ಅಧಿಕ ವೇಗದಲ್ಲಿ ಸಂಚರಿಸುವ ಸೂರ್ಯ ಕಿರಣ್‌ನ ವಿಮಾನಗಳು ಹಾರಿದವು. ಆಕಾಶದಲ್ಲಿ ಭಾರೀ ಶಬ್ದದೊಂದಿಗೆ ವಿಮಾನ ಹಾರಿ ಹೋದಾಗ ಮೈಸೂರಿನ ಬನ್ನಿಮಂಟಪದಲ್ಲಿ ಸೇರಿದ್ದ 30ಸಾವಿರಕ್ಕೂ ಅಧಿಕ ಮಂದಿ ಹೋ ಎನ್ನುವ ಉದ್ಘರಿಸಿದರು.

ಗುಂಪು ಗುಂಪಾಯಿ ಯುದ್ದ ವಿಮಾನಗಳು ಆಗಮಿಸಿದವು. ಇದೇ ರೀತಿ ಹದಿನೈದು ನಿಮಿಷಕ್ಕೆ ಒಂದರಂತೆ ವಿಮಾನಗಳು ಆಗಮಿಸಿದಾಗ ಜನ ಕುತೂಹಲದಿಂದಲೇ ಆಗಸದತ್ತ ದಿಟ್ಟಿಸಿ ನೋಡಿ ಖುಷಿಯಾದರು. ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಸೇರಿ ಎಲ್ಲಾ ವಯೋಮಾನದವರು ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸೇರಿದ್ದರು.

ವಿಮಾನಗಳು ಆಗಮಿಸಿದಾಗ ವೇದಿಕೆಯಲ್ಲಿದ್ದ ಸೇನೆಯ ಅಧಿಕಾರಿಗಳು ಹಾಗೂ ವೀಕ್ಷಣೆ ವಿವರಣೆಕಾರರು ವಿಮಾನದ ಕುರಿತು ಮಾಹಿತಿಯನ್ನು ನೀಡುತ್ತಿದ್ದರು.

ಮೊದಲ ದಿನ ಪ್ರಾಯೋಗಿಕ ಪ್ರದರ್ಶನ ಯಶಸ್ವಿಯಾಗಿ ಮುಗಿದಿದ್ದು, ಸೋಮವಾರ ಮುಖ್ಯ ಪ್ರದರ್ಶನವಿದೆ. ಅಂದು ಸಂಜೆ 4 ಗಂಟೆಗೆ ವೈಮಾನಿಕ ಪ್ರದರ್ಶನವಿದ್ದು. ಇದಕ್ಕೆ ಪಾಸ್‌ ಬೇಕು. ಅಂದರೆ ಸೋಮವಾರ ಸಂಜೆ 7ರಿಂದ ದಸರಾ ಪಂಜಿನ ಕವಾಯತು ಇರಲಿದೆ. ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಪಾಸ್‌ ತಂದವರು ಪಂಜಿನ ಕವಾಯತನ್ನು ಅದೇ ಪಾಸ್‌ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಮೈಸೂರು ನಗರ ಪೊಲೀಸ್‌ ಆಯುಕ್ತರ ಕಚೇರಿಯಿಂದ ಪಡೆದ ಪಾಸ್‌ ಹಾಜರುಪಡಿಸಿದವರು ಸೋಮವಾರದ ಏರ್‌ ಶೋ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಅವಕಾಶವಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ