Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಸುಗಳಲ್ಲಿ ಕಿವಿ ಸೋಂಕು ಪತ್ತೆ : ರೈತರು ಆತಂಕ

ಸುದ್ದಿಮೂಲ ವಾರ್ತೆ

ಆನೇಕಲ್,ಜು.19 : ಇತ್ತೀಚೆಗೆ ಹಸುಗಳಲ್ಲಿ ಮಾರಕ ರೋಗ ಕಾಣಿಸಿಕೊಂಡಿದೆ. ಕಿವಿ ಸೋಂಕು ಕಾಣಿಸಿಕೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಹಲವು ಹಸುಗಳು ಸಾವಿಗೀಡಾಗಿದೆ. ಅಂತಹ ಮಾರಕ ರೋಗ ಕಿವಿ ಸೋಂಕು ಆನೇಕಲ್ ಗೂ ಲಗ್ಗೆ ಇಟ್ಟಿದೆ. ಹೀಗಾಗಿ, ರೈತರಿಗೆ ಹಸುಗಳ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೈನುಗಾರಿಕೆಯನ್ನು ನಂಬಿಕೊಂಡಿದ್ದ ರೈತರು ಕಂಗಲಾಗಿದ್ದಾರೆ

ಹೊಸ ಕಾಯಿಲೆ ಬಗ್ಗೆ ಸಿಬ್ಬಂದಿಗಳು ಮತ್ತು ವೈದ್ಯರು ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿ ಚಿಕಿತ್ಸೆಯ ನೀಡಲು ವೈದ್ಯರ ತಂಡ ಮುಂದಾಗಿದ್ದಾರೆ. ಹಸುಗಳಲ್ಲಿ ಪ್ರಮುಖವಾಗಿ ಜ್ವರ, ಎರಡನೇ ದಿನಕ್ಕೆ ಕಿವಿಯಲ್ಲಿ ಸೋಂಕು, ಕಿವಿಯಲ್ಲಿ ವಾಸನೆಯಂತಹ ಲಕ್ಷಣಗಳು ಹಸುಗಳಲ್ಲಿ ಪತ್ತೆ ಆಗುತ್ತಿದೆ. ಬಳಿಕ ರೋಗಗ್ರಸ್ಥ ಹಸುಗಳಿಗೆ ವೈದ್ಯರಿಂದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಈ ಕಿವಿ ಸೋಂಕು ಸುಮಾರು 15 ದಿನಗಳಿಂದ 30-40 ಹಸುಗಳಲ್ಲಿ ಕಾಣಿಸಿಕೊಂಡಿದ್ದು, ದಿನಕ್ಕೆ ಒಂದರಿಂದ ಎರಡು ಹಸುಗಳಲ್ಲಿ ಈ ಕಿವಿ ಸೋಂಕು ಪತ್ತೆ ಆಗಿದೆ. ಹೀಗಾಗಿ, ಬೆಂಗಳೂರಿನ ವೈದ್ಯ ಮತ್ತು ಸಂಶೋಧನಾ ವೈದ್ಯರ ತಂಡ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ.

ಕಿವಿ ಸೋಂಕು, ಗಂಟಲು ಮತ್ತು ಕುತ್ತಿಗೆ ಭಾಗದಲ್ಲಿ ಊತ ತರದ ಕಾಯಿಲೆ ಪತ್ತೆ ಆಗುತ್ತಿದೆ. ಪ್ರತ್ಯೇಕವಾಗಿ ಅವುಗಳಿಗೆ ಹಾರೈಕೆ ಮಾಡಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಐದು ದಿನಗಳ ಕಾಲ ಚಿಕಿತ್ಸೆ ನೀಡಿದರೆ ಗುಣಮುಖ ಆಗುತ್ತದೆ ಎಂದು ಹಸುಗಳ ಮಾಲೀಕ ಹರೀಶ್ ಮಾಹಿತಿ ನೀಡಿದರು

ಕಿವಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರೈತರಿಗೆ ಹಸುಗಳನ್ನು ಮತ್ತು ಕೋಣೆಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು, ಹಸುಗಳನ್ನು ಆಗಾಗ ತೊಳೆದು ಸ್ವಚ್ಚವಾಗಿ ಇಟ್ಟುಕೊಳ್ಳುವುದು. ಕಿವಿ ಸೋಂಕಿಗೆ ರೈತರು ಆತಂಕ ಪಡುವಂತಿಲ್ಲ. ಅದಕ್ಕೆ ಬೇಕಾದ ಔಷಧಿಗಳನ್ನು ಐದು ದಿನಗಳ ಕಾಲ ನೀಡಿದರೆ, ಆ ಕಾಯಿಲೆಯನ್ನ ಹತೋಟಿಗೆ ತರಬಹುದು. ಯಾವುದೇ ಕಾರಣಕ್ಕೂ ರೈತರು ಭಯ ಪಡುವಂತಿಲ್ಲ. ಪಶುವೈದ್ಯ ಕೇಂದ್ರದಲ್ಲಿ ಅದಕ್ಕೆ ಸಂಬಂಧಪಟ್ಟ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಸಹಾಯಕ ನಿರ್ದೇಶಕ ಮೋಹನ್‌ ತಿಳಿಸಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ