Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಚುನಾವಣೆಗಳು ಅಭಿವೃದ್ಧಿಯ ಮಾನದಂಡವಾಗಬೇಕು - ಬಸವರಾಜ ರಾಯರೆಡ್ಡಿ

ಸುದ್ದಿಮೂಲ ವಾರ್ತೆ ,

ಕುಕನೂರು ಏ೦೭ : ಚುನಾವಣೆಗಳು ಅಭಿವೃದ್ದಿಯ ಮಾನದಂಡಗಳಾಗಬೇಕು, ರಾಜಕೀಯವನ್ನು ವ್ಯಾಪರದ ದೃಷ್ಟಿಯಿಂದ ನೋಡಬಾರದು ರಾಜಕೀಯ ಸಮಾಜ ಸೇವೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ವಿವಿಧ ಗ್ರಾಮದಲ್ಲಿ ನೆಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ದ್ಯಾಂಪೂರ ಗ್ರಾಮದಲ್ಲಿ ಮಾತನಾಡಿದ ಅವರು ಬಿಜೆಪಿಗೆ ಮತ ಹಾಕುವುದರಿಂದ ಏನು ಪ್ರಯೋಜನೆ ಇಲ್ಲ. ಮೋದಿ ಹೆಸರು ಹೇಳಿಕೊಂಡು ಮತ ಪಡೆಯುತ್ತಾರೆ. ಮೋದಿ ಪ್ರಧಾನಿಯಾದ ಮೇಲೆ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯು ಏರುತ್ತಾ ಹೋಗುತ್ತಿದೆ.

ಬೊಮ್ಮಾಯಿ ಸರ್ಕಾರದಿಂದಲೂ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ. ಇನ್ನು ಸ್ಥಳೀಯವಾಗಿ ಸಚಿವರಾದ ಹಾಲಪ್ಪ ಏನು ಕೆಲಸ ಮಾಡಿದ್ದಾರೆ ಚರ್ಚೆ ಮಾಡಿ ನೋಡಿ, ಅವರು ಮೂರು ಇಲಾಖೆಗಳ ಸಚಿವರಾದರೂ ಸಹ ಯಲಬುರ್ಗಾದ ಅಂಗನವಾಡಿ ಇಲಾಖೆಯ ಕಚೇರಿಗೆ ಸ್ವತಂ ಕಟ್ಟಡವಿಲ್ಲ, ಹಿರಿಯ ನಾಗರಿಕ ಇಲಾಖೆ ಸಚಿವರಾದರು ಕ್ಷೇತ್ರಕ್ಕೆ ಒಂದು ವೃದ್ರಾಶ್ರಮ ಕೊಟ್ಟಿಲ್ಲ. ಅವರು ತಮ್ಮ ವ್ಯವಹಾರಗಳನ್ನು ರಕ್ಷಿಸಿಕೊಳ್ಳಲು ರಾಜಕೀಯಕ್ಕೆ ಬಂದಿದ್ದಾರೆ. ರಾಜಕೀಯ ಅಂದ್ರೆ ವ್ಯಾಪರವಲ್ಲ ಅದು ಸಮಾಜ ಸೇವೆ. ಚುಣಾವಣೆಗಳು ಅಭಿವೃದ್ದಿ ಮಾನದಂಡಗಳಾಗಬೇಕು ಎಂದರು.

ಎ,೧೩ ರಂದು ಸಂಜೆ ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು ಈ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಪಾದಯಾತ್ರೆ ಮೂಲಕ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ನಾಮ ಪತ್ರ ಸಲ್ಲಿಕೆ ನಂತರ ಮತ್ತೆ ಚುನಾವಣಾ ಪ್ರಚಾರ ಮಾಡುತ್ತೆನೆ. ನಿಮ್ಮ ಆಶೀರ್ವಾದದಿಂದ ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ೨೦೦ ಯೂನಿಟ್ ಉಚಿತ ವಿದ್ಯುತ್ ಹಾಗೂ ಪ್ರಣಾಳಿಕೆಯಲ್ಲಿ ಹೇಳಿದ ಕೆಲಸ ಮಾಡಿಕೊಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಮದ ರಡ್ಡೆಪ್ಪ ಹಿರೇಮನಿ ಎಂಬುವರು ಬಿಜೆಪಿ ತೊರೆದು ಕಾಂಗ್ರೇಸ್ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಪ್ರಮುಖರಾದ ಹನಮಂತಗೌಡ ಪೊಲೀಸ್ ಪಾಟೀಲ, ಬಸವರಾಜ ಉಳ್ಳಾಗಡ್ಡಿ, ಯಾಂಕಣ್ಣ ಯರಾಶಿ, ವೀರನಗೌಡ ಪೊಲೀಸ್. ಎಜಿ ಭಾವಿಮನಿ. ಕರಬಸಪ್ಪ ನಿಡಗುಂದಿ. ರಾಮಣ್ಣ ಭಜಂತ್ರಿ. ಮಂಜುನಾಥ ಕಡೆಮನಿ. ರೇವಣಪ್ಪ ಹಿರೇಕುರಬರ, ಗಗನ್ ನೋಟಗಾರ,ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಹಂಪಯ್ಯ ಹಿರೇಮಠ, ಸುದೀರ ಕೊರ್ಲಳ್ಳಿ, ಶಿವನಗೌಡ ದಾನರಡ್ಡಿ ಹಾಗೂ ಇತರರಿದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ