Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಎಸ್ಐಸಿ ಆಸ್ಪತ್ರೆ ಸೇವೆ ಅಸಂಘಟಿತ ಕಾರ್ಮಿಕರಿಗೂ ಲಭ್ಯ - ಶೋಭಾ ಕರಂದ್ಲಾಾಜೆ

ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.23:
ದೇಶದಲ್ಲಿ ಪ್ರಸ್ತುತ ಇರುವ ಇಎಸ್‌ಐಸಿ ಆಸ್ಪತ್ರೆೆಯಲ್ಲಿ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ಉಚಿತ ಸೇವೆ ನೀಡುತ್ತಿಿದ್ದು, ಇನ್ಮುಂದೆ ಕೃಷಿ, ಗಿಗ್, ಗಾರ್ಮೆಂಟ್ಸ ಸೇರಿದಂತೆ ಅಸಂಘಟಿತ ಕಾರ್ಮಿಕ ವರ್ಗದವರಿಗೂ ಇಎಸ್‌ಐಸಿ ಆಸ್ಪತ್ರೆೆ ಸೇವೆ ಉಚಿತವಾಗಿ ಲಭ್ಯವಾಗಲಿದೆ ಎಂದು ಕೇಂದ್ರದ ಕಾರ್ಮಿಕ ಮತ್ತು ಉದ್ಯೋೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಾಜೆ ಹೇಳಿದರು.
ಇಎಸ್‌ಐಸಿ ಕಾಲೇಜ್ ಆಡಿಟೋರಿಯಂನಲ್ಲಿ ಆಯೋಜಿಸಿದ ಕ್ರೀೆಡಾ ಸಂಕೀರ್ಣ, ಮೇಲ್ಛಾಾವಣಿಯ ಸೌರ ವಿದ್ಯುತ್ ವ್ಯವಸ್ಥೆೆ ಮತ್ತು ಅಂತರ್ಜಲ ಮರುಪೂರಣ ಸೌಲಭ್ಯ ಉದ್ಘಾಾಟಿಸಿ ಮಾತನಾಡಿದ ಅವರು, ಸಂಘಟಿತ ಮತ್ತು ಅಸಂಘಟಿತ ಶ್ರಮಿಕ ವರ್ಗಕ್ಕೆೆ ಸಾಮಾಜಿಕ ಭದ್ರತೆ ಒದಗಿಸಬೇಕೆಂಬ ಪ್ರಧಾನಮಂತ್ರಿಿಗಳ ಇಚ್ಛಾಾಶಕ್ತಿಿಯಂತೆ ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕಲಬುರಗಿಯ ಇಎಸ್‌ಐಸಿ ಕಾಲೇಜು 560 ಹಾಸಿಗೆಯ ಆಸ್ಪತ್ರೆೆಯಾಗಿದ್ದು, ಕೇವಲ ಐ.ಪಿ., ಸಂಘಟಿತ ಕಾರ್ಮಿಕ ವರ್ಗಕ್ಕೆೆ ಸೀಮಿತವಾಗಿದ್ದರಿಂದ ಪೂರ್ಣ ಪ್ರಮಾಣ ಹಾಸಿಗೆ ಭರ್ತಿಯಾಗುತ್ತಿಿಲ್ಲ. ಹೀಗಾಗಿ ಸಿ.ಜಿ.ಎಚ್.ಎಸ್ ಯೋಜನೆ ಈ ಆಸ್ಪತ್ರೆೆಗೆ ವಿಸ್ತರಣೆ ಆಗಿದೆ ಹೀಗಿದ್ದಾಗಿಯೂ ಶೇ.50ಕ್ಕಿಿಂತ ಹೆಚ್ಚಿಿನ ಬೆಡ್ ತುಂಬುತ್ತಿಿಲ್ಲ ಎಂದರು.
ಕಾರ್ಮಿಕ ಮಕ್ಕಳಿಗೆ ಅನುಕೂಲವಾಗಲೆಂದೇ ದೇಶದಾದ್ಯಂತ 10 ಮೆಡಿಕಲ್ ಕಾಲೇಜು ತೆರೆಯಲಾಗುತ್ತಿಿದೆ. ಅದರೆ ಕರ್ನಾಟಕದಲ್ಲಿ ಪ್ರಸ್ತುತ ಎರಡು ಇಎಸ್‌ಐಸಿ ಮೆಡಿಕಲ್ ಕಾಲೇಜು ಇರುವುದರಿಂದ ಹೊಸ ಕಾಲೇಜಿಗೆ ಪ್ರಸ್ತಾಾವನೆ ಇಲ್ಲ ಎಂದ ಅವರು, ಬ್ರಿಿಟಿಷ್ ಕಾಲದಿಂದ ಬಂದಿದ್ದ 27 ವಿವಿಧ ಕಾಯ್ದೆೆಗಳನ್ನು ರದ್ದುಪಡಿಸಿ ಹೊಸದಾಗಿ 4 ಕಾರ್ಮಿಕ ಕಾಯ್ದೆೆ ರೂಪಿಸಿದ್ದು, ಅದು ಕಾರ್ಮಿಕರ ಹಿತ ಕಾಯಲಿದೆ ಎಂದರು.
ಇಂದಿಲ್ಲಿ ಜಿಮ್, ವಾಲಿಬಾಲ್, ಕ್ರಿಿಕೆಟ್ ಮೈದಾನ ತುಂಬಾ ಸಂತೋಷದಿಂದ ಉದ್ಘಾಾಟಿಸಿದ್ದೇನೆ. ಶಿಕ್ಷಣದ ಜೊತೆಗೆ ವ್ಯಕ್ತಿಿ ವಿಕಸನಕ್ಕೆೆ ಕ್ರೀೆಡೆಗಳು ಸಹಕಾರಿಯಾಗಿದೆ. ವಿದ್ಯಾಾರ್ಥಿಗಳು ಮಾನಸಿಕ ಮತ್ತು ದೈಹಿಕ ಸದೃಢತೆಗೆ ಯೋಗ ಮಾಡಬೇಕು ಎಂದು ಸಲಹೆ ನೀಡಿದರು.
ವಿದ್ಯಾಾರ್ಥಿಗಳೊಂದಿಗೆ ಸಂವಾದ:
ಸಚಿವೆ ಶೋಭಾ ಕರಂದ್ಲಾಾಜೆ ಅವರು ವೈದ್ಯ, ಪ್ಯಾಾರಾ ಮೆಡಿಕಲ್, ನರ್ಸಿಂಗ್ ಸೇರಿದಂತೆ ಎಲ್ಲಾ ವರ್ಗದ ವಿದ್ಯಾಾರ್ಥಿಗಳ ಮತ್ತು ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆ ಅಹವಾಲು ಆಲಿಸಿದರು. ಸಿ.ಟಿ.ಸ್ಕ್ಯಾಾನ್, ಎಂ.ಆರ್.ಮಶೀನ್, ಕಾಲೇಜಿಗೆ ಸ್ವಂತ ಬಸ್, ನರ್ಸಿಂಗ್ ವಿದ್ಯಾಾರ್ಥಿಗಳಿಗೆ ಸ್ಟೆೆಂಡ್ ಸೇರಿದಂತೆ ಅನೇಕ ಸಮಸ್ಯೆೆಗಳು ಸಚಿವರ ಮುಂದಿಟ್ಟರು. ಸಿ.ಟಿ-ಸ್ಕ್ಯಾಾನ್, ಎಂ.ಆರ್.ಐ. ಯಂತ್ರೋೋಪಕರಣಗಳ ಶೀಘ್ರವೇ ಒದಗಿಲಾಗುವುದು ಎಂದು ಭರವಸೆ ನೀಡಿದರು.
ಕಲಬುರಗಿ ಗ್ರಾಾಮೀಣ ಶಾಸಕ ಬಸವರಾಜ ಮತ್ತಿಿಮೂಡ, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದತ್ತಾಾತ್ರೇೇಯ ಪಾಟೀಲ ರೇವೂರ, ಇಎಸ್‌ಐಸಿ ಆಸ್ಪತ್ರೆೆಯ ವೈದ್ಯಕೀಯ ಅಧೀಕ್ಷಕ ಡಾ.ಕಡ್ಲಿಿಮಟ್ಟಿಿ, ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮಜ, ಡೀನ್ ಡಾ.ಕ್ಷೀರಸಾಗರ, ಇಎಸ್‌ಐಸಿ ಜಂಟಿ ನಿರ್ದೇಶಕ ಎಸ್.ವಿ.ಯುವರಾಜ, ಪ್ರಾಾದೇಶಿಕ ನಿರ್ದೇಶಕ ಎಂ.ಸುಬ್ರಮಣ್ಯಮ್, ಮುಖಂಡರಾದ ಶಿವರಾಜ ಪಾಟೀಲ ರದ್ದೆವಾಡಗಿ, ಮಹಾದೇವ ಬೆಳಗುಂಪಿ ಸೇರಿದಂತೆ ಬೋಧಕ-ಬೋಧಕೇತರ ವೃಂದ, ವಿದ್ಯಾಾರ್ಥಿಗಳು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ