Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮಾಜಿ ಸಚಿವ ಎಂ.ಶಿವಣ್ಣ ಅವರ ಐಷಾರಾಮಿ ಕಾರು ಕಳುವು

ಸುದ್ದಿಮೂಲ ವಾರ್ತೆ

ಮೈಸೂರು, ಜೂ.7: ಮಾಜಿ ಸಚಿವ ಕೋಟೆ ಶಿವಣ್ಣ ಅವರ  ಐಷಾರಾಮಿ ಕಾರನ್ನು ಮೂವರು ಮುಸುಕುದಾರಿಗಳು ಕಳ್ಳತನ ಮಾಡಿರುವ ಘಟನೆ ನಗರದ ವಿಜಯನಗರ ಮೂರನೇ‌ ಹಂತದಲ್ಲಿ ಘಟನೆ ನಡೆದಿದೆ. ಇನ್ನೋವಾ ಕಾರನ್ನ ಖದೀಮರು ಮುಖಕ್ಕೆ ಮಾಸ್ಕ್ ಹಾಕಿ, ಮನೆಗೆ ನುಗ್ಗಿದ ಕಳ್ಳರು ಇನೋವಾ ಕಾರನ್ನು ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಜೂನ್ 6ರ ಮಧ್ಯರಾತ್ರಿ ರಲ್ಲಿ ಕಳುವು ನಡೆದಿದ್ದು, ಕಳ್ಳರು ಕಾಂಪೌಂಡ್ ಹಾರಿ ಬಂದು ಮನೆಯಲ್ಲಿ  ಕೀ ಎಗರಿಸಿ ಕಾರು ಕದ್ದೊಯ್ದಿದ್ದಾರೆ. ಕಳ್ಳರ‌ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಜಿ ಮಂತ್ರಿಗಳದ್ದೇ ಹಿಂಗಾದ್ರೆ ಹೆಂಗೆ ?

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಶಿವಣ್ಣ, ಕಾರು ಕದ್ದವನು ಮತ್ತೆ ಬಂದು ಫೈಲ್ ಬಿಟ್ಟು

ಹೋಗಿದ್ದಾನೆ. 20 ವರ್ಷದಲ್ಲಿ ಇಂತಹ ಘಟನೆ ನನಗೆ ಆಗಿರಲಿಲ್ಲ. ಜೂನ್‌ 5 ರಂದು ಹೆಚ್‌ಡಿ.ಕೋಟೆಗೆ ಹೋಗಿ

ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿದ್ದೆ. ಈ ರಸ್ತೆಯಲ್ಲಿ ನೂರಾರು ಕಾರುಗಳು ನಿಲ್ಲುತ್ತವೆ. ಜೂನ್ 5 ಸಂಜೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಗ್ಗೆ ಕಾರು ನೋಡಿದರೆ ಕಾಣಲಿಲ್ಲ.

ಮನೆಯವರನ್ನು ವಿಚಾರಿಸಿದೆ. ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ತಕ್ಷಣ ಪೊಲೀಸ್ ಕಮೀಷನರ್‌ಗೆ ತಿಳಿಸಿದೆ. ಸಿಸಿಟಿವಿ ನೋಡಿದಾಗ ಮಧ್ಯರಾತ್ರಿ 1 ಗಂಟೆಗೆ ಕಾರು ಕಳ್ಳತನ ಆಗಿರೋದು ಗೊತ್ತಾಗಿದೆ. ಆತ ಕಾಂಪೌಂಡ್ ಹಾರಿ ಬಂದಿದ್ದಾನೆ. ಆತನ ಹಿಂದೆ ಯಾರೋ ಸೇರಿಕೊಂಡು ವ್ಯವಸ್ಥಿತವಾಗಿ ಕಳ್ಳತನ ಮಾಡಿದ್ದಾರೆ. ಮತ್ತೆ ಬಂದು ಫೈಲ್, ಗಣಪತಿ ಫೋಟೊ ಇಟ್ಟು ಹೋಗಿದ್ದಾರೆ.

ಕಳ್ಳರು ಮತ್ತೆ ಬಂದು ಕಾರಿನಲ್ಲಿ ಇದ್ದ ಫೈಲ್‌ ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿದ್ದಾನೆ. ಕೆಲವು ದಿನಗಳ ಹಿಂದೆ ಇದೇ ರೀತಿ ಕಾರು ಕಳ್ಳತನ ಆಗಿದೆ. ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು..? ಎಂದು ಅಸಮಾಧಾನ ವ್ಯಕ್ತಪಡಿಸಿದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ