Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತ ರಾಜಣ್ಣ ಕಣ್ಣೀರು

 

ಸುದ್ದಿಮೂಲ ವಾರ್ತೆ

ಹೊಸಕೋಟೆ,ಅ.13:ಬಿಜೆಪಿಗೆ ಮತ ಹಾಕಿದ್ರು ಎಂಬ ಕಾರಣಕ್ಕೆ ರೈತನೊಬ್ಬನ ತೋಟದಲ್ಲಿನ ಪೈಪ್ ಲೈನ್‌, ಕೃಷಿ ಹೊಂಡದ ಟಾರ್ಪಲಿನ್ ಕತ್ತರಿಸಿರುವ ಘಟನೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.



ಹೊಸಕೋಟೆ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ರೈತ ರಾಜಣ್ಣ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದರು. ಅವರ ಮಗ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಕೆಲವರು ಈ ರೀತಿ ಕಿರುಕುಳ ಕೊಡುತ್ತಿದ್ದಾರೆ ಎಂದು ರೈತ ರಾಜಣ್ಣ ಆರೋಪಿಸಿ ಅಳಲನ್ನು ತೋಡಿಕೊಂಡಿದ್ದಾರೆ.

ಚುನಾವಣೆ ಪಲಿತಾಂಶ ಬಂದ ನಂತರದ ದಿನದಿಂದ ಇದು 4 ಭಾರಿ ಈ ರೀತಿ ತೋಟದಲ್ಲಿನ ಪೈಪ್ ಲೈನ್ ಕಟ್ ಮಾಡಿ, 5ನೇ ಬಾರಿಗೆ ಕೃಷಿ ಹೊಂಡದ ಟಾರ್ಪಲಿನ್ ಕಟ್ ಮಾಡಿದ್ದಾರೆ. ಈ ವಿಚಾರವಾಗಿ 2 ಬಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದಾಗಿ ತಿಳಿಸಿದರು.

ಪ್ರಮುಖವಾಗಿ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿ 3 ಎಕರೆ ಪ್ರದೇಶದಲ್ಲಿ ವ್ಯವಸಾಯ ಮಾಡುತ್ತಿದ್ದೆ. ಈ ರೀತಿ ಕಟ್ ಮಾಡಿರುವುದರಿಂದ ನೀರು ಭೂಮಿಯಲ್ಲಿ ಇಂಗಿ ಹೋಗಲಿದ್ದು ಬೆಳೆಗಳಿಗೆ ನೀರಿಲ್ಲದೆ ಸಮಸ್ಯೆ ಆಗುತ್ತದೆ. ನಮ್ಮ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರಿಗೆ ಬಂದರೆ ಅವರಿಗೆ ಉತ್ತರ ನೀಡುತ್ತೇನೆ. ಆದರೆ ಈ ರೀತಿ ರಾತ್ರೋರಾತ್ರಿ

ಕೃತ್ಯ ಮಾಡಿದರೆ ನಮ್ಮ ಪರಿಸ್ಥಿತಿ ಸಂಕಷ್ಟಕ್ಕೆ ಹೋಗುತ್ತದೆ. ನಮಗೆ ಈ ರೀತಿ ಕಿರುಕುಳ ಕೊಡುತ್ತಿರುವವರನ್ನು ಪೊಲೀಸರು ಪತ್ತೆ ಹಚ್ಚಬೇಕು ಎಂದು ಮನವಿ ಮಾಡಿದ್ದಾರೆ.

ಗ್ರಾಮದ ಮುಖಂಡ ಹೇಮಂತ್‌ಗೌಡ ಮಾತನಾಡಿ, ಚುನಾವಣೆ ಫಲಿತಾಂಶ ಬಂದ ನಂತರದ ದಿನಗಳಿಂದ ರೈತ ರಾಜಣ್ಣ ಸೇರಿದಂತೆ ಬಿಜೆಪಿ ಪಕ್ಷಕ್ಕೆ ಓಡಾಟ ಮಾಡಿದ ಮುಖಂಡರ ತೋಟಗಳನ್ನು ಟಾರ್ಗೆಟ್ ಮಾಡಿದ್ದು, ಪೈಪ್‌ಗಳನ್ನು ಕತ್ತರಿಸಿ ನಷ್ಟ ಉಂಟುಮಾಡುವ ಕೆಲಸ ಮಾಡುತ್ತಿದ್ದಾರೆ. ಕಳ್ಳತನ ಮಾಡಲು ಬಂದರೆ ಪೈಪ್ ಕಳವು ಮಾಡಿಕೊಂಡು ಹೋಗುತ್ತಾರೆ. ಆದರೆ, ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡುತ್ತಿರುವುದು ರೈತರಿಗೆ ನುಂಗಲಾರದ ತುತ್ತಾಗಿದೆ ಎಂದರು.

ಶಾಸಕರು ಗಂಭೀರವಾಗಿ ಪರಿಗಣಿಸಿ ಕಳೆದ ದಶಕಗಳ ಹಿಂದೆ ಹೊಸಕೋಟೆ ಕ್ಷೇತ್ರದಲ್ಲಿ ವಿರೋಧ ಪಕ್ಷಗಳಲ್ಲಿ ಕೆಲಸ ಮಾಡಿದವರ ತೋಟಗಳ ಪೈಪ್ ಕತ್ತರಿಸುವುದು, ಕುರಿ, ಕೋಳಿ ಕಳವು ಮಾಡುವುದು, ಬೋರ್ ಮೋಟಾರ್ ಕಳವು ಮಾಡುವುದು ಮಾಡಿ ಕಿರುಕುಳ ಕೊಡುತ್ತಿದ್ದರು. ಎಂಟಿಬಿ ನಾಗರಾಜ್ ಕ್ಷೇತ್ರಕ್ಕೆ ಬಂದ ನಂತರ ಕಡಿವಾಣ ಹಾಕಿದ್ದರು. ಈಗ ದಶಕಗಳ ಹಿಂದಿನ ಪ್ರವೃತ್ತಿ ಮತ್ತೆ ಪ್ರಾರಂಭ ಆದಂತೆ ಕಾಣುತ್ತಿದೆ. ಆದ್ದರಿಂದ ಬೆಟ್ಟಹಳ್ಳಿ ಗ್ರಾಮದಲ್ಲಿ ರೈತ ರಾಜಣ್ಣನಿಗೆ ಆಗಿರುವ ತೊಂದರೆಯನ್ನು ಶಾಸಕರು ಗಮನಹರಿಸಿ ಗಂಭೀರವಾಗಿ ಪರಿಗಣಿಸಬೇಕು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ರಘುವೀರ್ ಮನವಿ ಮಾಡಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ