Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರಂಭವಾಗದ ಕಡಲೆ ಖರೀದಿ ಕೇಂದ್ರ, ಬೆಂಬಲ ಬೆಲೆ ಹೆಚ್ಚಿಸಲು ರೈತರ ಆಗ್ರಹ

 ಸುದ್ದಿಮೂಲ ವಾರ್ತೆ ಕೊಪ್ಪಳ, ಜ.31:
ಹಲ್ಲಿದ್ದಾಾಗ ಕಡಲೆ ಇಲ್ಲ. ಕಡಲೆ ಇದ್ದಾಾಗ ಹಲ್ಲು ಇಲ್ಲ ಎಂಬ ಗಾದೆ ಮಾತು ಈಗ ಕಡಲೆ ಬೆಳೆದ ರೈತರಿಗೆ ಅಕ್ಷರಶಃ ಅನ್ವಯಿಸುತ್ತದೆ. ಕಡಲೆ ಬೆಳೆದ ರೈತ ಈಗ ಮಾರುಕಟ್ಟೆೆಗೆ ತಂದರೆ ದರ ಇಳಿಕೆ. ಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಮೀನಾಮೇಷ ಎಣಿಸಲಾಗುತ್ತಿಿದೆ.
ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಬೆಂಬಲ ಬೆಲೆಯನ್ನು ವೈಜ್ಞಾಾನಿಕವಾಗಿ ನಿಗದಿ ಮಾಡಬೇಕು ಆದರೆ ಕೇಂದ್ರ ಸರಕಾರ ನಿಗದಿ ಮಾಡಿದ ಬೆಂಬಲ ಬೆಲೆಯಲ್ಲಿ ರೈತರು ಮಾರಾಟ ಮಾಡಿದರೆ ನಷ್ಟವಾಗುತ್ತದೆ. ಈ ಕಾರಣಕ್ಕಾಾಗಿ ಕಡಲೆ ಬೆಳೆದ ರೈತರು ಬೆಂಬಲ ಬೆಲೆ ಹೆಚ್ಚಿಿಸಬೇಕೆಂದು ಆಗ್ರಹಿಸಿದ್ದಾಾರೆ. ಇನ್ನೊೊಂದು ಕಡೆ ಘೋಷಿಸಿದ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಬೇಗ ಆರಂಭಿಸಬೇಕೆಂದು ಆಗ್ರಹಿಸುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲೆೆಯ ಕುಕನೂರು. ಯಲಬುರ್ಗಾ. ಕೊಪ್ಪಳ ತಾಲೂಕಿನಲ್ಲಿ ಕಡಲೆ ಬೆಳೆಗಾರರು ಈಗ ಕಡಲೆ ಕಟಾವು ಮಾಡುತ್ತಿಿದ್ದಾಾರೆ. ಕಟಾವು ಮಾಡಿ ಮಾರುಕಟ್ಟೆೆಗೆ ತಂದರೆ ಭಾರಿ ಪ್ರಮಾಣದಲ್ಲಿ ದರ ಇಳಿಕೆಯಾಗಿದೆ. ಕೊಪ್ಪಳ ಜಿಲ್ಲೆೆಯಲ್ಲಿ ಒಟ್ಟು 1,09 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಕಡಲೆ ಬಿತ್ತಲೆ ಮಾಡಿದ್ದು ಪ್ರತಿ ಹೆಕ್ಟೇರ್ ಗೆ 13 ಕ್ವಿಿಂಟಾಲ್ ಇಳುವರಿ ಬರುತ್ತದೆ. ಸರಕಾರವು ಖರೀದಿ ಕೇಂದ್ರದಲ್ಲಿ ಪ್ರತಿ ಕ್ವಿಿಂಟಾಲ್ ಗೆ 5875 ರೂಪಾಯಿ ಘೋಷಣೆ ಮಾಡಿದೆ. ಜ.29 ರಿಂದ ಏ.28 ರವರೆಗೂ ಖರೀದಿಸಲಾಗುವುದು ಎಂದು ಘೋಷಿಸಿದೆ. ಕೊಪ್ಪಳ ಜಿಲ್ಲೆೆಯಲ್ಲಿ ಇನ್ನೂ ಖರೀದಿ ಕೇಂದ್ರ ನೋಟಿಫಿಕೇಷನ್ ಮಾಡಿಲ್ಲ. ಇಷ್ಟರಲ್ಲಿ ಖರೀದಿ ಕೇಂದ್ರದಲ್ಲಿ ನೋಂದಾಯಿಸಲು ನೋಟಿಫಿಕೇಷನ್ ಮಾಡಲಾಗುವುದು ಎಂದು ಎಪಿಎಂಸಿ ಅಧಿಕಾರಿಗಳು ಹೇಳಿದ್ದಾಾರೆ.
ಈ ಬಾರಿ ಅಧಿಕ ಮಳೆಯಾಗಿರುವ ಕಾರಣ ಕಡಲೆ ಬೆಳೆಯಲು ರೈತರಿಗೆ ಪ್ರತಿ ಎಕರೆ 30 ಸಾವಿರ ರೂಪಾಯಿ ಖರ್ಚು ಬಂದಿದೆ. ಸರಕಾರ ಘೋಷಿಸಿದ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದರೆ ರೈತರಿಗೆ ನಷ್ಟವಾಗುತ್ತದೆ. ಅದಕ್ಕೆೆ ಬೆಂಬಲ ಬೆಲೆಯನ್ನು ಪ್ರತಿ ಕ್ವಿಿಂಟಾಲ್ ಗೆ 7300 ರೂಪಾಯಿಗೆ ಹೆಚ್ಚಿಿಸಬೇಕೆಂದು ರೈತರು ಆಗ್ರಹಿಸಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ಕಳೆದ ವರ್ಷ ಮಾರುಕಟ್ಟೆೆಗೆ 1,22,024 ಕ್ವಿಿಂಟಾಲ್ ಕಡಲೆ ಮಾರಾಟವಾಗಿದೆ. ಕಡಲೆಯ ಮಾದರಿ ದರವು ಪ್ರತಿ ಕ್ವಿಿಂಟಾಲ್‌ಗೆ 5778 ರೂಪಾಯಿ ಇತ್ತು. ಈಗ ಮಾರುಕಟ್ಟೆೆಯಲ್ಲಿ ಪ್ರತಿ ಕ್ವಿಿಂಟಾಲ್ ಮಾದರಿ ದರವು 5,575 ರೂಪಾಯಿ ಇದೆ. ಇನ್ನೂ ಸರಕಾರ ಘೋಷಿಸಿದಂತೆ ಬೆಂಬಲ ಬೆಲೆ ಖರೀದಿ ಕೇಂದ್ರವನ್ನಾಾದರೂ ಆರಂಭಿಸಿದರೆ ರೈತರಿಗೆ ಅನುಕೂಲವಾಗಲಿದೆ. ಬೇಗ ಖರೀದಿ ಕೇಂದ್ರ ಆರಂಭಿಸಬೇಕು ಹಾಗೂ ರೈತರಿಗೆ ಪ್ರೋೋತ್ಸಾಾಹ ಧನ ನೀಡಬೇಕೆಂದು ರೈತರು ಆಗ್ರಹಿಸಿದ್ದಾಾರೆ.
ಇನ್ನೂ ಮೇಲಿಂದ ಮಾರುಕಟ್ಟೆೆಗೆ ಕಡಲೆ ಮಾರಾಟಕ್ಕಾಾಗಿ ಬರುತ್ತಿಿದೆ. ಈ ಸಂದರ್ಭದಲ್ಲಿ ರೈತರಿಗೆ ವೈಜ್ಞಾಾನಿಕ ಬೆಂಬಲ ಬೆಲೆ ನೀಡಬೇಕೆಂದು ರೈತರ ಬೇಡಿಕೆಗೆ ಸರಕಾರ ಸ್ಪಂದಿಸುತ್ತದೆಯೇ ಕಾದು ನೋಡಬೇಕು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ