Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಜಿಂಕೆ ಹಾವಳಿ : ಅಧಿವೇಶನದಲ್ಲಿ ಚರ್ಚೆಗೆ ರೈತರ ಒತ್ತಾಯ

ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.15
ಕೊಪ್ಪಳ ಭಾಗದ ರೈತರ ಸಮಸ್ಯೆೆ ವಿಚಿತ್ರವಾಗಿದೆ. ಒಂದು ಕಡೆ ಸರಿಯಾಗಿ ಮಳೆಯಾದರೂ ಬೆಳೆ ರೈತರ ಕೈಗೆ ಬರುತ್ತದೆ ಎಂಬ ನಂಬಿಕೆ ಇಲ್ಲ. ಬಿತ್ತನೆ ಮಾಡಿದ ಬೆಳೆಯು ಜಿಂಕೆಗಳ ಪಾಲಾಗುತ್ತಿಿದೆ. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಜಿಂಕೆ ಹಾಳು ಮಾಡುತ್ತಿಿವೆ. ಇದಕ್ಕಾಾಗಿ ರೈತರು ರಾತ್ರಿಿ ಹಗಲು ಹೊಲದಲ್ಲಿಯೇ ಕಾಯಬೇಕು. ಈಗ ಬೆಳಗಾವಿಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆೆ ಕುರಿತು ಚರ್ಚೆಯಾಗುತ್ತಿಿದೆ. ಜಿಂಕೆವನ ಕುರಿತು ಮಾತನಾಡಿ ಎಂದು ರೈತರ ಒತ್ತಾಾಯ ಮಾಡುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲೆೆಯ ಯಲಬುರ್ಗಾ, ಕುಕನೂರು ಹಾಗು ಕೊಪ್ಪಳ ತಾಲೂಕಿನಲ್ಲಿಯ ಎರೆಭೂಮಿ ಪ್ರದೇಶ ಹೊಂದಿರುವ ರೈತರು ಒಂದಿಲ್ಲ ಒಂದು ಸಮಸ್ಯೆೆ ಎದುರಿಸುತ್ತಿಿದ್ದಾಾರೆ. ಈ ಭಾಗದಲ್ಲಿ ಉತ್ತಮ ಮಳೆಯಾದರೂ ರೈತನ ಕೈಗೆ ಬೆಳೆ ಬರುತ್ತೆೆ ಎಂಬ ವಿಶ್ವಾಾಸವಿರುವುದಿಲ್ಲ. ಕಾರಣ ಬೆಳೆಯನ್ನು ನಾಶ ಮಾಡುವ ಜಿಂಕೆಗಳು. ಹಿಂಡು ಹಿಂಡಾಗಿ ಬರುವ ಜಿಂಕೆಗಳು ರೈತನ ಹೊಲಕ್ಕೆೆ ದಾಳಿ ಮಾಡಿ ಬೆಳೆಯನ್ನು ನಾಶ ಮಾಡುತ್ತಿಿವೆ. ಗದಗ ಜಿಲ್ಲೆೆಯ ಕಪ್ಪತ್ತಗುಡ್ಡದಿಂದ ಈ ಭಾಗಕ್ಕೆೆ ಬಂದಿರುವ ಜಿಂಕೆಗಳ ಸಂತತಿ ಹೆಚ್ಚಳವಾಗಿದೆ. ಜಿಂಕೆಗಳ ಕಾಟಕ್ಕೆೆ ಕೊಪ್ಪಳ ಜಿಲ್ಲೆೆಯ ರೈತರು ತತ್ತರಿಸಿ ಹೋಗಿದ್ದಾಾರೆ.
ಈ ಹಿಂದೆ ರೈತರೇ ಸಮೀಕ್ಷೆ ಮಾಡಿದ ಪ್ರಕಾರ ಮೂರು ತಾಲೂಕಿನ ಮೂರು ಜಾತಿಯ ಚಿಗರಿಗಳಿವೆ. 20572 ಕೃಷ್ಣ ಮೃಗಗಳು. 16420 ಜಿಂಕಾರ ಹಾಗೂ 10856 ಲಾಂಗ್ ಚಾಪರ್ ಎಂಬ ಜಾತಿ ಜಿಂಕೆಗಳಿವೆ. ಇವುಗಳು ನಿತ್ಯ ರೈತರ ಬೆಳೆಯನ್ನು ನಾಶ ಮಾಡುತ್ತಿಿವೆ. ಆದರೆ ಅರಣ್ಯ ಇಲಾಖೆಯ ಪ್ರಕಾರ ಜಿಲ್ಲೆೆಯಲ್ಲಿ 352 ಕೃಷ್ಣ ಮೃಗಗಳು. 370 ಚುಕ್ಕಿಿ ಇರುವ ಜಿಂಕೆಗಳಿವೆ ಎಂಬ ಮಾಹಿತಿ ಇದೆ. ಅರಣ್ಯ ಇಲಾಖೆಯು ಈ ಭಾಗದ ರೈತರ ಸಮಸ್ಯೆೆಗೆ ಸ್ಪಂದಿಸುತ್ತಿಿಲ್ಲ ಎನ್ನುವದಕ್ಕೆೆ ಇದು ಸಾಕ್ಷಿಯಾಗಿದೆ. ಇಲ್ಲಿರುವ ಜಿಂಕೆಗಳಿಂದ ಬೆಳೆ ರಕ್ಷಿಸಲು ರೈತರು ಹಗಲು ರಾತ್ರಿಿ. ಮಳೆ ಹಾಗೂ ಚಳಿಯಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ.
ಈ ಮಧ್ಯೆೆ ಈ ಭಾಗದಲ್ಲಿಯ ಜಿಂಕೆಗಳಿಂದ ನಮಗೆ ಮುಕ್ತಿಿ ಕೊಡಿಸಿ ಎಂದು ರೈತರು 2006 ರಿಂದ ಸರಕಾರ ಗಮನ ಸೆಳೆಯಲು ವಿವಿಧ ಹಂತದ ಹೋರಾಟ ಮಾಡಿದ್ದಾಾರೆ. ಈ ಮಧ್ಯೆೆ 2010 ರಲ್ಲಿ ಅಂದಿನ ಮುಖ್ಯಮಂತ್ರಿಿ ಯಡಿಯೂರಪ್ಪ ಈ ಭಾಗದಲ್ಲಿ ಜಿಂಕೆ ವನ ಸ್ಥಾಾಪಿಸಲು ಬಜೆಟ್‌ನಲ್ಲಿ 50 ಲಕ್ಷ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದರು. ನಂತರ ಯಾವುದೇ ಪ್ರಕ್ರಿಿಯೆ ಸರಕಾರದಿಂದ ಮುಂದುವರಿಯಲಿಲ್ಲ. ಈ ಭಾಗದ ರೈತರ ಹೋರಾಟ ಕುರಿತು ವಿಧಾನಸಭೆಯಲ್ಲಿ 2016 ರಲ್ಲಿ ಚರ್ಚೆಯಾಗಿದೆ. ಇದೆಲ್ಲ ಕೇವಲ ಕಾಗದದಲ್ಲಿ ಉಳಿದಿದೆ. ರೈತರಿಗೆ ಯಾವುದೇ ಲಾಭವಾಗಿಲ್ಲ. ಈ ಭಾಗದಲ್ಲಿ ಜಿಂಕೆ ವನ ನಿರ್ಮಿಸಬೇಕು ಇಲ್ಲವೇ ಬೆಳೆ ಪರಿಹಾರ ಹೆಚ್ಚಿಿ ಸಬೇಕು ಎಂದು ರೈತರು ಆಗ್ರಹಿಸಿದ್ದಾಾರೆ.
ಇದೇ ವೇಳೆ ಬೆಳಗಾವಿ ಅಧಿವೇಶನದಲ್ಲಿ ಜಿಂಕೆ ಹಾವಳಿ ತಡೆ ಹಾಗು ಜಿಂಕೆ ವನ ಕುರಿತು ಮಾತನಾಡಬೇಕೆಂದು ರೈತರು ಆಗ್ರಹಿಸಿದ್ದಾಾರೆ.
ಸಾಧು ಪ್ರಾಾಣಿಯಾಗಿರುವ ಜಿಂಕೆಗಳು ಈ ಭಾಗದಲ್ಲಿವೆ ಅವುಗಳನ್ನು ಆಗಾಗ ಬೇಟೆಯಾಡುತ್ತಾಾರೆ. ಇದೇ ವೇಳೆ ಜಿಂಕೆಗಳಿಂದಾಗಿ ರೈತರು ತಮ್ಮ ಭೂಮಿಯಲ್ಲಿ ಏನೂ ಬೆಳೆಯಲು ಆಗುತ್ತಿಿಲ್ಲ. ಇದ್ದ ಬೆಳೆಯು ಸಲು ನೀಡುತ್ತೆೆ ಎಂಬ ನಂಬಿಕೆಯೂ ಇಲ್ಲ. ಈಗಿನ ಸರಕಾರವಾದರೂ ಕ್ರಮಕೈಗೊಳ್ಳುತ್ತಾಾ ಎಂಬುವುದನ್ನು ಕಾದು ನೋಡಬೇಕು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ