Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬಣ್ಣಾರಿ ಸಕ್ಕರೆ ಕಾರ್ಖಾನೆ ಉಪ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ


ಸುದ್ದಿಮೂಲ ವಾರ್ತೆ




ಮೈಸೂರು, ಜು.27 : ಕಬ್ಬಿನ ಬಾಕಿ ಹಣ ನೀಡದಿರುವುದನ್ನು ಖಂಡಿಸಿ ಗುರುವಾರ ಬಣ್ಣಾರಿ ಅಮ್ಮನ್  ಕಾರ್ಖಾನೆಯ ಉಪ ಕಚೇರಿಗೆ ಬೀಗ ಹಾಕಲಾಯಿತು.  ಮೈಸೂರು ತಾಲೂಕಿನ ಕಡಕೋಳದಲ್ಲಿರುವ  ವಿಭಾಗೀಯ ಕಚೇರಿಗೆ ಬೀಗ ಮುದ್ರೆ ಜಡಿದ ರೈತರು ಕಾರ್ಖಾನೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು


ಒಂದು ಟನ್ ಕಬ್ಬಿಗೆ 150 ರೂಗಳನ್ನು ನೀಡಿ ನಂತರ ಕಾರ್ಖಾನೆ ಕಬ್ಬು ಅರೆಯುವುದನ್ನು ಪ್ರಾರಂಭ ಮಾಡಬೇಕು. ಜಿಲ್ಲೆಯ ರೈತರು ಮತ್ತು ಕಾರ್ಖಾನೆಯವರ ನಡುವೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದರು ಸಹ, ಕಳೆದ ವರ್ಷದ ಬಾಕಿ ಹಣವನ್ನು ಕಾರ್ಖಾನೆ ಅವರು ಹಣ ನೀಡದೆ ಕಾರ್ಖಾನೆ ಆರಂಭಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.


ಆದ್ದರಿಂದ ಕಳೆದ ವರ್ಷದ ಬಾಕಿ ಹಣವನ್ನು ಕೊಟ್ಟು ನಂತರ ಕಾರ್ಖಾನೆ ಪ್ರಾರಂಭ ಮಾಡಲಿ ಅಲ್ಲಿಯವರೆಗೂ ಕಬ್ಬು ಕಟಾವು ಮಾಡುವುದು ಬೇಡ ಎಂದು ಬಣ್ಣಾರಿ ಕಾರ್ಖಾನೆಯ ಎಲ್ಲಾ ತಾಲೂಕಿನ ಶಾಖ ಕಚೇರಿಗಳಿಗೆ  ಬೀಗ ಜಡಿಯಲಾಗುವುದು. ಸಂಜೆ ಒಳಗೆ ಹಣ ನೀಡುವ ಬಗ್ಗೆ ಸೂಕ್ತ ಕ್ರಮ  ಕೈಗೊಳ್ಳದಿದ್ದರೆ ನಾಳೆಯಿಂದ ಕಾರ್ಖಾನೆ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಎಚ್ಚರಿಕೆ ನೀಡಿದರು.


ಸ್ಥಳಕ್ಕೆ ಬಂದ ರಿ ಕಾರ್ಖಾನೆಯ ವಿಭಾಗೀಯ ಅಧಿಕಾರಿ ವೈ.ಎನ್ ನಾಗರಾಜ್, ನಿಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ  ಎಂದು ಕೇಳಿದಾಗ , ನಾಳೆಯಿಂದ ಕಾರ್ಖಾನೆ ಹಳೆಯ ಬಾಕಿ ಹಣವನ್ನು ನೀಡುವವರೆಗೂ ಕಚೇರಿಯನ್ನು ತೆರೆಯುವುದಿಲ್ಲ ಎಂದು ಒಪ್ಪಿಗೆ ನೀಡಿದರು.


ನಂತರ  ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಲಾಯಿತು ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಪಟೇಲ್ ಶಿವಮೂರ್ತಿ, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಮ್ಮ, ಮುಖಂಡರಾದ ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜು, ಅಂಬಳೆ ಮಂಜುನಾಥ್, ವರಕೋಡು ನಾಗೇಶ್, ಜಯರಾಮು, ಮಾರ್ಬಳ್ಳಿ ನೀಲಕಂಠಪ್ಪ,ವಾಜಮಂಗಲ ಮಾದೇವು, ಮಾಲಿಂಗ ನಾಯಕ, ನಾಗರಾಜು, ಹೆಗ್ಗೋಟಾರ ಶಿವ ಸ್ವಾಮಿ, ಉಡಿಗಾಲ ರೇವಣ್ಣ, ಸುಂದರಪ್ಪ, ಕುರುಬೂರು ಜಗ್ಗೇಶ್, ಭಾಗವಹಿಸಿದ್ದರು.







Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ