Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ರೈತರು ನೂತನ ಕೃಷಿ ಆವಿಷ್ಕಾಾರಗಳನ್ನು ಅಳವಡಿಸಿಕೊಳ್ಳಬೇಕು - ಡಾ.ಎ.ಅಮರೇಗೌಡ

 ಸುದ್ದಿಮೂಲ ವಾರ್ತೆ ಕಾರಟಗಿ, ನ.29:
ರೈತರು ಭೂಮಿಯ ಲವತ್ತತೆ ಕಾಯ್ದುಕೊಳ್ಳುವ ಮೂಲಕ ಸಾವಯುವ ಕೃಷಿ ಮತ್ತು ನೂತನ ಕೃಷಿಯ ಆವಿಷ್ಕಾಾರಗಳನ್ನು ಅಳವಡಿಸಿಕೊಳ್ಳಬೇಕೆಂದು ರಾಯಚೂರು ಕೃಷಿ ವಿಶ್ವ ವಿದ್ಯಾಾಲಯದ ಸಂಶೋಧನಾ ನಿರ್ದೇಶಕ ಡಾ.ಎ.ಅಮರೇಗೌಡ ಸಲಹೆ ನೀಡಿದರು.
ತಾಲೂಕಿನ ಚಳ್ಳೂರು ಗ್ರಾಾಮದ ರೈತರ ಭತ್ತದ ಬೆಳೆಯ ಹೊಲದಲ್ಲಿ ಜೈವಿಕ ಬಲವರ್ಧಿತ ಭತ್ತದ ತಳಿ ಸ್ಪೂರ್ತಿ (ಜಿ.ಎನ್.ವಿ-1906) ಪ್ರಾಾತ್ಯಕ್ಷಿಕೆಯ ಕ್ಷೇತ್ರೋೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಯಚೂರು ಹಾಗೂ ಇತರೆ ಕೃವಿವಿಗಳಿಂದ ಬಿಡುಗಡೆಯಾಗುವ ಹೊಸ ತಳಿ ಮತ್ತು ತಂತ್ರಜ್ಞಾಾನಗಳನ್ನು ಪ್ರಾಾತ್ಯಕ್ಷಿಕೆ ಮೂಲಕ ರೈತರ ಕ್ಷೇತ್ರಗಳಲ್ಲಿ ಪರಿಚಯಿಸಲಾಗುತ್ತಿಿದ್ದು, ಕ್ಷೇತ್ರೋೋತ್ಸವದ ಮುಖಾಂತರ ರೈತರು ಪ್ರಾಾತ್ಯಕ್ಷಿಕೆಯಲ್ಲಿನ ತಮ್ಮ ಅನಿಸಿಕೆಗಳನ್ನು ಇತರೆ ರೈತರಿಗೆ ಮನದಟ್ಟು ಮಾಡಲು ಅನುಕೂಲವಾಗುತ್ತದೆ. ರೈತರು ಕೃಷಿಯಲ್ಲಿನ ನೂತನ ಅವಿಷ್ಕಾಾರಗಳನ್ನು ತಮ್ಮ ಕ್ಷೇತ್ರದಲ್ಲ್ಲ್‌ಿ ಅಳವಡಿಸಿ ಕೊಂಡಾಗ ಮಾತ್ರ ಸಂಶೋಧನೆಯ ಸದುಪಯೋಗ ಪಡೆಯಬಹುದೆಂದು. ರೈತರು ಕೇವಲ ಬೆಳೆಗಳ ಉತ್ಪಾಾದನೆಯತ್ತ ಮಾತ್ರ ಗಮನ ಹರಿಸದೇ ಮೌಲ್ಯವರ್ಧನೆ ಮಾಡಿ ವಾಣಿಜ್ಯೋೋದ್ಯಮಿಗಳಾದಲ್ಲಿ ಮಾತ್ರ ಕೃಷಿಯಲ್ಲಿ ಹೆಚ್ಚಿಿನ ಲಾಭ ಪಡೆಯಬಹುದು ಎಂದರು.
ಗಂಗಾವತಿ ಕೃಷಿ ವಿಜ್ಞಾಾನ ಕೇಂದ್ರ ಮುಖ್ಯಸ್ಥ, ವಿಜ್ಞಾಾನಿ ಡಾ.ರಾಘವೇಂದ್ರ ಎಲಿಗಾರ ಮಾತನಾಡಿ, ಸತುವಿನ ಅಂಶ ಹೆಚ್ಚಿಿಗೆ ಇದ್ದು, ದಪ್ಪ ಕಾಳಿನ ತಳಿಯಾಗಿರುವುದರಿಂದ ಮಂಡಕ್ಕಿಿ ತಯಾರಿಕೆಗೆ ಸೂಕ್ತವಾಗಿದೆ. ಹೆಚ್ಚುತ್ತಿಿರುವ ಜನಸಂಖ್ಯೆೆಗೆ ಅನುಗುಣವಾಗಿ ಬೆಳೆಯ ಉತ್ಪಾಾದಕತೆಯನ್ನು ಹೆಚ್ಚಿಿಸುವ ಅವಶ್ಯಕತೆ ಇರುವುದಲ್ಲದೇ ಪೋಷಕಾಂಶ ಭರಿತ ತಳಿಗಳನ್ನು ಬೆಳೆಯುವುದರ ಅಗತ್ಯತೆಯ ಕುರಿತು, ತುಂಗಭದ್ರಾಾ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಗೆ ಭತ್ತಕ್ಕೆೆ ಪರ್ಯಾಯವಾಗಿ ಇತರೆ ಬೆಳೆಗಳನ್ನು ಬೆಳೆಯುವುದರ ಅವಶ್ಯಕತೆ ಇದೆ ಎಂದರು.
ಕೃಷಿ ಸಂಶೋಧನಾ ಕೇಂದ್ರ, ಗಂಗಾವತಿಯ ಆವರಣ ಮುಖ್ಯಸ್ಥರು ಹಾಗೂ ತಳಿ ವಿಜ್ಞಾಾನಿ ಡಾ.ಮಹಾಂತ ಶಿವಯೋಗಯ್ಯ ಕೆ. ಮಾತನಾಡಿ, ಆಹಾರದಲ್ಲಿ ಸತುವಿನ ಕೊರತೆಯಿಂದ ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಕಡಿಮೆ ರೋಗ ನಿರೋಧಕ ಶಕ್ತಿಿ, ಕೂದಲು ಉದುರುವುದು, ಮಾನಸಿಕ ಖಿನ್ನತೆ, ಥೈರಾಡ್ ಸಮಸ್ಯೆೆ, ಸಂತಾನೋತ್ಪತಿ ಸಮಸ್ಯೆೆ, ಇತ್ಯಾಾದಿ, ಆರೋಗ್ಯ ಸಂಬಂಧಿ ಸಮಸ್ಯೆೆಗಳು ಉಂಟಾಗುತ್ತವೆ. ನಮ್ಮ ದೇಹದಲ್ಲಿ 300 ಕ್ಕೂ ಹೆಚ್ಚು ಕಿಣ್ವಗಳ ಉತ್ಪಾಾದನೆಗೆ ಸತುವಿನ ಅಂಶ ಬೇಕಾಗಿದ್ದು, ಜೈವಿಕ ಬಲವರ್ಧಿತ ಭತ್ತದ ತಳಿ ಸ್ಪೂರ್ತಿಯನ್ನು ದೈನಂದಿನ ಆಹಾರದಲ್ಲಿ ಬಳಕೆ ಮಾಡುವುದರಿಂದ ಸತುವಿನ ಕೊರತೆಯನ್ನು ನೀಗಿಸಬಹುದಾಗಿದೆ ಎಂದು ಹೇಳಿದರು.
ಕಾರಟಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗರಾಜ, ವಿವಿಧ ವಿಭಾಗದ ವಿಜ್ಞಾಾನಿಗಳಾದ ಡಾ. ಸುಜಯ್ ಹುರುಳಿ, ಡಾ. ಜ್ಯೋೋತಿ ಆರ್. ಡಾ. ಮಲ್ಲೇಶ್, ಡಾ.ಜೆ. ರಾಧಾ, ಡಾ. ಶ್ವೇತ ಬಿ. ಎನ್., ಡಾ. ರತ್ನಮ್ಮ, ಪ್ರಗತಿಪರ ರೈತರಾದ ಗಾದಿಲಿಂಗಪ್ಪ, ರೈತರಾದ ಮಹಾದೇವ ಸುಭೇದಾರ, ಸುಬ್ಬಾಾರಾವ್ ಮತ್ತು ಶರಣಪ್ಪ ಸೇರಿದಂತೆ 60 ಕ್ಕೂ ಹೆಚ್ಚು ರೈತರು ಇದ್ದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ