ಸುದ್ದಿಮೂಲ ವಾರ್ತೆ
ಬೆಂಗಳೂರು,ಮಾ.21: ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಾರ್ಟಿಯು ತನ್ನ 80 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್‌ನಿಂದ ಇತ್ತೀಚೆಗೆ ಆಪ್ ಸೇರ್ಪಡೆಗೊಂಡ ಬ್ರಿಜೇಶ್ ಕಾಳಪ್ಪ ಚಿಕ್ಕಪೇಟೆ ವಿಧಾನಸಭೆಯಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಶಾಂತಿನಗರದಿಂದ, ನಟ ಟೆನ್ನಿಸ್ ಕೃಷ್ಣ ತುರುವೇಕೆರೆಯಿಂದ ಕಣಕ್ಕಿಳಿಯಲಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನಿಂದ ಶಾಂತಲಾ ದಾಮ್ಲೆ, ಸಿ.ವಿ. ರಾಮನ್ ನಗರ ಕ್ಷೇತ್ರದಿಂದ ಮೋಹನ್ ದಾಸರಿ ಸ್ಪರ್ಧಿಸಲಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಆಮ್ ಆದ್ಮಿ ಪಾರ್ಟಿಯು ಇಂದು ದೇಶದ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಕ್ಷವಾಗಿದ್ದು, ಅನೇಕ ರಾಜ್ಯಗಳಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಲು ಮತ್ತು ಗೆಲ್ಲಲು ಸಮರ್ಥವಾಗಿದೆ ಎಂದು ಹೇಳಿದರು.
ಸಾಮಾನ್ಯ ಹಿನ್ನೆಲೆಯ ಪ್ರಾಮಾಣಿಕ ಜನರನ್ನು ನಾವು ರಾಜಕೀಯಕ್ಕೆ ಕರೆತಂದಿದ್ದೇವೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಿದ್ದೇವೆ. ಜಯಗಳಿಸದ ನಂತರ ಶೇ. 100ರಷ್ಟು ಭ್ರಷ್ಟಾಚಾರರಹಿತ ಆಡಳಿತ ನೀಡುವುದು ಮಾತ್ರವಲ್ಲದೇ, ಪ್ರತಿಯೊಬ್ಬ ನಾಗರಿಕನಿಗಿರುವ ಕನಸು ಕಾಣುವ ಹಾಗೂ ಬೆಳೆಯುವ ಹಕ್ಕುಗಳನ್ನು ಕಾಪಾಡುವುದಾಗಿ ಇವರು ಖಚಿತ ಪಡಿಸಿದ್ದಾರೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಹೇಳಿದ್ದಾರೆ.
ನಮ್ಮದು ಯುವ ದೇಶವಾಗಿದ್ದು, ಯುವಕರು ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಧ್ವನಿ ಹೊಂದಿರಬೇಕು. ನಮ್ಮ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಯುವ ಸ್ಪರ್ಧಿಗಳು. ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಜನರು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು.
ನಮ್ಮ ರಾಜ್ಯದ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಕೃಷಿಯನ್ನು ಅವಲಂಬಿಸಿದೆ. ಆದರೆ, ನಮ್ಮ ವಿಧಾನಸಭೆಯಲ್ಲಿ ರೈತರಿಗೆ ಪ್ರಾತಿನಿಧ್ಯವಿಲ್ಲ. ನಮ್ಮ ಮೊದಲ ಪಟ್ಟಿಯಲ್ಲಿ 7 ರೈತರು ಇರುವುದು ನಮಗೆ ಖುಷಿ ತಂದಿದೆ.
ನಮ್ಮ ಜನಸಂಖ್ಯೆಯ ಶೇ. 50ರಷ್ಟು ಮಹಿಳೆಯರು, ಮತ್ತು ಬೇರೆ ಪಕ್ಷಗಳು ಅವರನ್ನು ನಾಮನಿರ್ದೇಶನ ಮಾಡದ ಕಾರಣ ಮಹಿಳೆಯರಿಗೆ ಸಾರ್ವಜನಿಕ ಹುದ್ದೆಯನ್ನು ಪಡೆಯುವುದು ಕಷ್ಟವಾಗಿದೆ. ನಮ್ಮ ಮೊದಲ ಪಟ್ಟಿಯಲ್ಲಿ 7 ಮಹಿಳೆಯರಿದ್ದಾರೆ. ಮುಂದಿನ ಪಟ್ಟಿಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇರುತ್ತಾರೆ ಎಂದು ಹೇಳಿದರು.
ನಮ್ಮ ರಾಜ್ಯದ ಜನರಿಗೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಲು ಸಾಮಾಜಿಕ ಕಾರ್ಯಕರ್ತರು ಎಎಪಿಯನ್ನು ಒಂದು ವೇದಿಕೆಯಾಗಿ ದೇಶಾದ್ಯಂತ ಸಾಮಾಜಿಕ ಕಾರ್ಯಕರ್ತರು ಹೆಚ್ಚಾಗಿ ನೋಡುತ್ತಾರೆ. ನಮ್ಮ ಮೊದಲ ಪಟ್ಟಿಯಲ್ಲಿ 5 ಸಾಮಾಜಿಕ ಕಾರ್ಯಕರ್ತರು ಇದ್ದಾರೆ ಎಂದು ವಿವರಿಸಿದರು.
-----------------------------
ಎಎಪಿ ಅಭ್ಯರ್ಥಿಗಳ ಪಟ್ಟಿ
ತೇರದಾಳ - ಅರ್ಜುನ ಹಲಗಿಗೌಡರ
ಬಾದಾಮಿ - ಶಿವರಾಯಪ್ಪ ಜೋಗಿನ
ಬಾಗಲಕೋಟೆ - ರಮೇಶ ಬದ್ನೂರ
ಅಥಣಿ - ಸಂಪತ್ ಕುಮಾರ ಶೆಟ್ಟಿ
ಬೈಲಹೊಂಗಲ - ಬಿ. ಎಂ. ಚಿಕ್ಕನಗೌಡರ
ರಾಮದುರ್ಗ - ಮಲ್ಲಿಕಜಾನ್ ನದಾಫ
ಹುಬ್ಬಳ್ಳಿ-ದಾರವಾಡ ಪೂರ್ವ - ಬಸವರಾಜ ಎಸ್ ತೇರದಾಳ
ಹುಬ್ಬಳ್ಳಿ-ದಾರವಾಡ ಕೇಂದ್ರ - ವಿಕಾಸ ಸೊಪ್ಪಿನ
ಕಲಘಟಗಿ - ಮಂಜುನಾಥ ಜಕ್ಕಣ್ಣವರ
ರೋಣ - ಆನೇಕಲ್ ದೊಡ್ಡಯ್ಯ
ಬ್ಯಾಡಗಿ - ಎಂ. ಎನ್. ನಾಯಕ
ರಾಣೆಬೆನ್ನೂರು - ಹನುಮಂತಪ್ಪ ಕಬ್ಬಾರ
ಬಸವಕಲ್ಯಾಣ - ದೀಪಕ ಮಲಗಾರ
ಹುಮನಾಬಾದ - ಬ್ಯಾಂಕ್ ರೆಡ್ಡಿ
ಬೀದರ ದಕ್ಷಿಣ - ನಸೀಮುದ್ದಿನ್ ಪಟೇಲ
ಭಾಲ್ಕಿ - ತುಕಾರಾಮ ನಾರಾಯಣರಾವ್ ಹಜಾರೆ
ಔರಾದ - ಬಾಬುರಾವ ಅಡ್ಕೆ
ಗುಲ್ಬರ್ಗ ಗ್ರಾಮೀಣ - ಡಾ. ರಾಘವೇಂದ್ರ ಚಿಂಚನಸೂರ
ಗುಲ್ಬರ್ಗ ದಕ್ಷಿಣ - ಸಿದ್ದರಾಮ ಅಪ್ಪಾರಾವ ಪಾಟೀಲ
ಗುಲ್ಬರ್ಗ ಉತ್ತರ - ಸಯ್ಯದ್ ಸಜ್ಜಾದ್ ಅಲಿ
ಇಂಡಿ - ಗೋಪಾಲ ಆರ್ ಪಾಟೀಲ
ಗಂಗಾವತಿ - ಶರಣಪ್ಪ ಸಜ್ಜಿಹೊಲ
ರಾಯಚೂರು - ಗ್ರಾಮೀಣ ಡಾ. ಸುಭಾಶಚಂದ್ರ ಸಾಂಭಾಜಿ
ರಾಯಚೂರು - ಡಿ. ವೀರೇಶ ಕುಮಾರ ಯಾದವ
ಮಾನ್ವಿ - ರಾಜಾ ಶಾಮಸುಂದರ ನಾಯಕ
ಲಿಂಗಸುಗೂರು - ಶಿವಪುತ್ರ ಗಾಣದಾಳ
ಸಿಂಧನೂರು - ಸಂಗ್ರಾಮ ನಾರಾಯಣ ಕಿಲ್ಲೇದ
ವಿಜಯನಗರ - ಡಿ. ಶಂಕರದಾಸ
ಕೂಡ್ಲಿಗಿ - ಶ್ರೀನಿವಾಸ ಎನ್
ಹರಪನಹಳ್ಳಿ - ನಾಗರಾಜ ಎಚ್
ಚಿತ್ರದುರ್ಗ - ಜಗದೀಶ ಬಿ. ಇ
ಜಗಳೂರು - ಗೋವಿಂದರಾಜು
ಹರಿಹರ - ಗಣೇಶಪ್ಪ ದುರ್ಗದ
ದಾವಣಗೆರೆ ಉತ್ತರ - ಶ್ರೀಧರ ಪಾಟೀಲ
ತುರುವೇಕೆರೆ - ಟೆನ್ನಿಸ್ ಕೃಷ್ಣ
ಕುಣಿಗಲ್ - ಜಯರಾಮಯ್ಯ
ಗುಬ್ಬಿ - ಪ್ರಭುಸ್ವಾಮಿ
ಸಿರಾ - ಶಶಿಕುಮಾರ್
ಪಾವಗಡ - ರಾಮಾಂಜನಪ್ಪ ಎನ್
ಶೃಂಗೇರಿ - ರಾಜನ್ ಗೌಡ ಎಚ್.ಎಸ್
ಹಾಸನ - ಅಗಿಲೆ ಯೋಗೀಶ್
ಭದ್ರಾವತಿ - ಆನಂದ
ಶಿವಮೊಗ್ಗ - ನೇತ್ರಾವತಿ ಟಿ
ಸಾಗರ - ಕೆ. ದಿವಾಕರ
ಮೂಡಬಿದ್ರಿ - ವಿಜಯನಾಥ ವಿಠಲ ಶೆಟ್ಟಿ
ಮಂಗಳೂರು ನಗರ ದಕ್ಷಿಣ - ಸಂತೋಷ್ ಕಾಮತ
ಸುಳ್ಯ - ಸುಮನಾ
ಕಾರ್ಕಳ - ಡ್ಯಾನಿಯಲ್
ಶಿರಸಿ - ಹಿತೇಂದ್ರ ನಾಯಕ
ಮಳವಳ್ಳಿ - ಬಿಸಿ ಮಹದೇವಸ್ವಾಮಿ
ಮಂಡ್ಯ - ಬೊಮ್ಮಯ್ಯ
ಪಿರಿಯಾಪಟ್ಟಣ - ರಾಜಶೇಖರ್ ದೊಡ್ಡಣ್ಣ
ಚಾಮರಾಜ - ಮಾಲವಿಕಾ ಗುಬ್ಬಿವಾಣಿ
ನರಹಿಂಹರಾಜ - ಧರ್ಮಶ್ರೀ
ಟಿ. ನರಸಿಪುರ - ಸಿದ್ದರಾಜು
ಮಾಗಡಿ - ರವಿಕಿರಣ್ ಎಂ.ಎನ್
ರಾಮನಗರ - ನಂಜಪ್ಪ ಕಾಳೇಗೌಡ
ಕನಕಪುರ - ಪುಟ್ಟರಾಜು ಗೌಡ
ಚನ್ನಪಟ್ಟಣ - ಶರತ್ ಚಂದ್ರ
ದೇವನಹಳ್ಳಿ - ಶಿವಪ್ಪ ಬಿ.ಕೆ
ದೊಡ್ಡಬಳ್ಳಾಪುರ - ಪುರುಷೋತ್ತಮ
ನೆಲಮಂಗಲ - ಗಂಗಬೈಲಪ್ಪ ಬಿ.ಎಂ
ಬಾಗೇಪಲ್ಲಿ - ಮಧುಸೀತಪ್ಪ
ಚಿಂತಾಮಣಿ - ಸಿ. ಬೈರೆಡ್ಡಿ
ಕೊಲಾರ್ ಗೋಲ್ಡ್ ಫೀಲ್ಡ್ - ಆರ್. ಗಗನ ಸುಕನ್ಯ
ಮಾಲೂರು - ರವಿಶಂಕರ್ ಎಂ
ದಾಸರಹಳ್ಳಿ - ಕೀರ್ತನ್ ಕುಮಾರ
ಮಹಾಲಕ್ಷ್ಮಿ ಬಡಾವಣೆ - ಶಾಂತಲಾ ದಾಮ್ಲೆ
ಮಲ್ಲೇಶ್ವರ - ಸುಮನ್ ಪ್ರಶಾಂತ್
ಹೆಬ್ಬಾಳ - ಮಂಜುನಾಥ ನಾಯ್ಡು
ಪುಲಕೇಶಿನಗರ - ಸುರೇಶ್ ರಾಥೋಡ್
ಸಿ.ವಿ. ರಾಮನ್ ನಗರ - ಮೋಹನ ದಾಸರಿ
ಶಿವಾಜಿನಗರ - ಪ್ರಕಾಶ್ ನೆಡುಂಗಡಿ
ಶಾಂತಿನಗರ - ಕೆ ಮಥಾಯ್
ರಾಜಾಜಿನಗರ - ಬಿಟಿ ನಾಗಣ್ಣ
ವಿಜಯನಗರ - ಡಾ ರಮೇಶ್ ಬೆಲ್ಲಂಕೊಂಡ
ಚಿಕ್ಕಪೇಟೆ - ಬ್ರಿಜೇಶ್ ಕಾಳಪ್ಪ
ಪದ್ಮನಾಭನಗರ - ಅಜಯ್ ಗೌಡ
ಬಿ.ಟಿ.ಎಂ ಬಡಾವಣೆ - ಶ್ರೀನಿವಾಸ್ ರೆಡ್ಡಿ
ಬೊಮ್ಮನಹಳ್ಳಿ - ಸೀತಾರಾಮ್ ಗುಂಡಪ್ಪ