Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಚಾಲನೆ ಉಪ್ಪುು ಬಳಕೆ ಜಾಗೃತಿಗೆ ತಾಂತ್ರಿಿಕ ಸಲಹಾ ಸಮಿತಿ ರಚನೆ

ಸುದ್ದಿಮೂಲ ವಾರ್ತೆ ಬೆಂಗಳೂರು, ಅ.09:
ಸಾಂಕ್ರಾಾಮಿಕವಲ್ಲದ ರೋಗಗಳಿಗೆ ಕಾರಣವಾಗಿರುವ ಅತೀ ಉಪ್ಪುು ಸೇವನೆ ಪ್ರಮಾಣ ರಾಜ್ಯದಲ್ಲಿ ಕಡಿಮೆ ಮಾಡುವ ನಿಟ್ಟಿಿನಲ್ಲಿ ಕಾರ್ಯಕ್ರಮ ರೂಪಿಸಲು ಅಸ್ತಿಿತ್ವಕ್ಕೆೆ ಬಂದಿರುವ ತಾಂತ್ರಿಿಕ ಸಲಹಾ ಸಮಿತಿಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಾಟಿಸಿದರು.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಾಲಯದಲ್ಲಿ ಗುರುವಾರ ತಾಂತ್ರಿಿಕ ಸಲಹಾ ಸಮಿತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವಿಡಿಯೋ ಸಂದೇಶ ರವಾಸುವ ಮೂಲಕ ಚಾಲನೆ ನೀಡಿದರು.
ಸಾರ್ವಜನಿಕ ಆರೋಗ್ಯ ಕಾಪಾಡುವ ನಿಟ್ಟಿಿನಲ್ಲಿ ಕಾಂಗ್ರೆೆಸ್ ಸರ್ಕಾರ ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸಾಂಕ್ರಾಾಮಿಕ ವಲ್ಲದ ರೋಗಗಳನ್ನು ತಡೆಯುವ ನಿಟ್ಟಿಿನಲ್ಲಿ ಉಪ್ಪುು ಸೇವನೆ ಪ್ರಮಾಣ ಕಡಿಮೆ ಮಾಡಲು ತಾಂತ್ರಿಿಕ ಸಲಹಾ ಗುಂಪು ಅಸ್ತಿಿತ್ವಕ್ಕೆೆ ಬರುತ್ತಿಿರುವುದು ಸಂತಸ ತಂದಿದೆ ಎಂದರು.
ರಾಜೀವ್‌ಗಾಂಧಿ ಆರೋಗ್ಯ ವಿವಿ ಆರೋಗ್ಯ ಕರ್ನಾಟಕ ಸೃಷ್ಟಿಿಸಲು ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಿಕೊಂಡಿದೆ. ಮಾದಕ ವಸ್ತು ಮುಕ್ತ ಕರ್ನಾಟಕ ಜಾಗೃತ ಅಭಿಯಾನವನ್ನು ರಾಜ್ಯದಲ್ಲಿ ಕಾರ್ಯಗತಗೊಂಡಿದೆ. ವಿಶ್ವದ ದೊಡ್ಡ ಆರೋಗ್ಯ ವಿವಿ ಜನರ ಆರೋಗ್ಯ ಕಾಪಾಡುವ ಜನಪರ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ಮುಂಚೂಣಿಯಲ್ಲಿ ಇರುತ್ತದೆ. ಸಾಂಕ್ರಾಾಮಿಕವಲ್ಲದ ರೋಗಗಳ ತಡೆಗಟ್ಟುವ ನಿಟ್ಟಿಿನಲ್ಲಿ ಜನರ ದೈನಂದಿನ ಜೀವನದಲ್ಲಿ ಉಪ್ಪುು ಬಳಕೆ ಕಡಿಮೆ ಮಾಡುವ ಬಗ್ಗೆೆ ತಾಂತ್ರಿಿಕ ಸಲಹಾ ಸಮಿತಿ ಕಾರ್ಯಗತಗೊಳಿಸುವ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.
ಹಾಲ್ಟ್ ಸಾಲ್ಟ್ ಹೆಸರಿನಲ್ಲಿ ರಾಜ್ಯದಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗುವುದು, ಇದನ್ನು ನಿರಂತರವಾಗಿ ಮುಂದುವರೆಸುವ ಜತೆಗೆ ಸರ್ಕಾರದ ಹಂತದಲ್ಲಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಲು ಆರೋಗ್ಯ ವಿವಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ರೀಸಾಲ್ವ ಟು ಸೇವ್ ಲೈವ್ಸ್ ಸಂಸ್ಥೆೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಸಯ್ಯದ್ ಇಮ್ರಾಾನ್ ಾರೂಕ್ ಮಾತನಾಡಿ, ಸಾಂಕ್ರಾಾಮಿಕ ವಲ್ಲದ ರೋಗಗಳನ್ನು ತಡೆಯಲು ಉಪ್ಪುು ಬಳಕೆ ಪ್ರಮಾಣ ಪರಿಣಾಮಕಾರಿ ಕ್ರಮವಾಗಿದೆ. ಸಾಂಕ್ರಾಾಮಿಕವಲ್ಲದ ರೋಗಗಳಿಗೆ ಚಿಕಿತ್ಸೆೆ ನೀಡುವ ಬದಲಿಗೆ ಆರಂಭದಲ್ಲಿಯೇ ಅವನ್ನು ತಡೆಗಟ್ಟುವ ಉಪ ಕ್ರಮಗಳಿಗೆ ಒತ್ತು ನೀಡಬೇಕಿದೆ ಎಂದು ಹೇಳಿದರು.
ಹಸಿರು ಗಿಡಕ್ಕೆೆ ನೀರು ಎರೆಯುವ ಮೂಲಕ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಾಲಯ ಉಪ ಕುಲಪತಿ ಡಾ. ಭಗವಾನ್ ಬಿ.ಸಿ. ಅವರು ತಾಂತ್ರಿಿಕ ಸಲಹಾ ಗುಂಪಿಗೆ ಚಾಲನೆ ನೀಡಿದರು.
ಸಮಿತಿಯಲ್ಲಿ ಯಾರು ಇದ್ದಾರೆ
ರಾಜ್ಯದಲ್ಲಿ ಸಾಂಕ್ರಾಾಮಿಕವಲ್ಲದ ರೋಗಗಳ ನಿಯಂತ್ರಣ ಮಾಡಿ ಜನರ ಅರೋಗ್ಯ ರಕ್ಷಣೆ ಮಾಡುವ ನಿಟ್ಟಿಿನಲ್ಲಿ ರಚನೆಯಾದ ತಾಂತ್ರಿಿಕ ಸಲಹಾ ಸಮಿತಿಯಲ್ಲಿ, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ರಿಜಿಸ್ಟ್ರಾಾರ್ ಡಾ. ರಿಯಾಜ್ ಬಾಷ, ಡಾ. ಯು.ಎಸ್. ವಿಶಾಲ್ ರಾವ್, ಜಯದೇವ ಹೃದಯೋಗ ಸಂಸ್ಥೆೆಯ ಡಾ. ಶ್ರೀಧರ್, ಕರ್ನಾಟಕ ಇನ್ಸ್ಟಿಿಟ್ಯೂಟ್ ಆ್ ಡಯಾಬಿಟಾಲಜಿಯ ಡಾ. ರವಿ, ಬಿಎಂಸಿಆರ್‌ಐ ನಿರ್ದೇಶಕಿ ಡಾ. ಕಾವ್ಯ, ಇಎಸ್ಐ ಆಸ್ಪತ್ರೆೆಯ ಮಕ್ಕಳ ತಜ್ಞ ಡಾ. ಸುನೀಲ್, ನ್ಯೂಟ್ರೀೀಷಿಯನಿಸ್ಟ್ ಡಾ. ಹೇಮಾ ಮಾಲಿನಿ, ಹೃದ್ರೋಗ ತಜ್ಞ ಡಾ. ಶ್ರೀನಿವಾಸ್, ಆರ್‌ಟಿಎಸ್ ಎಲ್ ನ ಡಾ. ಮಣಿಕಾ ಶರ್ಮಾ, ಡಾ. ಪ್ರಿಿಯಾ ನಂದಿಮಠ್, ಡಾ. ಪೃತಾ ದೇಶಪಾಂಡೆ ಹಂದಿಗೋಳ್ , ಡಾ. ಚಂದ್ರಶೇಖರ್ ಕೊಟ್ಟಗಿ, ಐಪಿಎಚ್ ನ ಡಾ. ಉಪೇಂದ್ರ ಭೋಜಾನಿ, ಪದ್ಮಶ್ರೀ ಕಾಲೇಜಿನ ಡಾ. ವೆಂಕಟೇಶ್, ವಿಎಸ್ ಡಿ ನ ನಿರ್ದೇಶಕ ಅಮಿತ್ ಕಾರ್ಣಿಕ, ಡಾ. ವೈಷ್ಣವಿ ಭಟ್ ಮತ್ತಿಿತರರು ಈ ಸಮಿತಿಯಲ್ಲಿದ್ದಾರೆ.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ