Web Stories
Suddimoola News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸನಾತನ ಧರ್ಮದ ಬಗ್ಗೆ ಸ್ಪಷ್ಠತೆ ನೀಡುವ ಗಂಡಸ್ತನ ಸಿದ್ದಾರಾಮಯ್ಯಗಿಲ್ಲ:ಸಂಗಣ್ಣ ಕರಡಿ

ಸನಾತನ ಧರ್ಮದ ಬಗ್ಗೆ ಸ್ಪಷ್ಠತೆ ನೀಡುವ ಗಂಡಸ್ತನ ಸಿದ್ದಾರಾಮಯ್ಯಗಿಲ್ಲ:ಸಂಗಣ್ಣ ಕರಡ

ಸುದ್ದಿಮೂಲವಾರ್ತೆ

ಕೊಪ್ಪಳ,ಸೆ.08: ಸನಾತನ ಧರ್ಮದ ಕುರಿತು ತಮ್ಮ ನಿಲುವು ಏನು ಎಂದು ಹೇಳುವ ಗಂಡಸ್ತನ ಸಿಎಂ ಸಿದ್ದರಾಮಯ್ಯಗೆ ಇಲ್ಲ ಎಂದು ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಅವರು ಇಂದು ಕೊಪ್ಪಳದಲ್ಲಿ ರಾಜ್ಯ ಸರಕಾರದ ವೈಫಲ್ಯದ ವಿರುದ್ಧ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದರಲ್ಲಿ ಮುಳುಗಿದ್ದಾರೆ.ಇವರಿಗೆ ಯಾವುದೇ ಒಂದು ವಿಷನ್‌ ಇಲ್ಲ ಎಂದರು.

ಸನಾತನ ಧರ್ಮದ ಕುರಿತು ಜ್ಯೂನಿಯರ್‌ ಸ್ಟಾಲಿನ್‌ ಹೇಳಿಕೆ ಕುರಿತಂತೆ ತಮ್ಮ ನಿಲುವು ಏನು ಎಂದು ಸಿಎಂ ಸಿದ್ದರಾಮಯ್ಯಗೆ ಹೇಳಲು ಆಗುತ್ತಿಲ್ಲ

‌ಆದರೆ ೧೪೭ ಕೋಟಿ ಜನರಿಗೆ ಮೋದಿ ಅವರು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಮೋದಿ ಬಗ್ಗೆ ಮಾತನಾಡುತ್ತಾರೆ. ಸನಾತನ ಧರ್ಮದ ಕುರಿತು ತಮ್ಮ ನಿಲುವು ಏನು ಎಂದು ಹೇಳಲು ಗಂಡಸ್ತನವಿಲ್ಲ, ಕೆಪಾಸಿಟಿ ಇಲ್ಲ, ಅಸಹಾಯಕರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೋರಿಸುತ್ತಿದ್ದಾರೆ. ಸನಾತನ ಧರ್ಮ ಅಂದ್ರೆ ವಸುದೈವ ಕುಟುಂಬಕಂ ಎಂಬ ಹಿನ್ನೆಲೆಯುಳ್ಳ ಧರ್ಮ. ಇಂತಹ ಧರ್ಮದ ಬಗ್ಗೆ ಕಾಂಗ್ರೆಸ್‌ ನಾಯಕರಿಗೆ ಸ್ಪಷ್ಟತೆಯೂ ಇಲ್ಲ ಎಂದರು.

ಸನಾತನ ಧರ್ಮದ ವಿಚಾರವಾಗಿ ಮುಖ್ಯಮಂತ್ರಿ ಅವರದು ಉತ್ತರ ಇಲ್ಲ, ಪ್ರಧಾನಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ.ಪ್ರಧಾನಿಯವರು ಸಂವಿಧಾನ ಚೌಕಟ್ಟಿನಲ್ಲಿ ಉತ್ತರಿಸಿ ಎಂದಿದ್ದಾರೆ. ಇವರು ನಿಲುವು ಏನು ಎಂಬುವುದು ಸ್ಪಆದರುಪಡಿಸಿಲ್ಲ. ಇವರಿಗೆ ನಾಚಿಕೆ ಆಗಬೇಕು.ಮೊದಲು ನಿಮ್ಮ ನಿಲುವು ಏನೆಂಬುದು ಸ್ಪಷ್ಟಪಡಿಸಿ, ಆಮೇಲೆ ಪ್ರಧಾನಿ ಬಗ್ಗೆ ಮಾತಾಡಿ ಎಂದರು.

ರೈತರ ಬಗ್ಗೆ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿ ಅವರಿಗೆ ರೈತರ ಬಗ್ಗೆ ನೈತಿಕವಾದ ಕಾಳಜಿ ಇಲ್ಲ. ಕಾಂಗ್ರೆಸ್ ನವರ ಆರ್ಥಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ.ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ಖಂಡಿಸಿದರು.ಯಾವುದೇ ಒಬ್ಬ ರೈತ ಹಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳಲ್ಲ. ಇಲ್ಲಿಯವರೆಗೂ ಮಾಡಿಕೊಂಡಿಲ್ಲ, ಮುಂದೆಯೂ ಮಾಡಿಕೊಳ್ಳಲ್ಲ. ಅವರು ಕೂಡ ರೈತ ಕುಟುಂಬದವರು ರೈತರ ಬಗ್ಗೆ ಗೌರವ ಇರಲಿ.ಈ ತರಹದ ಹೇಳಿಕೆ ಸಚಿವರು ಕೊಡಬಾರದು ಎಂದರು.

ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲರನ್ನೂ ರೈತ ಎಂದು ಗುರುತಿಸಲು ಸಾಧ್ಯ ಇಲ್ಲ ಎಂದಿದ್ದರು.ಡಿಕೆ ಶಿವಕುಮಾರ್ ಅವರು ಮಾನವೀಯತೆಯನ್ನು ಕೂಡ ಬಿಟ್ಟಿದ್ದಾರೆ.ಆತ್ಮಹತ್ಯೆ ಮಾಡಿಕೊಂಡ ರೈತರನ್ನು ಗುರುತಿಸಲಾಗಲ್ಲ ಎಂದರೆ ನೀವು ಮತ್ಯಾರನ್ನು ಗುರುತಿಸುತ್ತೀರಿ.ಡಿಸಿಎಂ ಶಿವಕುಮಾರಗೆ ಪ್ರಶ್ನಿಸಿದರು. ರಿಪೋರ್ಟ್ ಆಧಾರದ ಮೇಲೆ ರೈತ ಆತ್ಮಹತ್ಯೆ ಎಂದು ಗುರುತಿಸಬೇಕು. ಈ ತರ ಹೇಳಿಕೆ ಕೊಡೋದನ್ನ ಶಿವಕುಮಾರ್ ನಿಲ್ಲಿಸಬೇಕು.ರೈತರನ್ನು ಹೇಗೆ ಗುರುತಿಸಬೇಕು ಅಂದ್ರೆ ಏನು ಅರ್ಥ ಎಂದು ಗರಂ ಆದರು.
Author
Suddi Moola
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶ್ರೀ ಶಂಕರಭಾರತಿ ಶಾಲೆಯ ವಾರ್ಷಿಕೋತ್ಸವ ಮಾರ್ಕ್‌ಸ್‌ ಕಾರ್ಡ್‌ಗಾಗಿ ಮಕ್ಕಳನ್ನು ತಯಾರು ಮಾಡಬೇಡಿ - ಬೆಳಗಲ್ಸಮಾಜ ಸೇವಾ ಮನೋಭಾವ ರೂಪಿಸಿಕೊಳ್ಳಿ - ಪ್ರೊ. ಶಿವಾನಂದ ಕೆಳಗಿನಮನಿಚನ್ನಪ್ಪ ಅವರಿಗೆ ರಾಜ್ಯಮಟ್ಟದ ಜ್ಯೋತಿಬಾ ಪುಲೆ ಪ್ರಶಸ್ತಿಜಿಲ್ಲಾ ಟಾಸ್‌‌ಕೆರ್ಸ್ ಸಮಿತಿ ಸಭೆ ‘ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಿ’ರಾಷ್ಟ್ರೀಯ ಹೆದ್ದಾರಿ ಪಕ್ಕದ ಜಮೀನುಗಳಿಗೆ ಹೋಗಲು ದಾರಿ ಮಾಡಿಕೊಡಲು ಆಗ್ರಹಜವಾಹರ ನವೋದಯ ವಿದ್ಯಾರ್ಥಿ ಪ್ರಜ್ವಲ್ ರಾಜ್ಯಕ್ಕೆ ಪ್ರಥಮಮುದಗಲ್ ಪಿಎಸ್‌ಐ ಸೇರಿ ಪೊಲೀಸರ ಅಮಾನತ್ತು ಮಾಡಲು ಒತ್ತಾಯಹುಲಿಕೇರಿ ಒತ್ತುವರಿಯಾಗಿದ್ದರೆ ಕ್ರಮ ಕೈಗೊಳ್ಳಲಿ - ಹಿಟ್ನಾಳಪಟ್ಟಣ ಸಹಕಾರ ಬ್ಯಾಾಂಕ್ ಮಹಾಮಂಡಳದ ನಿರ್ದೇಶಕರಿಗೆ ಡಿ.ಎಚ್.ಓ ಸನ್ಮಾನ ಗೆಳೆಯರ ಬಳಗದ ಬೆಂಬಲ, ನೌಕರರೊಂದಿಗಿನ ಒಳ್ಳೆಯ ಒಡನಾಟದಿಂದ ಉನ್ನತ ಸ್ಥಾನಮಾನಇಂದು ಗ್ರಾಮೀಣ ಭಾಗದ ವಿವಿಧ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ